ತೆಲಂಗಾಣ : ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ರವಾನಿಸುವ ಉದ್ದೇಶದಿಂದ ಹೈದರಾಬಾದ್‌ನಲ್ಲಿ 81 ವರ್ಷದ ವ್ಯಕ್ತಿಯೊಬ್ಬರು 900 ಪುರಾತನ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ.
ಆಂಧ್ರಪ್ರದೇಶದ ಸೋಮೇಶ್ವರ ಮೂಲದವರಾಗಿರುವ ವೈ.ಕೃಷ್ಣಮೂರ್ತಿ (81) ಅವರು, ಕಂಚು, ತಾಮ್ರ, ಹಿತ್ತಾಳೆ, ಕಲ್ಲು ಮತ್ತು ಹಳೆಯ ದೂರವಾಣಿ ಸೇರಿದಂತೆ ಅನೇಕ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಹಿಂದಿನ ಕಾಲದಲ್ಲಿ ತಾಳೆಗರಿಗಳ ಮೇಲೆ ಬರೆಯಲು ಬಳಸುವ "ಘಂಟಂ" ಎಂಬ ವಾದ್ಯವೂ ಸಹ ಅವರ ಬಳಿ ಇದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಜನರು ಹಿತ್ತಾಳೆ ಪಾತ್ರೆಗಳಲ್ಲಿ ಅನ್ನ, ಕಂಚಿನ ಪಾತ್ರೆಗಳಲ್ಲಿ ಸಾಂಬಾರ್ ಮತ್ತು ಕಲ್ಲಿನ ಪಾತ್ರೆಗಳಲ್ಲಿ ಕಾಳುಗಳನ್ನು ಬೇಯಿಸುತ್ತಿದ್ದರು.
ತಾಮ್ರದ ಪಾತ್ರೆಯಲ್ಲಿ ನೀರು ಸಂಗ್ರಹಿಸುತ್ತಿದ್ದರು. ಇದರಿಂದಾಗಿ ಅವರು ಉತ್ತಮ ಆರೋಗ್ಯವನ್ನು ಹೊಂದಿದ್ದರು. ನಾವು ಸಹ ಅದನ್ನು ಪುನರುಜ್ಜೀವನಗೊಳಿಸಬೇಕು ಎಂದರು.
ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನನ್ನ ಅಜ್ಜ ತೀರಿಕೊಂಡರು. ಈ ವೇಳೆ ಅಜ್ಜಿಯನ್ನು ಕರೆತರಲು ಹೋದಾಗ ಮನೆಯಲ್ಲಿರುವ ಎಲ್ಲಾ ಹಿತ್ತಾಳೆ ಪಾತ್ರೆಗಳನ್ನು ತರಲು ಒತ್ತಾಯಿಸಿದಳು.
ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ರವಾನಿಸುವ ಉದ್ದೇಶದಿಂದ ಪ್ರಾಚೀನ ಕಾಲದ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಲು ಮುಂದಾದೆ.
ಪ್ರಾಚೀನ ವಸ್ತುಗಳ ತಯಾರಿಕೆಯ ಹಿಂದಿನ ಕಥೆಯನ್ನು ತಿಳಿಯುವ ಉದ್ದೇಶದಿಂದ ಬಿಡುವಿನ ವೇಳೆ ಸಾಕಷ್ಟು ಸಂಶೋಧನೆಯನ್ನು ಮಾಡುತ್ತಿದ್ದೇನೆ. ಇದು ನನಗೆ ಸಂತೋಷ ನೀಡುತ್ತಿದೆ ಎಂದು ಹೇಳಿದರು.