ETV Bharat / bharat

ಬ್ರಿಟಿಷರಿಗಿಂತ ಮುಂಚೆ ಭಾರತದ ಶೇ 70ರಷ್ಟು ಜನ ವಿದ್ಯಾವಂತರಾಗಿದ್ದರು: ಮೋಹನ್​​ ಭಾಗವತ್

author img

By

Published : Mar 6, 2023, 6:17 PM IST

ಬ್ರಿಟಿಷರ ಆಳ್ವಿಕೆಗಿಂತ ಮುಂಚೆ ಭಾರತದಲ್ಲಿನ ಶಿಕ್ಷಣ ವ್ಯವಸ್ಥೆ ತುಂಬಾ ಉತ್ತಮವಾಗಿತ್ತು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಬ್ರಿಟಿಷರಿಗಿಂತ ಮುಂಚೆ ಭಾರತದ ಶೇ 70ರಷ್ಟು ಜನ ವಿದ್ಯಾವಂತರಾಗಿದ್ದರು: ಆರೆಸ್ಸೆಸ್ ಮುಖ್ಯಸ್ಥ ಭಾಗವತ್
70-percent-of-indias-people-were-educated-before-the-british

ಕರ್ನಾಲ್ (ಹರಿಯಾಣ) : ಬ್ರಿಟಿಷರ ಆಳ್ವಿಕೆಗಿಂತ ಮೊದಲು ಭಾರತದ ಜನಸಂಖ್ಯೆಯ ಶೇಕಡಾ 70 ರಷ್ಟು ಜನ ವಿದ್ಯಾವಂತರಾಗಿದ್ದರು. ಆಗ ದೇಶದಲ್ಲಿ ನಿರುದ್ಯೋಗ ಸಮಸ್ಯೆಯೂ ಇರಲಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ. ಇಂದ್ರಿ-ಕರ್ನಾಲ್ ರಸ್ತೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಯ ನಂತರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ರಿಟಿಷರ ಆಳ್ವಿಕೆಗೆ ಮೊದಲು, ನಮ್ಮ ದೇಶದ ಜನಸಂಖ್ಯೆಯ 70 ಪ್ರತಿಶತದಷ್ಟು ಜನರು ವಿದ್ಯಾವಂತರಾಗಿದ್ದರು ಮತ್ತು ನಿರುದ್ಯೋಗ ಇರಲಿಲ್ಲ. ಆದರೆ, ಆಗ ಇಂಗ್ಲೆಂಡ್‌ನಲ್ಲಿ ಕೇವಲ ಶೇಕಡಾ 17 ರಷ್ಟು ಜನರು ಮಾತ್ರ ವಿದ್ಯಾವಂತರಾಗಿದ್ದರು ಎಂದು ಮೋಹನ್ ಭಾಗವತ್ ಹೇಳಿದರು. ಬ್ರಿಟಿಷರು ಭಾರತದಲ್ಲಿ ತಮ್ಮ ಶಿಕ್ಷಣ ಮಾದರಿ ಜಾರಿಗೆ ತಂದರು ಮತ್ತು ಅವರ ದೇಶದಲ್ಲಿ ನಮ್ಮ ಮಾದರಿಯನ್ನು ಜಾರಿಗೊಳಿಸಿದರು. ಇದರಿಂದ ಅವರು ಶೇಕಡಾ 70 ರಷ್ಟು ವಿದ್ಯಾವಂತರಾದರು ಮತ್ತು ನಾವು ಶೇಕಡಾ 17 ರಷ್ಟು ವಿದ್ಯಾವಂತರಾಗಿದ್ದೇವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು.

ನಮ್ಮ ಶಿಕ್ಷಣ ವ್ಯವಸ್ಥೆಯು ಉದ್ಯೋಗಕ್ಕಾಗಿ ಮಾತ್ರವಲ್ಲ, ಜ್ಞಾನದ ಮಾಧ್ಯಮವೂ ಆಗಿತ್ತು. ಶಿಕ್ಷಣವು ಅಗ್ಗವಾಗಿತ್ತು ಮತ್ತು ಎಲ್ಲರಿಗೂ ಸಿಗುವಂತಿತ್ತು. ಆದ್ದರಿಂದ ಸಮಾಜವು ಶಿಕ್ಷಣದ ಎಲ್ಲಾ ವೆಚ್ಚ ಭರಿಸಿತ್ತು ಮತ್ತು ಈ ಶಿಕ್ಷಣದಿಂದ ಹೊರಬಂದ ವಿದ್ವಾಂಸರು, ಕಲಾವಿದರು ಮತ್ತು ಕುಶಲಕರ್ಮಿಗಳು ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು. ಸಾರ್ವಜನಿಕರಿಗೆ ಆರೋಗ್ಯ ಸೌಲಭ್ಯ ನೀಡುವ ಆಸ್ಪತ್ರೆ ನಿರ್ಮಿಸುವುದು ಸೇರಿದಂತೆ ಆತಮ್ ಮನೋಹರ ಮುನಿ ಆಶ್ರಮ ಮಾಡಿದ ಕಾರ್ಯವನ್ನು ಭಾಗವತ್ ಶ್ಲಾಘಿಸಿದರು.

ಆರೋಗ್ಯ ಮತ್ತು ಶಿಕ್ಷಣ ಎರಡೂ ದುಬಾರಿ ಅಗುತ್ತಿರುವುದರಿಂದ ಎಲ್ಲರಿಗೂ ಆರೋಗ್ಯ ಮತ್ತು ಶಿಕ್ಷಣವು ನಮ್ಮ ದೇಶದ ಅತಿದೊಡ್ಡ ಅಗತ್ಯವಾಗಿದೆ ಎಂದು ಭಾಗವತ್ ಹೇಳಿದರು. ಸಾಮಾನ್ಯ ಮನುಷ್ಯನಿಗೆ ಅಗ್ಗದ ದರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸುಲಭವಾಗಿ ತಲುಪಿಸುವ ಅಗತ್ಯವಿದೆ ಎಂದರು. ನಾವು ನಮಗಾಗಿ ಮಾತ್ರ ಬದುಕುವವರಲ್ಲ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಸರ್ವಜನ ಹಿತಾಯ ಸರ್ವಜನ ಸುಖಾಯ (ಎಲ್ಲರ ಕಲ್ಯಾಣ-ಎಲ್ಲರಿಗೂ ಸಂತೋಷ) ಪ್ರಜ್ಞೆ ಒಳಗೊಂಡಿವೆ. ಸಮಾಜವನ್ನು ಬಲಪಡಿಸುವ ಮೂಲಕ ಮಾತ್ರ ಜನರು ದೇಶದಲ್ಲಿ ಒಳ್ಳೆಯದನ್ನು ನೋಡಬಹುದು ಎಂದು ಅವರು ಹೇಳಿದರು.

ಗ್ರಾಮಗಳ ಅಭಿವೃದ್ಧಿಗೆ ಜನರು ಒಗ್ಗೂಡಲಿ : ಸಾಮೂಹಿಕ ಪ್ರಯತ್ನದ ಮೂಲಕ ಹಳ್ಳಿಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡುವಂತೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಕರೆ ನೀಡಿದರು. ರಾಜಸ್ಥಾನದ ದುಂಗರಪುರದಲ್ಲಿ ಗ್ರಾಮ ವಿಕಾಸ ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬನೆಯಾಗುವ ಬದಲು ಗ್ರಾಮಗಳ ಅಭಿವೃದ್ಧಿಗೆ ಜನರು ಒಗ್ಗೂಡಬೇಕು ಎಂದು ಕರೆ ನೀಡಿದರು. ನಾವು ಒಟ್ಟಾಗಿ ಕೆಲಸ ಮಾಡಲು ಜನರ ಗುಂಪನ್ನು ರಚಿಸಬೇಕು, ಸಾಮೂಹಿಕ ನಿರ್ಧಾರದ ಮೂಲಕ ಗ್ರಾಮವನ್ನು ಸಿದ್ಧಪಡಿಸಬೇಕು ಎಂದು ಭಾಗವತ್ ಉಲ್ಲೇಖಿಸಿದ್ದಾರೆ.

ಭೀಮಾಯಿಯಲ್ಲಿ ಸ್ವಾಮಿ ವಿವೇಕಾನಂದ ಗ್ರಾಮ ವಿಕಾಸ ಸಮಿತಿ ಆಯೋಜಿಸಿದ್ದ ಗ್ರಾಮ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಗ್ರಾಮಾಭಿವೃದ್ಧಿಯ ಕೆಲಸ ಮೊದಲು ಆರಂಭವಾಗುವುದು ಗ್ರಾಮಸ್ಥರ ಚಿಂತನೆಯಿಂದ ಎಂದು ಹೇಳಿದರು.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.