ETV Bharat / bharat

ಇಲ್ಲಿ ಬೋರ್​ವೆಲ್​ ಪೈಪ್​ನಿಂದಲೇ ಬರುತ್ತೆ ಗ್ಯಾಸ್​.. ಒಂದು ರೂಪಾಯಿ ಖರ್ಚಿಲ್ಲ!! - borewell that supplies free gas

ಕೇರಳದ ಕುಟುಂಬವೊಂದು ನೈಸರ್ಗಿಕವಾಗಿ ಸಿಕ್ಕ ಅನಿಲವನ್ನು ಅಡುಗೆ ಮಾಡಲು ಗ್ಯಾಸ್​ ಆಗಿ ಬಳಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಈ ಮನೆಗೆ ಅನೇಕ ಸಂಶೋಧನಾ ವಿದ್ಯಾರ್ಥಿಗಳು ಭೇಟಿ ನೀಡಿ ಈ ವಿದ್ಯಮಾನದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರಂತೆ..

borewell
ಬೋರ್​ವೆಲ್​
author img

By

Published : Jan 5, 2022, 3:11 PM IST

Updated : Jan 5, 2022, 7:05 PM IST

ಆಲಪ್ಪುಳ(ಕೇರಳ): ಗ್ಯಾಸ್​ ದರ ಗಗನಕ್ಕೇರಿದ್ದಲ್ಲದೇ ಸರ್ಕಾರ ಅದಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನೂ ಸ್ಥಗಿತಗೊಳಿಸಿದೆ. ಗ್ಯಾಸ್​ ಖರೀದಿಸಲು ಜನರು ಇನ್ನಿಲ್ಲದ ಪ್ರಯಾಸ ಪಡುತ್ತಿದ್ದರೆ, ಇಲ್ಲೊಬ್ಬರು 9 ವರ್ಷಗಳಿಂದ ಗ್ಯಾಸ್​ ಖರೀದಿಸದೆಯೇ ಅಡುಗೆ ಮನೆಯಲ್ಲಿ ಗ್ಯಾಸ್​ ಸೌಲಭ್ಯ ಪಡೆದಿದ್ದಾರೆ.

ಇಲ್ಲಿ ಬೋರ್​ವೆಲ್​ ಪೈಪ್​ನಿಂದಲೇ ಬರುತ್ತೆ ಗ್ಯಾಸ್​.. ಒಂದು ರೂಪಾಯಿ ಖರ್ಚಿಲ್ಲ!!

ಅದು ಹೇಗೆ ಸಾಧ್ಯ ಅಂತೀರಾ. ಕೇರಳದ ಆಳಪ್ಪುಳ ಜಿಲ್ಲೆಯ ಅರಟ್ಟುವಾಜಿ ನಿವಾಸಿಯಾದ ರತ್ನಮ್ಮ ಎಂಬುವರು ನಿಸರ್ಗದತ್ತ, ಉಚಿತವಾಗಿ ಅಡುಗೆ ಗ್ಯಾಸ್​ ಪಡೆದಿದ್ದಾರೆ. ಅರಟ್ಟುವಾಜಿಯಲ್ಲಿ ನೀರಿನ ಸಂಕಷ್ಟ ತಲೆದೋರಿದಾಗ ರತ್ನಮ್ಮನವರ ಕುಟುಂಬಸ್ಥರು ಮನೆಯ ಪಕ್ಕದಲ್ಲಿಯೇ ಬೋರ್​ವೆಲ್​ ಕೊರೆಸಿದ್ದಾರೆ.

ಅದರಲ್ಲಿ ನೀರು ಬಂದಿರಲಿಲ್ಲ. ಈ ವೇಳೆ ಬೋರ್​ವೆಲ್​ಗೆ ಅಳವಡಿಸಿದ್ದ ಪೈಪ್​ ಅನ್ನು ಅಗಲ ಮಾಡಲೆಂದು ಬೆಂಕಿಕಡ್ಡಿಯನ್ನು ಹಚ್ಚಿದಾಗ ಭಾರೀ ಜ್ವಾಲೆ ಉರಿದಿದೆ. ಅಚಾನಕ್ಕಾಗಿ ನಡೆದ ಈ ಘಟನೆಯಿಂದ ಕುಟುಂಬಸ್ಥರು ಹೆದರಿದ್ದಾರೆ. ಅಲ್ಲದೇ, ಆ ಪೈಪ್​ನಿಂದ ದಿನವೂ ಅನಿಲದ ವಾಸನೆ ಬರುತ್ತಲೇ ಇತ್ತು.

ಬೆಂಕಿ ಕೊರೆದಾಗ ಭಾರೀ ಜ್ವಾಲೆ ಉರಿಯುತ್ತಿತ್ತು. ಈ ವಿದ್ಯಮಾನವನ್ನು ಭೂವಿಜ್ಞಾನ ಮತ್ತು ಪೆಟ್ರೋಲಿಯಂ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅದರ ಮಾದರಿ ಸಂಗ್ರಹಿಸಿ ಪರೀಕ್ಷಿಸಿದಾಗ, ಅದು ಮಿಥೇನ್​ ಅನಿಲ ಎಂದು ದೃಢಪಡಿಸಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಕೆಲ ದಿನಗಳ ಬಳಿಕ ಇದು ನಿಂತು ಹೋಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಕುಟುಂಬಸ್ಥರು ಇದನ್ನು ಅಡುಗೆ ಗ್ಯಾಸ್​ ಆಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿ ಪೈಪ್​ ಸಹಾಯದ ಮೂಲಕ ಮನೆಗೆ ಸಂಪರ್ಕ ಕಲ್ಪಿಸಿದ್ದಾರೆ. ಅಂದಿನಿಂದ ಅಡುಗೆ ಗ್ಯಾಸ್​ ಆಗಿ ಮಿಥೇನ್​ ಅನಿಲವನ್ನೇ ಬಳಸಿಕೊಳ್ಳುತ್ತಿದ್ದಾರೆ. ಈವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಭಾರೀ ಮಳೆ ಬಂದು ನೀರು ನಿಂತಾಗ ಅನಿಲ ಕಡಿಮೆಯಾಗುತ್ತದೆ ಎಂದು ರತ್ನಮ್ಮ ಅವರು ತಿಳಿಸಿದ್ದಾರೆ.

ಈ ಮೂಲಕ ಕೇರಳದ ಕುಟುಂಬವೊಂದು ನೈಸರ್ಗಿಕವಾಗಿ ಸಿಕ್ಕ ಅನಿಲವನ್ನು ಅಡುಗೆ ಮಾಡಲು ಗ್ಯಾಸ್​ ಆಗಿ ಬಳಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಈ ಮನೆಗೆ ಅನೇಕ ಸಂಶೋಧನಾ ವಿದ್ಯಾರ್ಥಿಗಳು ಭೇಟಿ ನೀಡಿ ಈ ವಿದ್ಯಮಾನದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರಂತೆ.

ಇದನ್ನೂ ಓದಿ: ಪ್ರಸಿದ್ಧ ಗಾಯಕ ಸೋನು ನಿಗಮ್ ಮತ್ತು ಕುಟುಂಬಸ್ಥರಿಗೆ ಕೋವಿಡ್ ದೃಢ!

Last Updated : Jan 5, 2022, 7:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.