ETV Bharat / bharat

ಭಾರತ @75 ಸ್ವಾತಂತ್ರ್ಯದ ಅಮೃತ ಮಹೋತ್ಸವ: IHMHನಲ್ಲಿ ತಯಾರಾಗಿವೆ 75 ಬಗೆಯ ಬಿರಿಯಾನಿ - Institute of Hotel Management in Vidyanagar Hyderabad

ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆ 'ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್'ನಲ್ಲಿ 75 ವಿಧದ ಬಿರಿಯಾನಿ ತಯಾರಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ದೇಶದ ಹಲವು ಬಗೆಯ ಬಿರಿಯಾನಿ, ತಯಾರಿಸುವ ಬಗೆ ಕುರಿತು 2 ತಿಂಗಳ ಕಾಲ ಸಂಶೋಧನೆ ನಡೆಸಿದ್ದರು.

75 Types Of Biryanis
75 ಬಗೆಯ ವೆಜ್ ಮತ್ತು ನಾನ್ ವೆಜ್ ಬಿರಿಯಾನಿ ತಯಾರಿಸಿದ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್
author img

By

Published : Apr 6, 2022, 11:11 AM IST

Updated : Apr 6, 2022, 6:11 PM IST

ಹೈದರಾಬಾದ್​: ಬಿರಿಯಾನಿ.. ಈ ಹೆಸರೇ ಸಾಕು ಭಕ್ಷ್ಯಪ್ರಿಯರ ಬಾಯಲ್ಲಿ ನೀರೂರುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದಲ್ಲಿ ವಿವಿಧ ಬಗೆಯ ಬಿರಿಯಾನಿಗಳನ್ನು ತಯಾರಿಸಲಾಗುತ್ತದೆ. ಆದರೆ, ಹೈದರಾಬಾದ್‌ನ ವಿದ್ಯಾನಗರದಲ್ಲಿರುವ 'ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್' ಒಂದೆರಡಲ್ಲ, ಬರೋಬ್ಬರಿ 75 ಬಗೆಯ ವೆಜ್ ಮತ್ತು ನಾನ್ ವೆಜ್ ಬಿರಿಯಾನಿಗಳನ್ನು ತಯಾರಿಸಿ ದಾಖಲೆ ನಿರ್ಮಿಸಿದೆ.

ಹೈದರಾಬಾದ್‌ನ ವಿದ್ಯಾನಗರದಲ್ಲಿರುವ 'ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್' 50 ವರ್ಷಗಳನ್ನು ಪೂರೈಸಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತವೆ. ಈ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರ 'ಆಜಾದಿ ಕಾ ಅಮೃತ್ ಮಹೋತ್ಸವ' ಆಯೋಜಿಸುತ್ತಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ಗೌರವಾರ್ಥವಾಗಿ ಮತ್ತು ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಹೋಟೆಲ್ ಆಡಳಿತ ಮಂಡಳಿ ವಿಭಿನ್ನ ಪ್ರಯತ್ನ ಮಾಡುವ ಮೂಲಕ ದಾಖಲೆ ಮಾಡಿದೆ.

2 ತಿಂಗಳ ಕಾಲ ಸಂಶೋಧನೆ: ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 75 ವಿಧದ ಬಿರಿಯಾನಿ ತಯಾರಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ದೇಶದ ಹಲವು ಬಗೆಯ ಬಿರಿಯಾನಿಗಳು, ವಿವಿಧೆಡೆ ಜನಪ್ರಿಯವಾಗಿರುವ ಬಿರಿಯಾನಿಗಳು, ತಯಾರಿಸುವ ಬಗೆ ಕುರಿತು 2 ತಿಂಗಳ ಕಾಲ ಸಂಶೋಧನೆ ನಡೆಸಿದ್ದರು.

ಬರೋಬ್ಬರಿ 75 ಬಗೆಯ ವೆಜ್ ಮತ್ತು ನಾನ್ ವೆಜ್ ಬಿರಿಯಾನಿ ತಯಾರಿಸಿದ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್

ಬಳಿಕ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಬಿರಿಯಾನಿಗೆ ಬೇಕಾದ ಪದಾರ್ಥಗಳನ್ನು ಸಿದ್ಧಪಡಿಸಿದರು. ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ 4 ಗಂಟೆಗಳ ಕಾಲ ಶ್ರಮವಹಿಸಿ 75 ಬಗೆಯ ಬಿರಿಯಾನಿ ತಯಾರಿಸಿದ್ದಾರೆ.

ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗಾಗಿ ಬಿರಿಯಾನಿ ತಯಾರಿ: ಕಳೆದ ಎರಡು ವರ್ಷಗಳಿಂದ ಆಫ್​​ಲೈನ್​​ ತರಗತಿಯಿಲ್ಲದೇ ಮಾನಸಿಕವಾಗಿ ಕುಗ್ಗಿಹೋಗಿದ್ದೆವು. ಯಾವುದೇ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ 'ಲಿಮ್ಕಾ ಬುಕ್ ಆಫ್ ರೆಕಾರ್ಡ್‌'ಗಾಗಿ ಬಿರಿಯಾನಿ ಸಿದ್ದಪಡಿಸಿರುವುದು ಸಂತಸವಾಗಿದೆ ಎಂದು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.

ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗಾಗಿ ಬಿರಿಯಾನಿ ತಯಾರಿಯಲ್ಲಿ 10 ಮಂದಿ ಅಡುಗೆ ತಜ್ಞರು ಹಾಗೂ 30 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರು ಬೆಳಿಗ್ಗೆ 9 ಗಂಟೆಗೆ ಬಿರಿಯಾನಿಗಳನ್ನು ತಯಾರಿಸಲು ಪ್ರಾರಂಭಿಸಿ ಮಧ್ಯಾಹ್ನ 12 ಗಂಟೆಗೆ ಅಂದರೆ 4 ಗಂಟೆಗಳ ಕಾಲ ಶ್ರಮವಹಿಸಿ 75 ಬಗೆಯ ಬಿರಿಯಾನಿ ತಯಾರಿಸಿದ್ದಾರೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಇಲ್ಲಿವೆ ತಜ್ಞರ ಸಲಹೆಗಳು...

Last Updated : Apr 6, 2022, 6:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.