ETV Bharat / bharat

ನಾಲ್ವರು ಮಕ್ಕಳು, ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ.. ಒಬ್ಬಳು ಬಚಾವ್​!! - Tamil Nadu labor killed wife childrens

ತಮಿಳುನಾಡಿನಲ್ಲಿ ಕಾರ್ಮಿಕನೊಬ್ಬ ತನ್ನ ಐವರು ಮಕ್ಕಳು ಮತ್ತು ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಂದು, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೀಕರ ಘಟನೆಯಲ್ಲಿ ಅದೃಷ್ಟವಶಾತ್​ ಓರ್ವ ಬಾಲಕಿ ಬದುಕುಳಿದಿದ್ದಾಳೆ.

Tamil Nadu labor killed wife childrens
ತಮಿಳುನಾಡಿನಲ್ಲಿ ಭೀಕರ ಹತ್ಯೆ
author img

By

Published : Dec 13, 2022, 1:51 PM IST

ತಿರುವಣ್ಣಾಮಲೈ(ತಮಿಳುನಾಡು): ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಮಿಕನೊಬ್ಬ ಕುಡಿದ ಅಮಲಿನಲ್ಲಿ ಪತ್ನಿ ಮತ್ತು ತನ್ನ ನಾಲ್ವರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿದ್ದಲ್ಲದೇ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದುರಂತ ನಡೆದಿದ್ದು, ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ. ಘಟನೆಯಲ್ಲಿ ಅದೃಷ್ಟವಶಾತ್​ ಓರ್ವ ಬಾಲಕಿ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿರುವಣ್ಣಾಮಲೈ ಜಿಲ್ಲೆಯ ಮೊಟ್ಟೂರು ನಿವಾಸಿಯಾಗಿದ್ದ ಕಾರ್ಮಿಕ ಪಳನಿ ಎಂಬಾತ ಇತ್ತೀಚೆಗೆ ಆರ್ಥಿಕವಾಗಿ ಜರ್ಝರಿತನಾಗಿದ್ದ. ಐದು ಮಕ್ಕಳ ಕೂಡು ಕುಟುಂಬ ನಡೆಸುವುದು ದುಸ್ತರವಾಗಿತ್ತು. ಈ ಕಾರಣಕ್ಕಾಗಿ ದಿನವೂ ಹೆಂಡತಿ, ಮಕ್ಕಳ ಜೊತೆ ಕಿತ್ತಾಡುತ್ತಿದ್ದ. ಸಂಸಾರದ ತಾಪತ್ರಯಕ್ಕೆ ರೋಸಿ ಹೋಗಿದ್ದ ಪಳನಿ ಇಂದು ಬೆಳಗ್ಗೆ ಕುಡಿದು ಬಂದು ಮನೆಯಲ್ಲಿದ್ದ ಪತ್ನಿಯನ್ನು ಕುಡುಗೋಲಿನಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಓರ್ವ ಪುತ್ರ ಸೇರಿದಂತೆ ನಾಲ್ವರು ಪುತ್ರಿಯರನ್ನೂ ಆಯುಧದಿಂದ ಕೊಚ್ಚಿದ್ದಾನೆ. ಬಳಿಕ ತಾನೂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಭಯಾನಕ ಘಟನೆಯಲ್ಲಿ ಅದೃಷ್ಟವಶಾತ್​ ಭೂಮಿಕಾ ಎಂಬ ಬಾಲಕಿ ತೀವ್ರ ಗಾಯಗೊಂಡು ರಕ್ತಸಿಕ್ತವಾಗಿ ಬದುಕುಳಿದಿದ್ದು, ತಕ್ಷಣವೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಮಿಕನ ಕಡುಕೋಪ, ಹತಾಶೆಗೆ ನಾಲ್ವರು ಮಕ್ಕಳು, ಪತ್ನಿ ಜೀವ ತೆತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ: ಜೊತೆಯಾಗಿ ಸಾಯಲು ನಿರ್ಧರಿಸಿದ್ದ ಜೋಡಿ.. ಹೆಣವಾಗಿದ್ದು ಮಾತ್ರ ಅವನೊಬ್ಬನೇ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.