ಇಂಫಾಲ್: ಮಣಿಪುರದ ಇಂಫಾಲ್‌ನ ನಿವಾಸಿ 4 ನೇ ತರಗತಿಯ ಕುನಾಲ್ ಶ್ರೇಷ್ಠಗೆ ಫುಟ್ಬಾಲ್ ಆಡಲು ಬಹಳ ಇಷ್ಟ. ಆದರೆ, ಇರುವುದು ಒಂದೇ ಕಾಲು. ಬ್ಯಾಲೆನ್ಸಿಂಗ್ ಮಾಡುವಾಗ ಕಷ್ಟವಾಗುತ್ತೆ. ಯಾಕಂದ್ರೆ ಈತ ವಿಶೇಷ ಚೇತನ. ಆದರೂ ಛಲಬಿಡದೇ ಫುಟ್ಬಾಲ್ ಆಡುವುದನ್ನು ಮುಂದುವರಿಸಿದ್ದಾನೆ.
ಮೊದ ಮೊದಲು ಫುಟ್ಬಾಲ್ ಆಡಲು ಆರಂಭಿಸಿದಾಗ ಭಯವಾಯ್ತು. ಆದರೆ, ಈಗ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿದೆ ಅಂತಾನೆ. ಒಂದೇ ಕಾಲಿನಲ್ಲಿ ಫುಟ್ಬಾಲ್ ಆಡಬಲ್ಲ ಈ ಪೋರ. ಆಟವಾಡಲು ನನಗೆ ನನ್ನ ಗೆಳೆಯರು ಬಹಳ ಸಹಕಾರ ನೀಡುತ್ತಾರೆ. ಶೀಘ್ರದಲ್ಲೇ ನಾನು ಗೋಲು ಹೊಡೆಯುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾನೆ ಕುನಾಲ್.
ಈ ಕುರಿತು ಪ್ರತಿಕ್ರಿಯಿಸಿದ ಕುನಾಲ್ ತಾಯಿ ನನ್ನ ಮಗನಿಗೆ ಹುಟ್ಟಿನಿಂದಲೇ ಒಂದು ಕಾಲು ಇಲ್ಲ, ಆದರೂ ಅವನಿಗೆ ತಾನು ಅಂಗವಿಕಲ ಎಂಬ ಕೀಳರಿಮೆ ಬರದಂತೆ ಬೆಳೆಸುತ್ತಿದ್ದೇವೆ. ಅವನು ಇರುವ ಒಂದೇ ಕಾಲಿನಲ್ಲೇ ಸೈಕಲ್ ಓಡಿಸುತ್ತಾನೆ ಎಂದು ತಿಳಿಸಿದ್ರು.