ETV Bharat / bharat

8.88 ಕೋಟಿಗೂ ಹೆಚ್ಚು ಹರ್​ಘರ್​ ತಿರಂಗಾ ಸೆಲ್ಫಿ.. ಪ್ರಧಾನಿ ಮೋದಿ ಕರೆಗೆ ಜನರ ಅದ್ಭುತ ಸ್ಪಂದನೆ - Har Ghar Tiranga website

ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಹರ್​ಘರ್​ ತಿರಂಗಾ ಅಭಿಯಾನಕ್ಕೆ ದೇಶದ ಜನರು ಅದ್ಭುತವಾಗಿ ಸ್ಪಂದಿಸಿದ್ದಾರೆ. ಸುಮಾರು 9 ಕೋಟಿ ಹತ್ತಿರ ಸೆಲ್ಫಿ ಕ್ಲಿಕ್ಕಿಸಿ ವೆಬ್​ಸೈಟ್​ನಲ್ಲಿ ಹಂಚಿಕೊಂಡಿದ್ದಾರೆ.

ಹರ್​ಘರ್​ ತಿರಂಗಾ ಸೆಲ್ಫಿ
ಹರ್​ಘರ್​ ತಿರಂಗಾ ಸೆಲ್ಫಿ
author img

By

Published : Aug 15, 2023, 2:12 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ 'ಹರ್​ಘರ್​ ತಿರಂಗಾ ಅಭಿಯಾನ'ಕ್ಕೆ ದೇಶಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಮಂಗಳವಾರ ಮಧ್ಯಾಹ್ನ ವೇಳೆಗೆ ಸರಿಸುಮಾರು 9 ಕೋಟಿ ಜನರು ತ್ರಿವರ್ಣ ಧ್ವಜದ ಜೊತೆಗೆ ಸೆಲ್ಫಿ ಇಳಿದು ವೆಬ್​ಸೈಟ್​ಗೆ ಅಪ್ಲೋಡ್​​ ಮಾಡಿದ್ದಾರೆ. 77ನೇ ಸ್ವಾತಂತ್ರ್ಯೋತ್ಸವದ ಮೂರು ದಿನಗಳ ಮೊದಲು ಅಂದರೆ ಆಗಸ್ಟ್​ 12 ರಂದು ಅಭಿಯಾನ ಆರಂಭಿಸಲಾಗಿತ್ತು.

ಮೂರು ದಿನಗಳ ಅಂತರದಲ್ಲಿ ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ವೆಬ್‌ಸೈಟ್‌ನಲ್ಲಿ ರಾಷ್ಟ್ರಧ್ವಜದೊಂದಿಗೆ ದೇಶದ 8,81,21,591 ಜನರು (88 ಮಿಲಿಯನ್) ಸೆಲ್ಫಿಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಆಗಸ್ಟ್​ 13 ರಂದು ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಜನರು ಓಗೊಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇಂದು ಸ್ವಾತಂತ್ರ್ಯ ದಿನಾಚರಣೆಯ ಬಳಿಕ ಮತ್ತಷ್ಟು ಜನರು ರಾಷ್ಟ್ರಧ್ವಜದೊಂದಿಗೆ ಇರುವ ಫೋಟೋವನ್ನು ಹಂಚಿಕೊಳ್ಳಲಿದ್ದಾರೆ.

ಹರ್ ಘರ್ ತಿರಂಗಾ ವೆಬ್‌ಸೈಟ್‌ನ ಮುಖಪುಟದಲ್ಲಿ ತ್ರಿವರ್ಣ ಧ್ವಜವಿದೆ. ಜನರು ಧ್ವಜದ ಜೊತೆಗೆ ಸೆಲ್ಫಿ ಅಪ್ಲೋಡ್​ ಮಾಡಲು ಎರಡು ಆಯ್ಕೆಗಳನ್ನು ನೀಡಲಾಗಿದೆ. 8.88 ಕೋಟಿ ಬಳಕೆದಾರರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್, ನಟ ಅನುಪಮ್ ಖೇರ್ ಮತ್ತು ಗಾಯಕ ಕೈಲಾಶ್ ಖೇರ್ ಸೇರಿದಂತೆ ಭಾರತೀಯ ಧ್ವಜದೊಂದಿಗೆ ಕೇಂದ್ರ ಸಚಿವರು, ನಟರು ಮತ್ತು ಕ್ರೀಡಾಪಟುಗಳ ಫೋಟೋಗಳಿವೆ.

ಏನಿದು ಹರ್​ಘರ್​ ತಿರಂಗಾ: ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯಲ್ಲಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ನಿಮಿತ್ತ ಪ್ರಧಾನಿ ಮೋದಿ ಅವರು ಕಳೆದ ವರ್ಷ ಜುಲೈ 22 ರಂದು ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಪ್ರಾರಂಭಿಸಿದ್ದರು. ಅಂದರೆ ಜನರು ಮನೆ, ಕಚೇರಿ, ಯಾವುದೇ ಕಟ್ಟಡದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ ಬಳಿಕ ಅದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸರ್ಕಾರದ ನೀಡಿದ ವೆಬ್​ಸೈಟ್​ನಲ್ಲಿ ಹಂಚಿಕೊಳ್ಳಲಿ ಕರೆ ನೀಡಿದ್ದರು. ಈ ವರ್ಷವೂ ಪ್ರಧಾನಿಗಳು ಅಭಿಯಾನ ಮುಂದುವರಿಸಲು ಕೋರಿದ್ದರು. ಇದಕ್ಕೆ ಜನರು ಅದ್ಭುತವಾಗಿ ಪ್ರತಿಕ್ರಿಯಿಸಿದ್ದಾರೆ.

ಡಿಪಿ ಜಾಗದಲ್ಲಿ ತಿರಂಗಾ: ಜೊತೆಗೆ ಸಾಮಾಜಿಕ ಮಾಧ್ಯಮಗಳ ಖಾತೆಯ ಡಿಪಿ ಚಿತ್ರದಲ್ಲಿ ತಿರಂಗಾವನ್ನು ಅಳವಡಿಸಲು ಪ್ರಧಾನ ಮೋದಿ ಕೋರಿದ್ದರು. ಅದಕ್ಕೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜನರು ತಮ್ಮ ಖಾತೆಗಳ ಡಿಪಿಯನ್ನು ರಾಷ್ಟ್ರಧ್ವಜದಿಂದ ತುಂಬಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮೆಲ್ಲಾ ಖಾತೆಗಳ ಡಿಪಿ ಬದಲಿಸಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ಭಾಷಣದಲ್ಲಿ ಮಣಿಪುರ ವಿಚಾರ ಪ್ರಸ್ತಾಪ.. ದೇಶವನ್ನು ವಿಶ್ವದ 3ನೇ ಆರ್ಥಿಕತೆಯಾಗಿಸುವ ವಾಗ್ದಾನ ಮಾಡಿದ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.