ಶಿರಡಿ(ಅಹಮದ್‌ನಗರ): ಹೈದರಾಬಾದ್‌ನ ಸಾಯಿ ಭಕ್ತರಾದ ಡಾ ರಾಮಕೃಷ್ಣ ಅವರು ಸಾಯಿಬಾಬಾಗೆ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದಾರೆ. ಈ ಮೂಲಕ ಅವರ ಮೃತ ಪತ್ನಿ ರತ್ನಮ್ಮ ಅವರ ಆಸೆಯನ್ನು ಈಡೇರಿಸಿದ್ದಾರೆ. 742 ಗ್ರಾಂ ತೂಕ ಸುಮಾರು 40 ಲಕ್ಷ ರೂಪಾಯಿ ಬೆಲೆಬಾಳುವ ಕಿರೀಟವನ್ನು ಬಾಬಾಗೆ ಅರ್ಪಿಸಿದ್ದಾರೆ.
ದಾನ ಮಾಡಿದ ಕಿರೀಟವು ತುಂಬಾ ಆಕರ್ಷಕವಾಗಿದ್ದು, ವಜ್ರದ ಹರಳುಗಳಿಂದ ಕಿರೀಟವನ್ನು ಅಲಂಕರಿಸಲಾಗಿದೆ. ಮುಕುಟದ ಮಧ್ಯದಲ್ಲಿ ಓಂ ಎಂದು ಬರೆಸಿದ್ದಾರೆ. ಕಿರೀಟದ ಮೇಲೆ ನವಿಲುಗರಿ ಇಡಲಾಗಿದೆ. ಇಂದು ಮಧ್ಯಾಹ್ನದ ಆರತಿಯ ಸಮಯದಲ್ಲಿ ಸಾಯಿ ಬಾಬಾರವರ ವಿಗ್ರಹಕ್ಕೆ ಈ ಕಿರೀಟವನ್ನು ಇಟ್ಟು ಪೂಜಿಸಲಾಯಿತು.
ಪತ್ನಿಯ ಕೊನೆಯ ಆಸೆ: ಹೈದರಾಬಾದ್‌ನ ಸಾಯಿ ಭಕ್ತರಾದ ಡಾ.ರಾಮಕೃಷ್ಣ ಅವರು 1992ರಲ್ಲಿ ತಮ್ಮ ಪತ್ನಿ ಸಾಯಿಬಾಬಾ ದರ್ಶನಕ್ಕಾಗಿ ಶಿರಡಿಗೆ ಬಂದಿದ್ದೆವು. ಅಂದು ಬಂದಾಗ ಬಾಬಾಗೆ ಕಿರೀಟ ಕೊಡುವುದಾಗಿ ಪತ್ನಿ ಹರಸಿಕೊಂಡಿದ್ದಳು. ಆದರೆ, ಆ ಸಂದರ್ಭದಲ್ಲಿ ಹಣದ ಸಮಸ್ಯೆ ಇದ್ದ ಕಾರಣ ಕೀರೀಟ ಮಾಡಿಸಿರಲಿಲ್ಲ. ಅಷ್ಟರಲ್ಲಿ ರತ್ನಮ್ಮ ನಿಧನರಾದರು. ಆದರೆ, ಅವಳ ಆಸೆಯನ್ನು ಈಗ ಈಡೇರಿಸಿದ್ದೇನೆ ಎಂದು ರಾಮಕೃಷ್ಣ ಹೇಳುತ್ತಾರೆ.
ಇದನ್ನೂ ಓದಿ : ಛತ್ತೀಸ್‌ಗಢದಲ್ಲಿ ವಿಭಿನ್ನವಾಗಿ ಪ್ರತಿಭಟಿಸುತ್ತಿರುವ ಇಬ್ಬರು ವೃದ್ಧರು