ETV Bharat / bharat

ಒಮಿಕ್ರಾನ್​​ ಸೋಂಕಿಗೊಳಗಾಗಿದ್ದ 73 ವರ್ಷದ ವೃದ್ಧ ನಿಧನ

Omicron death in Rajasthan : ಒಮಿಕ್ರಾನ್​ ಸೋಂಕಿಗೊಳಗಾಗಿದ್ದ 73 ವರ್ಷದ ವೃದ್ಧನೋರ್ವ ರಾಜಸ್ಥಾನದ ಉದಯಪುರದಲ್ಲಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ..

author img

By

Published : Dec 31, 2021, 3:40 PM IST

Updated : Dec 31, 2021, 4:46 PM IST

Omicron death in Rajasthan
Omicron death in Rajasthan

ಉದಯಪುರ(ರಾಜಸ್ಥಾನ) : ಕೊರೊನಾ ವೈರಸ್​ ರೂಪಾಂತರಿ ಒಮಿಕ್ರಾನ್​ ಸೋಂಕಿಗೊಳಗಾಗಿದ್ದ 73 ವರ್ಷದ ವೃದ್ಧನೋರ್ವ ಸಾವನ್ನಪ್ಪಿದ್ದಾನೆ. ರಾಜಸ್ಥಾನದ ಉದಯಪುರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ವೃದ್ಧನ ಸಾವಿನ ಬಗ್ಗೆ ಮಾಹಿತಿ ಹಂಚಿಕೊಂಡ ವೈದ್ಯ

ಕಳೆದ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೃದ್ಧನ ಕೊರೊನಾ ವರದಿ ಎರಡು ಸಲ ನೆಗೆಟಿವ್​ ಬಂದಿತ್ತು. ಕಳೆದ 25ರಂದು ಇವರ ಒಮಿಕ್ರಾನ್​ ವರದಿ ಕೂಡ ಪಾಸಿಟಿವ್​ ಬಂದಿತ್ತು. ವೃದ್ಧನಿಗೆ ನ್ಯುಮೋನಿಯಾ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗಳಿದ್ದವು ಎಂದು ವರದಿಯಾಗಿದೆ.

  • Rajasthan| A 73-year-old man who was tested positive for Covid's Omicron strain on Dec 15, died today. Later, he was tested negative two times, so this will not be called a COVID death but a post-Covid death: Dr Dinesh Kharadi, Chief Medical and Health Officer Udaipur Division pic.twitter.com/zK0ES1L9bZ

    — ANI (@ANI) December 31, 2021 " class="align-text-top noRightClick twitterSection" data=" ">

ಲಭ್ಯವಾಗಿರುವ ಮಾಹಿತಿ ಪ್ರಕಾರ ಒಮಿಕ್ರಾನ್​ ಸೋಂಕಿಗೊಳಗಾಗಿರುವ ಈ ವೃದ್ಧನ ಯಾವುದೇ ಟ್ರಾವೆಲ್​ ಹಿಸ್ಟರಿ ಇಲ್ಲ. ಆದರೆ, ಡಿಸೆಂಬರ್​ 21 ಹಾಗೂ 22ರಂದು ಕೋವಿಡ್​​ ಪರೀಕ್ಷೆ ನಡೆಸಿದಾಗ ಅದು ಪಾಸಿಟಿವ್​ ಬಂದಿತ್ತು. ಆದರೆ, ಇದಾದ ಬಳಿಕ ಅವರಿಗೆ ಮತ್ತೊಮ್ಮೆ ಕೊರೊನಾ ಟೆಸ್ಟ್​ ನಡೆಸಿದಾಗ ನೆಗೆಟಿವ್​ ಬಂದಿತ್ತು.

ಹೀಗಾಗಿ, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರ ಬೆನ್ನಲ್ಲೇ ಡಿಸೆಂಬರ್​​​ 25ರಂದು ಒಮಿಕ್ರಾನ್​ ಪರೀಕ್ಷೆಗೊಳಪಡಿಸಿದಾಗ ಅದು ಪಾಸಿಟಿವ್​ ಇರುವುದು ದೃಢಗೊಂಡಿದೆ. ಇದರ ಬೆನ್ನಲ್ಲೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವೈದ್ಯಾಧಿಕಾರಿ ಇದನ್ನ ಕೊರೊನಾ ಸಾವು ಎಂದು ಕರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ತೆಲುಗು ನಟ ಮಹೇಶ್​ಬಾಬು ಅತ್ತಿಗೆ ಶಿಲ್ಪಾ ಶಿರೋಡ್​ಕರ್​ಗೆ ಕೊರೊನಾ ಸೋಂಕು

ಕಳೆದ ಕೆಲ ದಿನಗಳಿಂದ ದೇಶದಲ್ಲಿ ಪ್ರತಿದಿನ ಅನೇಕ ಒಮಿಕ್ರಾನ್​ ಪ್ರಕರಣ ದಾಖಲಾಗುತ್ತಿವೆ. ಸೋಂಕಿತ ಪ್ರಕರಣಗಳ ಒಟ್ಟು ಸಂಖ್ಯೆ ದೇಶದಲ್ಲಿ ಈಗಾಗಲೇ ಸಾವಿರ ಗಡಿ ದಾಟಿದೆ.

Last Updated : Dec 31, 2021, 4:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.