ETV Bharat / bharat

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ : ಓರ್ವ ಕಾರ್ಮಿಕ ಸಾವು - blast occurred in the chemical compound mixture room of the factory

ವಿರುತ್ತುನಗರ ಜಿಲ್ಲೆ ಸತ್ತೂರು ಬ್ಲಾಕ್ ಕಥಾಲಂಪಟ್ಟಿ ಗ್ರಾಮದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಈ ಅಪಘಾತದಲ್ಲಿ ಓರ್ವ ಕಾರ್ಮಿಕ ಸಾವಿಗೀಡಾಗಿದ್ದಾನೆ. ಕಾರ್ಖಾನೆಯ ರಾಸಾಯನಿಕ ಸಂಯುಕ್ತ ಮಿಶ್ರಣ ಕೊಠಡಿಯಲ್ಲಿ ಸ್ಫೋಟ ಸಂಭವಿಸಿದೆ..

A fire accident at the sattur cracker factory claimed one life
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ
author img

By

Published : May 4, 2022, 7:41 PM IST

ವಿರುತ್ತುನಗರ (ತಮಿಳುನಾಡು) : ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಕಟ್ಟಡದ ಮಹಡಿಯ ಅವಶೇಷಗಳಡಿ ಸಿಲುಕಿ ಕಾರ್ಮಿಕನೋರ್ವ ಸಾವಿಗೀಡಾಗಿರುವ ಘಟನೆ ವಿರುತ್ತುನಗರದಲ್ಲಿ ನಡೆದಿದೆ. ವಿರುತ್ತುನಗರ ಜಿಲ್ಲೆಯ ಶಿವಕಾಶಿಯ ಶಿವಕಾಮಿಪುರಂನ ಪೆರಿಯ ಕರುಪ್ಪನ್ (57) ಮಾಲೀಕತ್ವದ 5 ಕೊಠಡಿಗಳ ಪಟಾಕಿ ಕಾರ್ಖಾನೆಯು ಸತ್ತೂರು-ಕಥಾಲಂಪಟ್ಟಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ..

ಸುಮಾರು 20 ಮಂದಿ ಕೆಲಸ ಮಾಡುವ ಕಾರ್ಖಾನೆಯಲ್ಲಿ ಸೋಲೈ ವಿಘ್ನೇಶ್ವರನ್ ಎಂಬ 26 ವರ್ಷದ ಕಾರ್ಮಿಕ ಬುಧವಾರ ಬೆಳಗ್ಗೆ ರಾಸಾಯನಿಕಗಳನ್ನು ತಯಾರಿಸುತ್ತಿದ್ದ. ಆಗ ರಾಸಾಯನಿಕ ಕಚ್ಚಾವಸ್ತುಗಳಲ್ಲಿ ಘರ್ಷಣೆ ಉಂಟಾಗಿ ಅದು ಸ್ಫೋಟಗೊಂಡಿದೆ.

ಸೋಲೈ ವಿಘ್ನೇಶ್ವರನ್ ನೆಲ ಅಂತಸ್ತಿನ ಕೊಠಡಿಯ ಅವಶೇಷಗಳಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಸಂಬಂಧ ಸತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಪೊಲೀಸ್​ ಅಧಿಕಾರಿಯಿಂದಲೇ ಅತ್ಯಾಚಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.