ETV Bharat / bharat

ಬಸ್ - ಡಂಪರ್ ನಡುವೆ ಡಿಕ್ಕಿ: 7 ಮಂದಿ ದುರ್ಮರಣ - madhya pradesh road accident

ಮಧ್ಯಪ್ರದೇಶದ ಭಿಂದ್​ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಸ್-ಡಂಪರ್ ನಡುವೆ ಡಿಕ್ಕಿ
ಬಸ್-ಡಂಪರ್ ನಡುವೆ ಡಿಕ್ಕಿ
author img

By

Published : Oct 1, 2021, 9:30 AM IST

ಭಿಂದ್ (ಮಧ್ಯಪ್ರದೇಶ): ಬಸ್​ ಹಾಗೂ ಡಂಪರ್​ ನಡುವೆ ಡಿಕ್ಕಿಯಾಗಿ ಓರ್ವ ಮಹಿಳೆ ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಭಿಂದ್​ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 719ರಲ್ಲಿ ನಡೆದಿದೆ.

ಇಂದು ಬೆಳಗ್ಗೆ ಗ್ವಾಲಿಯರ್​ನಿಂದ ಬರೇಲಿಗೆ ಹೋಗುತ್ತಿದ್ದ ಬಸ್​ ಇದಾಗಿದ್ದು, ಗೋಹಾದ್​ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇನ್ನೂ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಗೋಹಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಮೈಸೂರು: ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಚಾಲಕ ಸಾವು

ಆಸ್ಪತ್ರೆಗೆ ಭಿಂದ್ ಪೊಲೀಸ್​ ವರಿಷ್ಠಾಧಿಕಾರಿ ಭೇಟಿ ನೀಡಿದ್ದು, ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.