ಮುಂಬೈ: ಮಹಾರಾಷ್ಟ್ರ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಸಿದ್ದು, 86 ಪೊಲೀಸರನ್ನು ವರ್ಗಾವಣೆ ಮಾಡಿದೆ.
ಮನ್ಸುಖ್ ಹಿರೇನ್ ನಿಗೂಢ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಈಗ ಮಹಾರಾಷ್ಟ್ರ ಸರ್ಕಾರ ಮನ್ಸುಖ್ ಹಿರೇನ್ ಹತ್ಯಾಕಾಂಡದ ವಿಚಾರಣೆದಾರರನ್ನು ಸೇರಿ ಮುಂಬೈ ಮಹಾನಗರ ಪೊಲೀಸ್ ಇಲಾಖೆಯಿಂದ 86 ಪೊಲೀಸರನ್ನು ವರ್ಗಾವಣೆ ಮಾಡಿದೆ.
ಓದಿ: ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಸಂಜಯ್ ರಾವತ್ ವಾಜೆ ರಕ್ಷಿಸುತ್ತಿರೋದು ಏಕೆ? : ಬಿಜೆಪಿ ಪ್ರಶ್ನೆ
ವರ್ಗಾವಣೆ ಮಾಡಿದ 86 ಪೊಲೀಸರಲ್ಲಿ ಕೆಲ ಪೊಲೀಸರನ್ನು ಎನ್ಐಎ ವಿಚಾರಣೆ ನಡೆಸಿದೆ. ಅಪರಾಧ ಗುಪ್ತಚರ ಘಟಕದ ಅಧಿಕಾರಿ ವಾಜೆಯ ಸಹಚರ ಎಪಿಐ ರಿಯಾಜುದ್ದೀನ್ ಖಾಜಿಯನ್ನು ಸ್ಥಳೀಯ ಶಸ್ತ್ರಾಸ್ತ್ರ ಘಟಕಕ್ಕೆ ಕಳುಹಿಸಲಾಗಿದೆ ಎಂದು ನಗರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ ಅಪರಾಧ ವಿಭಾಗದ 65 ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.