ETV Bharat / bharat

ವಿವಿಯಲ್ಲಿ ಕಂಪ್ಯೂಟರ್​ ನೌಕರರಿಂದ ಅಶ್ಲೀಲ ವಿಡಿಯೋ ವೀಕ್ಷಣೆ:  ದುರ್ನಡತೆ ಜಗಜ್ಜಾಹೀರು! - ಗ್ವಾಲಿಯರ್ ನ್ಯೂಸ್​

ನೌಕರರ ಕೃತ್ಯದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಭಾಗದ ಉಸ್ತುವಾರಿಗೆ ಶೋಕಾಸ್​ ನೋಟಿಸ್ ನೀಡಿ ಉತ್ತರ ಕೋರಲಾಗಿದೆ. ಆದರೆ ವಿಶ್ವವಿದ್ಯಾನಿಲಯವು ಐಡಿ ಮೂಲಕ ಅಶ್ಲೀಲ ವಿಡಿಯೋ ವೀಕ್ಷಿಸಿದ ನೌಕರರ ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಜಿವಾಜಿ ವಿಶ್ವವಿದ್ಯಾಲಯದ ವಿಶ್ವಾಸಾರ್ಹತೆ ಹಾಳಾಗದಂತೆ ಪ್ರಕರಣ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳ ಸಹ ಕೇಳಿಬರುತ್ತಿದೆ.

Jiwaji
Jiwaji
author img

By

Published : Mar 25, 2021, 10:19 AM IST

ಗ್ವಾಲಿಯರ್: ಗ್ವಾಲಿಯರ್​ ಜಿವಾಜಿ ವಿಶ್ವವಿದ್ಯಾಲಯದ ಕೆಲವು ಕಂಪ್ಯೂಟರ್​ ನಿರ್ವಹಣೆ ನೌಕರರ ನೀಚಕೃತ್ಯಗಳು ಬೆಳಕಿಗೆ ಬಂದಿದೆ.

ಕಂಪ್ಯೂಟರ್ ಉದ್ಯೋಗಿಗಳು ಒಂದು ವಾರದಲ್ಲಿ 1,256 ನಿಮಿಷಗಳ ಕಾಲ ಅಶ್ಲೀಲ್​ ವಿಡಿಯೋಗಳನ್ನು ವೀಕ್ಷಿಸಿದ್ದು, ಶೈಕ್ಷಣಿಕ ಉದ್ದೇಶಕ್ಕೆಂದು ಮೀಸಲಿರುವ ಕಂಪ್ಯೂಟರ್​ಗಳನ್ನು ತಮ್ಮ ನೀಚಕೃತ್ಯಗಳಿಗೆ ಬಳಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ವಿಶ್ವವಿದ್ಯಾಲಯದ ಐಡಿ ನಿರ್ಬಂಧಿಸಲಾಗಿದೆ. ವಿವಿಯ ಆಡಳಿತವು ಈ ಪ್ರಕರಣದ ಬಗ್ಗೆ ಮೌನ ವಹಿಸಿ, ತನಿಖೆ ನಡೆಸುವಂತೆ ಸಣ್ಣನೆ ಧ್ವನಿಯಲ್ಲಿ ಹೇಳುತ್ತಿದೆ.

ನೌಕರರ ಕೃತ್ಯದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಭಾಗದ ಉಸ್ತುವಾರಿಗೆ ಶೋಕಾಸ್​ ನೋಟಿಸ್ ನೀಡಿ ಉತ್ತರ ಕೋರಲಾಗಿದೆ. ಆದರೆ, ವಿಶ್ವವಿದ್ಯಾನಿಲಯವು ಐಡಿ ಮೂಲಕ ಅಶ್ಲೀಲ ವಿಡಿಯೋ ವೀಕ್ಷಿಸಿದ ನೌಕರರ ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಜಿವಾಜಿ ವಿಶ್ವವಿದ್ಯಾಲಯದ ವಿಶ್ವಾಸಾರ್ಹತೆ ಹಾಳಾಗದಂತೆ ಪ್ರಕರಣ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.

ಇದನ್ನೂ ಓದಿ: ಮನೆಯ ವಿದ್ಯುತ್ ಸರಬರಾಜು ಕಡಿತ: ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ!

ಜಿವಾಜಿ ವಿಶ್ವವಿದ್ಯಾಲಯವು ಕಂಪ್ಯೂಟರ್‌ಗಳಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ವಿವಿಧ ವಿಭಾಗಗಲ್ಲಿಳ ಇಂತಹ ಡಜನ್‌ಗೂ ಹೆಚ್ಚು ಉದ್ಯೋಗಿಗಳು ಮತ್ತು ಪ್ರಾಧ್ಯಾಪಕರು ಇದ್ದಾರೆ ಎನ್ನಲಾಗುತ್ತಿದೆ. ಯಾವೆಲ್ಲಾ ಕಂಪ್ಯೂಟರ್​ನಲ್ಲಿ ವೀಕ್ಷಿಸಲಾಗಿದೆ ಎಂಬ ಐಡಿಯಿಂದ ವೆಬ್‌ಸೈಟ್ ಅನ್ನು ನಿಷೇಧಿಸಲಾಗಿದೆ. ಇಡೀ ಪ್ರಕರಣವನ್ನೂ ಜಿವಾಜಿ ನಿರ್ವಹಣೆ ವಿಭಾಗ ತನಿಖೆ ನಡೆಸುತ್ತಿದೆ.

ಎಎಪಿ ನೌಕರರು ವಿಶ್ವವಿದ್ಯಾಲಯದಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದಾರೆ ಎಂದು ಎನ್‌ಕೆಎನ್ (ನ್ಯಾಷನಲ್ ನಾಲೆಡ್ಜ್ ನೆಟ್‌ವರ್ಕ್) ಜಿವಾಜಿ ಮ್ಯಾನೇಜ್‌ಮೆಂಟ್‌ಗೆ ಮಾಹಿತಿ ನೀಡಿದ ಕೂಡಲೇ ನಿರ್ವಾಹಣೆ ವಿಭಾಗ ಕಾರ್ಯರೂಪ ಪ್ರವೃತ್ತವಾಯಿತು. ತಕ್ಷಣವೇ ಅಧಿಕಾರಿಗಳು ತನಿಖೆಯಲ್ಲಿ ನಿರತವಾಗಿದ್ದಾರೆ. ಆದರೆ, ವಿಶ್ವವಿದ್ಯಾಲಯದ ಆಡಳಿತವು ಅಧಿಕಾರಿಗಳ ಹೆಸರಾಗಲಿ ಅಥವಾ ಅಶ್ಲೀಲ ವಿಡಿಯೋ ನೋಡಿದ ಇಲಾಖೆಗಳ ಬಗ್ಗೆ ಉಲ್ಲೇಖಿಸುತ್ತಿಲ್ಲ. ಈ ವಿಷಯವು ಪ್ರಸ್ತುತ ಗಂಭೀರ ತನಿಖೆಯಲ್ಲಿದೆ. ಶೀಘ್ರದಲ್ಲೇ ನೌಕರರ ಹೆಸರುಗಳನ್ನು ತಿಳಿಸಲಾಗುವುದು ಎಂದು ಆಡಳಿತ ಮಂಡಳಿ ಹೇಳುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.