ಕಡಲೂರು (ತಮಿಳುನಾಡು): ನದಿಯಲ್ಲಿ ಸ್ನಾನ ಮಾಡಲು ಹೋಗಿ 6 ಬಾಲಕಿಯರು ಮತ್ತು ಓರ್ವ ಯುವತಿ ನೀರುಪಾಲಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಡಲೂರಿನ ಬಳಿಯ ಕೆದಿಲಂ ನದಿಯ ಅಣೆಕಟ್ಟೆಯ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ನವನೀತಾ (19), ಸುಮುತಾ (16), ಪ್ರಿಯಾ (17), ಮೋನಿಕಾ (15), ಸಂಗೀತಾ (17), ಪ್ರಿಯದರ್ಶಿನಿ (14) ಮತ್ತು ಕವಿಯಾ (12) ಎಂದು ಗುರುತಿಸಲಾಗಿದೆ.
ಕೆದಿಲಂ ನದಿಯ ಅಣೆಕಟ್ಟೆಯ ಸಮೀಪ ನದಿಯಲ್ಲಿ ಬಾಲಕಿಯರು ಮತ್ತು ಯುವತಿ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ಆಳವನ್ನು ಅರಿಯದ ಇವರು ಒಬ್ಬರ ಹಿಂದೆ ಒಬ್ಬರಂತೆ ನೀರಿನಲ್ಲಿ ಇಳಿದಾಗ ಎಲ್ಲರೂ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ಗೊತ್ತಾಗಿದೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಓದಿ: ಕಂಟೈನರ್ ಡಿಪೋದಲ್ಲಿ ಭಾರಿ ಅಗ್ನಿ ಅವಘಡ: 16 ಮಂದಿ ಸಾವು, 450 ಕ್ಕೂ ಹೆಚ್ಚು ಮಂದಿಗೆ ಗಾಯ