ETV Bharat / bharat

Manipur: ದಾಳಿಕೋರರು ಲೂಟಿ ಮಾಡಿದ 8 ಅತ್ಯಾಧುನಿಕ ಬಂದೂಕು, 112 ಸ್ಫೋಟಕ ವಶ, ಶಾಂತಿಯತ್ತ ಹಿಂಸಾಪೀಡಿತ ಮಣಿಪುರ

ಹಿಂಸಾಚಾರಪೀಡಿತ ರಾಜ್ಯವಾದ ಮಣಿಪುರದಲ್ಲಿ ದಾಳಿಕೋರರು ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ಮುಂದುವರಿದಿದೆ.

author img

By

Published : Aug 17, 2023, 9:13 AM IST

ಶಾಂತಿಯತ್ತ ಹಿಂಸಾಪೀಡಿತ ಮಣಿಪುರ
ಶಾಂತಿಯತ್ತ ಹಿಂಸಾಪೀಡಿತ ಮಣಿಪುರ

ಇಂಫಾಲ(ಮಣಿಪುರ) : ಜನಾಂಗೀಯ ಕಲಹಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಭದ್ರತಾ ಪಡೆಗಳು ಪ್ರಯತ್ನಿಸುತ್ತಿವೆ. ಶಸ್ತಾಸ್ತ್ರಗಳ ವಶ, ಕಟ್ಟುನಿಟ್ಟಿನ ಕ್ರಮದಿಂದಾಗಿ ಇದೀಗ ರಾಜ್ಯ ತುಸು ತಹಬದಿಗೆ ಬರುತ್ತಿದೆ. ದಾಳಿ ಮುಂದುವರಿಸಿರುವ ಪೊಲೀಸ್​ ಪಡೆಗಳು ಬುಧವಾರ 8 ಅತ್ಯಾಧುನಿಕ ಬಂದೂಕುಗಳು, 112 ವಿವಿಧ ರೀತಿಯ ಮದ್ದುಗುಂಡುಗಳು, ಅಪಾರ ಪ್ರಮಾಣದ ಸ್ಪೋಟಕಗಳನ್ನು ವಶಕ್ಕೆ ಪಡೆದುಕೊಂಡಿವೆ.

ಹಿಂಸಾಚಾರ ಪೀಡಿತ ಪ್ರದೇಶಗಳದಾದ ಬಿಷ್ಣುಪುರ ಮತ್ತು ಇಂಫಾಲ ಜಿಲ್ಲೆಗಳಲ್ಲಿ ದಾಳಿ ನಡೆಸಿರುವ ಪೊಲೀಸ್​ ಪಡೆಗಳು, ಭದ್ರತಾ ಪಡೆಗಳಿಂದ ಲೂಟಿ ಮಾಡಿದ 8 ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಕ್ಕೆ ತೆಗದುಕೊಂಡಿದ್ದಾರೆ ಎಂದು ಇಂಫಾಲ ಪೊಲೀಸರು ತಿಳಿಸಿದ್ದಾರೆ.

ಮ್ಯಾನ್ಮಾರ್‌ಗೆ ಹೊಂದಿಕೊಂಡಿರುವ ತೆಂಗ್‌ನೌಪಾಲ್ ಜಿಲ್ಲೆಯಲ್ಲಿ ಕೆಲ ದಾಳಿಕೋರರು ನಿರ್ಮಿಸಿದ್ದ 6 ಅಕ್ರಮ ಬಂಕರ್‌ಗಳನ್ನು ಭದ್ರತಾ ಪಡೆಗಳು ಬುಲ್ಡೋಜರ್‌ನಿಂದ ನಾಶಪಡಿಸಿವೆ. ಇಷ್ಟೆಲ್ಲ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ದಾಳಿಕೋರರು ಗುಂಡಿನ ಚಕಮಕಿ ನಡೆಸಿರುವುದು ವಿವಿಧ ಜಿಲ್ಲೆಗಳಿಂದ ವರದಿಯಾಗಿವೆ. ಆದರೆ, ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.

ಡ್ರಗ್ಸ್​ ವಶ, ಆರೋಪಿಗಳು ಅರೆಸ್ಟ್​: ಹಿಂಸಾಚಾರದ ನಡುವೆ ಎಗ್ಗಿಲ್ಲದೇ, ಡ್ರಗ್ಸ್​ ದಂಧೆ ನಡೆಯುತ್ತಿದ್ದು, ಪೊಲೀಸ್​ ಪಡೆಗಳು ನಾರ್ಕೋಟಿಕ್ಸ್​​ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂಪಾಲದ ಪೂರ್ವ ಭಾಗದಲ್ಲಿ ಡ್ರಗ್ಸ್​ ಅಡ್ಡೆ ಮೇಲೆ ದಾಳಿ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮಣಿಪುರ ಮತ್ತು ಅಸ್ಸೋಂಗೆ ಸೇರಿದ ಹಲವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಂತಿಗೆ ಪ್ರಧಾನಿ ಕರೆ: ಜನಾಂಗೀಯ ಹಿಂಸಾಚಾರವನ್ನು ನಿಲ್ಲಿಸಿ ಮಾತುಕತೆ ಮೂಲಕ ಶಾಂತಿ ಸ್ಥಾಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣ ಮತ್ತು ಸಂಸತ್​ ಅಧಿವೇಶನದಲ್ಲಿ ಕರೆ ನೀಡಿದ್ದರು.

ರಾಜ್ಯದಲ್ಲಿ ಶಾಂತಿಯ ಮೂಲಕ ಪರಿಹಾರದ ಮಾರ್ಗವನ್ನು ಕಂಡುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಸ್ಯೆ ಪರಿಹಾರಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ನಾವು ಇದನ್ನು ಮುಂದುವರಿಸುತ್ತೇವೆ ಎಂದೂ ಹೇಳಿದ್ದರು.

ಕೆಲವು ಚಿಕ್ಕ ಘಟನೆಗಳು ಭವಿಷ್ಯದಲ್ಲಿ ದೊಡ್ಡ ಹೊಡೆತಗಳಿಗೆ ಕಾರಣವಾಗುತ್ತವೆ. ಮಣಿಪುರ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ರಾಜ್ಯದಲ್ಲಿ ಶಾಂತಿ ನೆಲೆಗಾಣಿಸುವುದೇ ಸರ್ಕಾರಗಳ ಕೊನೆಯ ಉದ್ದೇಶ ಎಂದು ಪ್ರಧಾನಿ ವಿವರಿಸಿದರು.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳು ಮಣಿಪುರದ ಬಗ್ಗೆ ಖ್ಯಾತೆ ತೆಗೆದಾಗಲೂ ಉತ್ತರಿಸಿದ್ದ ಪ್ರಧಾನಿ, ಹಿಂಸಾಚಾರದಲ್ಲಿ ರಾಜಕೀಯ ನಡೆಸಬಾರದು. ಸರ್ವಪಕ್ಷಗಳು ರಾಜ್ಯದ ಜನರ ಪರವಾಗಿ ನಿಲ್ಲಬೇಕಿದೆ ಎಂದೂ ಹೇಳಿದ್ದರು.

ಇದನ್ನೂ ಓದಿ: ಮಣಿಪುರದಲ್ಲಿ 25 ವರ್ಷಗಳ ಬಳಿಕ ಹಿಂದಿ ಚಿತ್ರ ಪ್ರದರ್ಶನ.. How Is Josh?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.