ETV Bharat / bharat

ಲಾಕ್​​ಡೌನ್​ನಲ್ಲಿ ಅಜ್ಜ-ಮೊಮ್ಮಗನ ‘ಕಾರುಬಾರು’... ಬಿಡುವಿನ ವೇಳೆ ಕಾರು ತಯಾರಿಸಿದ 13ರ ಬಾಲಕ

ಲಾಕ್​​​ಡೌನ್​ನಲ್ಲಿ ಶಾಲೆಗಳಿಲ್ಲದೆ ಬರೀ ಆನ್​ಲೈನ್ ಕ್ಲಾಸ್​​ಗಳಷ್ಟೇ ನಡೆಯುತ್ತಿತ್ತು. ಇಂತಹ ಬಿಡುವಿನ ವೇಳೆಯಲ್ಲಿ ಇಲ್ಲೊಬ್ಬ ಬಾಲಕ ಕಾರು ತಯಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ತನ್ನ ಅಜ್ಜನ ಜೊತೆ ಸೇರಿ ತಮ್ಮ ವಾಹನ ಬಿಡಿ ಭಾಗಗಳ ಕಂಪನಿಯಿಂದ ಪಾರ್ಟ್ಸ್​ಗಳ ಪಡೆದು ಈ ಕಾರು ತಯಾರಿಸಿದ್ದಾನೆ.

8th-class-student-sukhbir-has-built-a-car-to-pass-his-free-time-during-covid-19-pandemic
ಲಾಕ್​​ಡೌನ್​ನಲ್ಲಿ ಅಜ್ಜ-ಮೊಮ್ಮಗನ ‘ಕಾರುಬಾರು
author img

By

Published : Jul 15, 2021, 6:13 AM IST

ಲುಧಿಯಾನ (ಪಂಜಾಬ್​): ಸುಮ್ಮನೆ ಕುಳಿತು ಸಮಯವನ್ನು ವ್ಯರ್ಥ ಮಾಡುವುದಕ್ಕಿಂತ ಅದನ್ನು ಸರಿಯಾಗಿ ಬಳಸುವುದು ಉತ್ತಮ. ಕೆಲವು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳುವುದರಿಂದ ಅದ್ಭುತವಾದ ಸಂಗತಿಗಳು ಸಂಭವಿಸುತ್ತವೆ ಎಂದು ಹಿರಿಯರು ಹೇಳುತ್ತಾರೆ. ಲುಧಿಯಾನದ 13 ವರ್ಷದ ಸುಖ್ಬೀರ್ ಎಂಬ ಬಾಲಕ ಎಲ್ಲರ ಗಮನಸೆಳೆಯುವಂತಹ ಸಾಧನೆ ಮಾಡಿದ್ದಾನೆ. 8 ನೇ ತರಗತಿ ವಿದ್ಯಾರ್ಥಿ ಸುಖ್ಬೀರ್ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ತನ್ನ ಬಿಡುವಿನ ವೇಳೆಯನ್ನು ಈ ಕಾರು ನಿರ್ಮಿಸಲು ಬಳಸಿದ್ದಾನೆ.

ಬಿಡುವಿನ ವೇಳೆ ಕಾರು ತಯಾರಿಸಿದ 13ರ ಬಾಲಕ

ಈ ಪೋರ ನಿರ್ಮಿಸಿದ ಕಾರು ಇದೀಗ ಎಲ್ಲರ ಚಿತ್ತ ಸೆಳೆಯುತ್ತಿದೆ. ಸುಖ್ಬೀರ್ ಈ ಕಾರನ್ನು ತನ್ನ ಅಜ್ಜನ ಸಹಾಯದಿಂದ ತಯಾರಿಸಿದ್ದಾನೆ. ಅಜ್ಜ ಮತ್ತು ಮೊಮ್ಮಗನ ಜೋಡಿ ಈ ಅದ್ಭುತ ಕಾರನ್ನು ಮಾಡಿದ್ದಾರೆ. ಅವರ ಕನಸು ನನಸಾಗಲು ಸುಮಾರು 9-10 ತಿಂಗಳುಗಳು ತೆಗೆದುಕೊಂಡಿದೆ. ಮುಖ್ಯ ವಿಷಯವೆಂದರೆ ಈ ಕಾರಿನ ಸಂಪೂರ್ಣ ರಚನೆಯನ್ನು ಸುಖ್ಬೀರ್ ಅವರೇ ವಿನ್ಯಾಸಗೊಳಿಸಿದ್ದಾರೆ. ಹೋಂಡಾ ಆಕ್ಟಿವಾ ಎಂಜಿನ್ ಅನ್ನು ಈ ಕಾರಿನಲ್ಲಿ ವಿಶೇಷವಾಗಿ ಅಳವಡಿಸಲಾಗಿದೆ. ಇದು ಕಟ್ಟಿಗೆಯ ಬಾಡಿಯನ್ನು ಹೊಂದಿದೆ.

ಸುಖ್ಬೀರ್ ಸಿಂಗ್ ಈ ಕಾರನ್ನು ಹೇಗೆ ತಯಾರಿಸಿದರು ಮತ್ತು ಅದನ್ನು ಮಾಡಲು ಅವರು ಏನು ಮಾಡಿದರು ಎಂಬುದನ್ನು ಅವರ ಅಜ್ಜ ವಿವರಿಸಿದ್ದಾರೆ. ಈ ವಿಶೇಷ ಕಾರನ್ನು ತಯಾರಿಸಲು ಸುಖ್ಬೀರ್‌ಗೆ ಅವರ ಇಡೀ ಕುಟುಂಬದ ಸಂಪೂರ್ಣ ಬೆಂಬಲ ದೊರೆತಿದೆ. ಬ್ಯಾಟರಿ ಚಾಲಿತ ಕಾರನ್ನು ತಯಾರಿಸುವುದು ಸುಖ್ಬೀರ್ ಅವರ ಮುಂದಿನ ಗುರಿಯಾಗಿದೆ.

ಸುಖ್ಬೀರ್ ಮತ್ತು ಆತನ ತಾತನ ಈ ಕಾರ್ಯ ಅವರ ಇಡೀ ಕುಟುಂಬಕ್ಕೆ ಸಂತಸ ತಂದಿದೆ. ಪುಟ್ಟ ವಯಸ್ಸಿನಲ್ಲಿ ಇಂತಹದ್ದೊಂದು ಮಹತ್ತರ ಕಾರ್ಯ ಮಾಡಿದ ಈ ಪೋರ ಯಶಸ್ಸಿನ ಶಿಖರ ವೇರಲಿ ಎಂಬುದೇ ನಮ್ಮೆಲ್ಲರ ಆಶಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.