ಕಡಪಾ(ಆಂಧ್ರಪ್ರದೇಶ): ಕಂಠಪೂರ್ತಿ ಕುಡಿದ ನಶೆಯಲ್ಲಿ ತಂದೆಯೊಬ್ಬ ಏಳು ತಿಂಗಳ ಮಗುವಿನ ಕೊಲೆ ಮಾಡಿರುವ ಘಟನೆ ಕಡಪಾದ ಕೊಠಕೊಡುರುವಿನಲ್ಲಿ ನಡೆದಿದೆ.
ಅಲ್ಲಂ ವೆಂಕಟರಮಣ ಮತ್ತು ಶೇಷಮ್ಮ ದಂಪತಿಗೆ ಮೂವರು ಮಕ್ಕಳಿದ್ದಾರೆ. ವೆಂಕಟರಮಣ ಆಟೋ ಡ್ರೈವರ್ ಆಗಿದ್ದು, ಮದ್ಯಪಾನ ಸೇವನೆ ಮಾಡುವ ಚಟ ಹೊಂದಿದ್ದರು. ಇದು ಮೇಲಿಂದ ಮೇಲೆ ಗಂಡ-ಹೆಂಡತಿ ನಡುವಿನ ಜಗಳಕ್ಕೆ ಕಾರಣವಾಗುತ್ತಿತ್ತು.
ಇದನ್ನೂ ಓದಿ: 6 ಸಾವಿರ ಕೋಟಿ ರೂ. ವೆಚ್ಚದ 118 ಅರ್ಜುನ್ ಮಾರ್ಕ್ ಟ್ಯಾಂಕ್ ಅಭಿವೃದ್ಧಿಗೆ ರಕ್ಷಣಾ ಇಲಾಖೆ ಅನುಮತಿ!
ನಿನ್ನೆ ರಾತ್ರಿ ಕೂಡ ಇದೇ ವಿಚಾರವಾಗಿ ಇಬ್ಬರು ಜಗಳವಾಡಿದ್ದಾರೆ. ಮದ್ಯದ ಅಮಲಿನಲ್ಲಿದ್ದ ವೆಂಕಟರಮಣ ಏಳು ತಿಂಗಳ ಮಗುವನ್ನ ಹೊರಗೆ ಎಸೆದಿದ್ದಾನೆ. ತಕ್ಷಣವೇ ಅದನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.