ETV Bharat / bharat

ಕೇದಾರನಾಥದ ರಣಭಯಂಕರ ಪ್ರವಾಹಕ್ಕೆ 9 ವರ್ಷ.. ಇಲ್ಲಿದೆ ಕರಾಳ ದಿನಗಳ ನೆನಪು

2013ರಲ್ಲಿ ಕೇದಾರನಾಥ ಧಾಮದ ಭೀಕರ ದುರಂತದಲ್ಲಿ ನಾಪತ್ತೆಯಾದ ಜನರ ನೋವು ಅವರ ಕುಟುಂಬಗಳ ಮೊಗದಲ್ಲಿ ಇಂದಿಗೂ ಗೋಚರಿಸುತ್ತಿದೆ. ದುರಂತ ಸಂಭವಿಸಿ ಒಂಬತ್ತು ವರ್ಷಗಳು ಕಳೆದರೂ, ಆ ಪ್ರವಾಹ ಮಾಡಿದ ಗಾಯಗಳು ಮತ್ತೆ ಮತ್ತೆ ಕಣ್ಮುಂದೆ ಬರುತ್ತಲೇ ಇರುತ್ತವೆ.

Kedarnath Disaster at 9 years
Kedarnath Disaster at 9 years
author img

By

Published : Jun 16, 2022, 8:00 AM IST

Updated : Jun 16, 2022, 8:47 AM IST

ರುದ್ರಪ್ರಯಾಗ/ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥದಲ್ಲಿ 2013ರಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ 9 ವರ್ಷಗಳಾಗಿವೆ. 2013 ರ ಜೂನ್ 16-17 ರಂದು ಸಂಭವಿಸಿದ ಭಾರಿ ಮಳೆಗೆ ಕನಿಷ್ಠ 6000 ಜನರು ಸಾವನ್ನಪ್ಪಿ, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದರು. ನಂತರ ಹಲವು ದಿನಗಳ ಕಾಲ ಸುರಿದ ಮಳೆಗೆ ಎಲ್ಲವೂ ನಾಶವಾಗಿತ್ತು.

2013ರಲ್ಲಿ ಕೇದಾರನಾಥ ಧಾಮದ ಭೀಕರ ದುರಂತದಲ್ಲಿ ನಾಪತ್ತೆಯಾದ ಜನರ ನೋವು ಅವರ ಕುಟುಂಬಗಳ ಮೊಗದಲ್ಲಿ ಇಂದಿಗೂ ಗೋಚರಿಸುತ್ತಿದೆ. ದುರಂತ ಸಂಭವಿಸಿ ಒಂಬತ್ತು ವರ್ಷಗಳು ಕಳೆದರೂ, ಆ ಪ್ರವಾಹ ಮಾಡಿದ ಗಾಯಗಳು ಮತ್ತೆ ಮತ್ತೆ ಕಣ್ಮುಂದೆ ಬರುತ್ತಲೇ ಇರುತ್ತವೆ. ಈ ಭೀಕರ ಪ್ರವಾಹದಲ್ಲಿ ಇನ್ನೂ 3,183 ಜನರ ಕುರುಹು ಪತ್ತೆಯಾಗಿಲ್ಲ ಎನ್ನುವುದು ಮಹಾ ದುರಂತಕ್ಕೆ ಸಾಕ್ಷಿಯಾಗಿದೆ.

16 ಮತ್ತು 17 ಜೂನ್ 2013ರ ಭೀಕರ ಮಹಾ ಪ್ರವಾಹದಲ್ಲಿ ದರ್ಶನಕ್ಕೆ ಬಂದ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿಕೊಂಡಿದ್ದರು. ಪ್ರವಾಸಿಗರ ಜತೆಗೆ ಸ್ಥಳೀಯರು ಪ್ರವಾಹದ ನೀರಿಗೆ ಕೊಚ್ಚಿ ಹೋಗಿದ್ದರು. ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದವರು ಇನ್ನೂವರೆಗೂ ಸಿಕ್ಕಿಲ್ಲ ಎಂದರೆ ಮಳೆಯ ಆರ್ಭಟ ಹೇಗಿತ್ತು ಎಂಬುದನ್ನು ನೀವೇ ಒಮ್ಮೆ ಕಲ್ಪನೆ ಮಾಡಿಕೊಳ್ಳಿ.

ಸರ್ಕಾರದ ಅಂಕಿ- ಅಂಶಗಳನ್ನು ನೋಡುವುದಾದರೆ, ದುರಂತದ ನಂತರ ಒಟ್ಟು 1840 ಎಫ್‌ಐಆರ್‌ಗಳು ದಾಖಲಾಗಿವೆ. 3,886 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. ಈ ಪೈಕಿ 703 ಅಸ್ಥಿಪಂಜರಗಳನ್ನು ವಿವಿಧ ಶೋಧ ಕಾರ್ಯಾಚರಣೆಗಳಲ್ಲಿ ಪತ್ತೆ ಮಾಡಲಾಗಿದೆ.

ಅದೊಂದು ಬಂಡೆ ಮಂದಿರ ರಕ್ಷಿಸಿತ್ತು: ದೇವಾಲಯದ ಹಿಂಭಾಗದಲ್ಲಿ ಮೇಲಿನಿಂದ ಬಂದ ದೊಡ್ಡ ಕಲ್ಲು ಬಾಬಾನ ದೇವಾಲಯಕ್ಕೆ ಏನೂ ಆಗದಂತೆ ತಡೆದಿತ್ತು. ಇಂದು ಆ ಕಲ್ಲನ್ನು ಭೀಮ ಶಿಲೆ ಎಂದು ಕರೆಯಲಾಗುತ್ತಿದೆ. 2013 ಭೀಕರ ರಣ ಪ್ರವಾಹದಲ್ಲಿ 2241 ಹೋಟೆಲ್‌ಗಳು, ಧರ್ಮಶಾಲಾ ಮತ್ತು ಇತರ ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿದ್ದವು.

ಕೇದಾರನಾಥ ದುರಂತದ ಕೆಲ ಇಂಟ್ರೆಸ್ಟಿಂಗ್​ ಮಾಹಿತಿ: ಕೇದಾರನಾಥ ದುರಂತದಲ್ಲಿ 4400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ.

4200 ಕ್ಕೂ ಹೆಚ್ಚು ಹಳ್ಳಿಗಳು ಸಂಪೂರ್ಣ ನಾಶ

2,141 ಕಟ್ಟಡಗಳು ಸಂಪೂರ್ಣ ನೆಲಸಮ

ಪ್ರವಾಹದಲ್ಲಿ 1,309 ಹೆಕ್ಟೇರ್ ಕೃಷಿ ಭೂಮಿ ಕೊಚ್ಚಿ ಹೋಗಿದೆ

ಸೇನೆ ಮತ್ತು ಅರೆಸೇನಾ ಪಡೆಗಳಿಂದ 90 ಸಾವಿರ ಜನರ ರಕ್ಷಣೆ

ವಿವಿಧ ಸ್ಥಳಗಳಲ್ಲಿ 991 ಸ್ಥಳೀಯರ ಸಾವು

ಕೊಚ್ಚಿಹೋದ 11,000 ಕ್ಕೂ ಹೆಚ್ಚು ಜಾನುವಾರುಗಳು

ಸಿಗದ ಸಾವಿನ ನಿಖರ ಅಂಕಿ - ಅಂಶ: ದುರಂತದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ನಿಖರ ಅಂಕಿ ಯಾರ ಬಳಿಯೂ ಇಲ್ಲ. ಆದರೆ, ಸಾವಿರಾರು ಜನರ ಸಾವಿನ ಮಾಹಿತಿ ಪೊಲೀಸ್ ದಾಖಲೆಗಳಲ್ಲಿ ದಾಖಲಾಗಿವೆ. ಈ ದುರಂತದಲ್ಲಿ ಭಾರತದವರಷ್ಟೇ ಅಲ್ಲ ವಿದೇಶದಿಂದ ಬಂದ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನು ಓದಿ: ಕೇದಾರನಾಥ ಯಾತ್ರೆ: ಏಕಕಾಲಕ್ಕೆ 25 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಲಗ್ಗೆ; ಫುಲ್ ಜಾಮ್

Last Updated : Jun 16, 2022, 8:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.