ಬಂಡಿಪೋರಾ(ಶ್ರೀನಗರ): ಬಂಡಿಪೋರಾ ಜಿಲ್ಲೆಯ ಸುಂಬಲ್ ಪ್ರದೇಶದಲ್ಲಿ ಇಂದು ಸಂಜೆ ನಡೆದ ರಸ್ತೆ ಅಪಘಾತವೊಂದರಲ್ಲಿ ಆರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. 164 BN e-coy ಬೆಟಾಲಿಯನ್ಗೆ ಸೇರಿದ್ದ ಯೋಧರು ಗಾಯಗೊಂಡಿದ್ದಾರೆ.
ಯೋಧರು ಪ್ರಯಾಣಿಸುತ್ತಿದ್ದ ವಾಹನ ವಸ್ಕುರಾ ಬಳಿ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಗಾಯಗೊಂಡ ಯೋಧರನ್ನು ಚಿಕಿತ್ಸೆಗೋಸ್ಕರ ಜೆವಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಆತ್ಮಾಹುತಿ ದಾಳಿ: ಇಬ್ಬರು ಉಗ್ರರು ಖತಂ, ಮೂವರು ಯೋಧರು ಹುತಾತ್ಮ
ಮತ್ತೊಂದೆಡೆ ಶ್ರೀನಗರದಲ್ಲಿ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದಿರುವ ಪರಿಣಾಮ ಓರ್ವ ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಜಮ್ಮು- ಕಾಶ್ಮೀರದ ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಶ್ರೀನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ.
-
One grenade was lobbed by terrorist(s) towards security forces on Ali jan road, Eidgah. This caused minor splinter injuries to one CRPF personnel. Cordon and Search operations have been launched to nab culprit(s)
— Srinagar Police (@SrinagarPolice) August 13, 2022 " class="align-text-top noRightClick twitterSection" data="
">One grenade was lobbed by terrorist(s) towards security forces on Ali jan road, Eidgah. This caused minor splinter injuries to one CRPF personnel. Cordon and Search operations have been launched to nab culprit(s)
— Srinagar Police (@SrinagarPolice) August 13, 2022One grenade was lobbed by terrorist(s) towards security forces on Ali jan road, Eidgah. This caused minor splinter injuries to one CRPF personnel. Cordon and Search operations have been launched to nab culprit(s)
— Srinagar Police (@SrinagarPolice) August 13, 2022
ಎರಡು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು.