ETV Bharat / bharat

Coronavirus in India: ದೇಶದಲ್ಲಿ 91,702 ಮಂದಿಗೆ ಕೊರೊನಾ; 3,403 ಮಂದಿ ಬಲಿ - ಕೊರೊನಾ ಬುಲೆಟಿನ್

ಇವತ್ತು ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕೋವಿಡ್​​​ನಿಂದ ಮೃತಪಟ್ಟವರ ಸಂಖ್ಯೆ ಮೂರು ಸಾವಿರ ಗಡಿದಾಟಿದೆ. ನಿನ್ನೆಗೆ ಹೋಲಿಸಿದರೆ ಇಂದು ಮೃತರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ನಿನ್ನೆ ಒಂದೇ ದಿನ ದಾಖಲೆಯ 6,148 ಮಂದಿ ಕೋವಿಡ್​ಗೆ ಬಲಿಯಾಗಿದ್ದರು. ಇಂದು ಈ ಸಂಖ್ಯೆ 3,403ಕ್ಕೆ ಇಳಿಕೆ ಕಂಡಿದೆ.

Coronavirus in India
Coronavirus in India
author img

By

Published : Jun 11, 2021, 9:54 AM IST

Updated : Jun 11, 2021, 10:12 AM IST

ನವದೆಹಲಿ: ದೇಶದ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 91,702 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 1,34,580 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಬಂದಿದ್ದಾರೆ. ಅಲ್ಲದೆ 24 ಗಂಟೆಯಲ್ಲಿ ಸೋಂಕಿನಿಂದ 3,403 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲೀಗ ಕೋವಿಡ್​ ಪ್ರಕರಣಗಳ ಸಂಖ್ಯೆ 2,92,74,823, ಸಾವಿನ ಸಂಖ್ಯೆ 3,63,079ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಕೋವಿಡ್​ನಿಂದ ಗುಣಮುಖರಾದವರ ಸಂಖ್ಯೆ 2,77,90,073ಕ್ಕೆ ಹೆಚ್ಚಳವಾಗಿದ್ದು, 11,21,671 ಕೇಸ್​ಗಳು ಸಕ್ರಿಯವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಜೊತೆಗೆ 24,60,85,649 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ನಿನ್ನೆಗೆ ಹೋಲಿಸಿದರೆ ಇಂದು ಮೃತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ನಿನ್ನೆ ಒಂದೇ ದಿನ ದಾಖಲೆಯ 6,148 ಮಂದಿ ಕೋವಿಡ್​ಗೆ ಬಲಿಯಾಗಿದ್ದರು. ಇಂದು ಈ ಸಂಖ್ಯೆ 3,403ಕ್ಕೆ ಇಳಿಕೆ ಕಂಡಿದೆ.

ಇದನ್ನೂ ಓದಿ: Jammu and Kashmir: ಬಾರಾಮುಲ್ಲಾದಲ್ಲಿ ಅಗ್ನಿ ಅವಘಡ, 16 ಮನೆಗಳು ಭಸ್ಮ

Last Updated : Jun 11, 2021, 10:12 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.