ETV Bharat / bharat

ರಾಹುಲ್​ ಗಾಂಧಿ ವಿರುದ್ಧ ದಾಖಲಾಯ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ - ದೆಹಲಿ ಬಾಲಕಿ ರೇಪ್​ ಪ್ರಕರಣ

ಪೋಕ್ಸೋ ಕಾಯ್ದೆಯಡಿ ರಾಹುಲ್​ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ ಅವರನ್ನ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

Rahul Gandhi
Rahul Gandhi
author img

By

Published : Aug 27, 2021, 10:12 PM IST

ಮಧುರೈ(ತಮಿಳುನಾಡು): ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ವಿರುದ್ಧ ಮಧುರೈ ಕೋರ್ಟ್​​ನಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇದೀಗ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ. ಮಧುರೈ ಜಿಲ್ಲಾ ಕೋರ್ಟ್​​ನಲ್ಲಿ ಮೊಹಮ್ಮದ್​ ರಸ್ವಿ ಎಂಬ ವಕೀಲರು ಈ ಪ್ರಕರಣ ದಾಖಲು ಮಾಡಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ಸಂಸದರಾದ ಮಾಣಿಕ್ಕಂ ಟ್ಯಾಗೋರ್ ಹಾಗೂ ಕೆ.ಸಿ. ವೇಣುಗೋಪಾಲ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಏನಿದು ಪ್ರಕರಣ!?

ಕಳೆದ ತಿಂಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸೆಕ್ಷನ್​​ 302, 376 ಮತ್ತು 506 ಅಡಿ ದೂರು ದಾಖಲಾಗಿತ್ತು.

ಸಂತ್ರಸ್ತೆ ಕುಟುಂಬಸ್ಥರ ಭೇಟಿ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ ಸಾಂತ್ವನ ಹೇಳಿದ ಬಳಿಕ ಅವರೊಂದಿಗಿನ ಫೋಟೋ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನ ಕಾಂಗ್ರೆಸ್​​ ಸಂಸದ ಟ್ಯಾಗೋರ್ ಹಾಗೂ ವೇಣುಗೋಪಾಲ ಕೂಡ ಹಂಚಿಕೊಂಡಿದ್ದರು. ಇದು ಹೆಚ್ಚಿನ ವಿವಾದಕ್ಕೆ ಕಾರಣವಾಗಿತ್ತು. ತದನಂತರ ರಾಹುಲ್ ಗಾಂಧಿ ಫೋಟೋ ಡಿಲೀಟ್ ಮಾಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ರಾಹುಲ್​ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಸ್ಪಷ್ಟೀಕರಣ ನೀಡುವಂತೆ ಕೇಳುವ ಸಾಧ್ಯತೆ ಇದೆ.

ಇದನ್ನೂ ಓದಿರಿ: ತಾಲಿಬಾನ್​ ಮುಖ್ಯಸ್ಥನ ಭೇಟಿಯಾದ ಮಸೂದ್ ಅಜರ್​​.. ಕಾಶ್ಮೀರ ವಶಕ್ಕೆ ಸಹಾಯ?

ಬಾಲಕಿ ಪೋಷಕರ ಭೇಟಿ ಮಾಡಿದ್ದ ರಾಹುಲ್ ಗಾಂಧಿ, ಬಾಲಕಿ ಈ ದೇಶದ ಮಗಳು. ಅವಳ ಸಾವಿಗೆ ನ್ಯಾಯ ಸಿಗಬೇಕು. ಆಕೆಯ ಪಾಲಕರ ಜತೆ ನಾನು ಸದಾ ನಿಲ್ಲುತ್ತೇನೆ ಎಂದು ಬರೆದು, ಫೋಟೋ ಶೇರ್ ಮಾಡಿದ್ದರು. ಆದರೆ, ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಫೋಟೋ ಡಿಲೀಟ್ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.