ETV Bharat / bharat

Rich farmer: 1000 ಎಕರೆ ಜಮೀನಿನ ಮೇಲ್ವಿಚಾರಣೆಗೆ 7 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಖರೀದಿಗೆ ಮುಂದಾದ ರೈತ - ETV Bharat Kannada News

ಛತ್ತೀಸ್​ಗಢದ ಕೊಂಡಗಾಂವ್ ಜಿಲ್ಲೆಯ ರೈತ ರಾಜಾರಾಂ ತ್ರಿಪಾಠಿ ತಮ್ಮ 1000 ಎಕರೆ ಜಮೀನಿನ ಮೇಲ್ವಿಚಾರಣೆಗಾಗಿ ಸುಮಾರು 7 ಕೋಟಿ ಮೌಲ್ಯದ ಹೆಲಿಕಾಪ್ಟರ್​ ಖರೀದಿಗೆ ಮುಂದಾಗಿದ್ದಾರೆ.

ಹೆಲಿಕಾಪ್ಟರ್ ಖರೀದಿಗೆ ಮುಂದಾದ ರೈತ
ಹೆಲಿಕಾಪ್ಟರ್ ಖರೀದಿಗೆ ಮುಂದಾದ ರೈತ
author img

By

Published : Jul 3, 2023, 4:36 PM IST

ಚಾರ್ಲ(ಛತ್ತೀಸ್​ಗಢ): ಇತ್ತೀಚೆಗೆ ಹೊಲಗಳಿಗೆ ಕ್ರಿಮಿನಾಶಕ ಸಿಂಪಡಿಸಲು ಡ್ರೋನ್​ಗಳನ್ನು ಬಳಸುವುದು ಹೆಚ್ಚಿದೆ. ಅಲ್ಲದೇ ಇದರ ಉಪಯೋಗವನ್ನು ಮನಗಂಡಿರುವ ಕೆಲವು ರೈತರು ಇವುಗಳನ್ನು ಸ್ವಂತಕ್ಕೆ ಖರೀದಿಸುತ್ತಿದ್ದಾರೆ. ಆದರೆ ಛತ್ತೀಸ್‌ಗಢದ ರೈತರೊಬ್ಬರು ತಮ್ಮ ಜಮೀನಿನ ಮೇಲ್ವಿಚಾರಣೆಗೆ ಹೆಲಿಕಾಪ್ಟರ್ ಖರೀದಿಸಲು ಮುಂದಾಗಿದ್ದಾರೆ. ತೆಲಂಗಾಣದಿಂದ ಸುಮಾರು 300 ಕಿ. ಮೀ ದೂರದಲ್ಲಿರುವ ಕೊಂಡಗಾಂವ್ ಜಿಲ್ಲೆಯ ರಾಜಾರಾಂ ತ್ರಿಪಾಠಿ ತಮ್ಮ 1000 ಎಕರೆ ಜಮೀನಿನ ಮೇಲ್ವಿಚಾರಣೆಗಾಗಿ 7 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಖರೀದಿಸಲು ಹೊರಟಿದ್ದಾರೆ. ಈಗಾಗಲೇ ಹಾಲೆಂಡ್ ನ ರಾಬಿನ್ ಸನ್ ಕಂಪನಿಯ ಆರ್-44 ಮಾದರಿಯ (ನಾಲ್ಕು ಸೀಟುಗಳು) ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ. ಕೀಟನಾಶಕಗಳ ಸಿಂಪಡಣೆ ಮತ್ತು ಇತರ ಕೃಷಿ ಕೆಲಸಗಳಿಗೆ ಇದನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಯುರೋಪ್ ರೈತರಿಂದ ಪ್ರೇರಣೆಗೊಂಡ ರಾಜಾರಾಂ: ಕೃಷಿಕ ರಾಜಾರಾಂ ಅವರು ಇಂಗ್ಲೆಂಡ್ ಮತ್ತು ಜರ್ಮನಿಗೆ ಭೇಟಿ ನೀಡಿದಾಗ, ಅವರು ರಸಗೊಬ್ಬರಗಳನ್ನು ಸಿಂಪಡಿಸಲು ಹೆಲಿಕಾಪ್ಟರ್‌ಗಳನ್ನು ಬಳಸುವುದನ್ನು ನೋಡಿದ್ದರು. ಹೆಲಿಕಾಪ್ಟರ್​ನಿಂದ ಉತ್ತಮ ಫಲಿತಾಂಶ ಬರುತ್ತಿದೆ ಎಂದು ತಿಳಿದ ಬಳಿಕ ಖರೀದಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದರು. ಅವರ ಮಗ ಮತ್ತು ಕಿರಿಯ ಸಹೋದರನನ್ನು ಪೈಲಟ್ ತರಬೇತಿಗಾಗಿ ಉಜ್ಜಯಿನಿಯ ಏವಿಯೇಷನ್ ಅಕಾಡೆಮಿಗೆ ಕಳುಹಿಸಲಿದ್ದೇನೆ ಎಂದು ತಿಳಿಸಿದ್ದಾರೆ.

ಬ್ಯಾಂಕ್ ಕೆಲಸ ಬಿಟ್ಟು ರೈತರಾದ ತ್ರಿಪಾಠಿ : ಬಸ್ತಾರ್​ನಲ್ಲಿ (ಕೊಂಡಗಾಂವ್ ಜಿಲ್ಲೆಯಿಂದ ಬೇರ್ಪಟ್ಟ) ರೈತ ಕುಟುಂಬದಲ್ಲಿ ಜನಿಸಿದ ರಾಜಾರಾಂ 1998 ರಲ್ಲಿ ತಮ್ಮ ಬ್ಯಾಂಕ್ ಉದ್ಯೋಗವನ್ನು ತೊರೆದು ಕೃಷಿಕರಾದರು. ಪ್ರಸ್ತುತ ಬಸ್ತಾರ್ ಮತ್ತು ಕೊಂಡಗಾಂವ್ ಜಿಲ್ಲೆಗಳಲ್ಲಿ ಬಿಳಿ ಕಡಲೆಕಾಯಿ ಮತ್ತು ಕರಿಮೆಣಸು ಹೆಚ್ಚಾಗಿ ಬೆಳೆಯಲಾಗುತ್ತಿದೆ ಮತ್ತು ಗಿಡಮೂಲಿಕೆ ಸಂಸ್ಥೆಯನ್ನು ನಡೆಸಲಾಗುತ್ತಿದೆ. 400 ಆದಿವಾಸಿ ಕುಟುಂಬಗಳ ನೆರವಿನಿಂದ 1000 ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಇದುವರೆಗೆ ರಾಷ್ಟ್ರಮಟ್ಟದಲ್ಲಿ ನಾಲ್ಕು ಬಾರಿ ಉತ್ತಮ ರೈತ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಕಂಪನಿಯ ಮೂಲಕ ವರ್ಷಕ್ಕೆ 25 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ. ಕರಿಮೆಣಸು ಯುರೋಪ್ ಮತ್ತು ಅಮೆರಿಕಕ್ಕೆ ರಫ್ತಾಗುತ್ತಿದೆ.

ಗದ್ದೆಗೆ ಔಷಧ ಸಿಂಪಡಿಸಲು ಬಂತು ಡ್ರೋನ್: ಇನ್ನೊಂದೆಡೆ ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಯಶಸ್ಸು ಕಂಡಿರುವ ಡ್ರೋನ್ ಇದೀಗ ಕೃಷಿ ಕ್ಷೇತ್ರಕ್ಕೂ ಬಂದಿವೆ. ಬೃಹತ್ ಗಾತ್ರದ ಡ್ರೋಣ್​ಗೆ (Fertilizer spray Drone) ಹತ್ತಾರು ಲೀಟರ್ ಸಾಮರ್ಥ್ಯದ ರಾಸಾಯನಿಕ ಔಷಧ ತುಂಬಿದ ಟ್ಯಾಂಕ್​ಗೆ ಅಳವಡಿಸಿ, ಭತ್ತದ ಗದ್ದೆಯಲ್ಲಿ ಹಾಯಿಸಿ ಔಷಧ ಸಿಂಪಡಿಸುವ ತಂತ್ರಜ್ಞಾನವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಅದರಂತೆಯೇ ಹತ್ತಾರು ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಬೆಂಗಳೂರಿನ ಜಕ್ಕೂರು ಸಮೀಪ ಇರುವ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ 2021ರ ಕೃಷಿ ಮೇಳ (ನವೆಂಬರ್ 11) ರಂದು ನಡೆದಿತ್ತು. ಇಲ್ಲಿನ ಹಲವು ವೈಶಿಷ್ಟ್ಯಗಳಲ್ಲಿ ಡ್ರೋನ್​ ಸಹ ಒಂದು. ಐದಾರು ಕಂಪನಿಗಳು ತಮ್ಮ ಆವಿಷ್ಕಾರವನ್ನು ಇಲ್ಲಿ ಗ್ರಾಹಕರ ಆಯ್ಕೆಗೆ ಮುಂದಿಟ್ಟಿದ್ದರು.

ಇದನ್ನೂ ಓದಿ: ಗದ್ದೆಗೆ ಔಷಧ ಸಿಂಪಡಿಸಲು ಬಂತು ಡ್ರೋನ್: ಎಕರೆ ಭೂಮಿಗೆ ಐದೇ ನಿಮಿಷ ಸಾಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.