ETV Bharat / bharat

ಜಾಮ್ತಾರಾ ಗ್ಯಾಂಗ್​ನ 6 ಜನರ ಬಂಧನ: 21 ಸಾವಿರ ಸಿಮ್ ಕಾರ್ಡ್ ವಶ! - ಜಾಮ್ತಾರಾ ವಂಚಕ ಗ್ಯಾಂಗ್​ನ

ಜನರ ಮೊಬೈಲ್​ಗಳಿಗೆ ಕರೆ ಮಾಡಿ ಓಟಿಪಿ ಇತ್ಯಾದಿ ಪಡೆದು ಜನರನ್ನು ವಂಚಿಸುವ, ದೇಶದಲ್ಲಿ ಕುಖ್ಯಾತಿ ಪಡೆದ ಜಾಮ್ತಾರಾ ಗ್ಯಾಂಗ್ ಮೇಲೆ ದೆಹಲಿ ಪೊಲೀಸರು ದಾಳಿ ಮಾಡಿದ್ದಾರೆ.

Jamtara-based fraud syndicate busted by Delhi Police, 21,000 SIM cards seized

author img

By

Published : Apr 19, 2023, 6:44 PM IST

ನವದೆಹಲಿ : ಬ್ಯಾಂಕ್ ಸಿಬ್ಬಂದಿಯ ಹೆಸರಲ್ಲಿ ಫೋನ್ ಮಾಡಿ ಓಟಿಪಿ ಹಾಗೂ ಇತರ ವಿವರಗಳನ್ನು ಪಡೆದು ಗ್ರಾಹಕರ ಖಾತೆಯಿಂದ ಹಣ ಎಗರಿಸುವ ಜಾರ್ಖಂಡ್​ನ ಜಾಮ್ತಾರಾದ ಮಹಾವಂಚಕರ ಜಾಲವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಜಾಮ್ತಾರಾ ವಂಚಕ ಗ್ಯಾಂಗ್​ನ ಆರು ಸದಸ್ಯರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 22,000 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಜಾಮ್ತಾರಾ ನಿವಾಸಿಗಳಾದ ನಿಜಾಮುದ್ದೀನ್ ಅನ್ಸಾರಿ ಅಲಿಯಾಸ್ ನಿಜಾಮ್ (23 ವರ್ಷ), ಅಫ್ರೋಜ್ ಆಲಂ (23 ವರ್ಷ), ಎಂಡಿ ಅಮೀರ್ ಅನ್ಸಾರಿ (22 ವರ್ಷ), ಸರ್ಫರಾಜ್ ಅನ್ಸಾರಿ (22 ವರ್ಷ), ಅಫ್ರೋಜ್ ಅನ್ಸಾರಿ (22 ವರ್ಷ) ಮತ್ತು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಿವಾಸಿ ನಾಸಿಮ್ ಮಲಿತ್ಯ (31 ವರ್ಷ) ಎಂದು ಗುರುತಿಸಲಾಗಿದೆ.

10 ಲಕ್ಷ ರೂ. ವಂಚನೆಗೊಳಗಾದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ಪ್ರಕಾರ, ಪ್ರಸ್ತುತ ದುಬೈನಲ್ಲಿ ನೆಲೆಸಿರುವ ದೂರುದಾರರು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಮಗಳನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದರು ಮತ್ತು ತಮ್ಮ ಬ್ಯಾಂಕ್ ಪಾಸ್‌ಬುಕ್ ಅನ್ನು ನವೀಕರಿಸಲು ಬಯಸಿದ್ದರು. ಇದಕ್ಕಾಗಿ ಆನ್ ಲೈನ್ ನಲ್ಲಿ ಅವರು ಕಸ್ಟಮರ್ ಕೇರ್ ನಂಬರ್ ಹುಡುಕಿದ್ದಾರೆ. ಗೂಗಲ್​ನಲ್ಲಿ ಸಿಕ್ಕಿದ ಕಸ್ಟಮರ್ ಕೇರ್ ನಂಬರ್​ಗೆ ಅವರು ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಆ ಕಡೆಯ ವ್ಯಕ್ತಿಯು ಬ್ಯಾಂಕ್ ಸಿಬ್ಬಂದಿಯಂತೆಯೇ ಮಾತನಾಡಿದ್ದಾನೆ ಮತ್ತು ಹೆಚ್ಚಿನ ಸಹಾಯಕ್ಕಾಗಿ ಪ್ಲೇ ಸ್ಟೋರ್‌ನಿಂದ 'SBI Anydesk' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ದೂರುದಾರರಿಗೆ ಮನವರಿಕೆ ಮಾಡಿದ್ದಾನೆ. ಆ್ಯಪ್ ಡೌನ್ಲೋಡ್ ಮಾಡುವ ಲಿಂಕ್ ಅನ್ನು WhatsApp ಮೂಲಕ ಕಳುಹಿಸಿದ್ದಾನೆ. ಆತ ತನ್ನನ್ನು ತಾನು ಎಸ್‌ಬಿಐ ಕಸ್ಟಮರ್ ಕೇರ್ ಸಿಬ್ಬಂದಿ ಎಂದು ಆತ ಹೇಳಿಕೊಂಡಿದ್ದಾನೆ ಉಪ ಪೊಲೀಸ್ ಆಯುಕ್ತ ರವಿಕುಮಾರ್ ಸಿಂಗ್ ಹೇಳಿದ್ದಾರೆ.

ನಂತರ ವಂಚಕನು ಅವರ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಮಾಡಲು ಕೇಳಿದ್ದಾನೆ. ನಂತರ ಆ ವ್ಯಕ್ತಿಯು ಬ್ಯಾಂಕಿನ ಹಿರಿಯ ಅಧಿಕಾರಿ ಎಂದು ಹೇಳಿಕೊಂಡ ಮತ್ತೊಬ್ಬ ವ್ಯಕ್ತಿಗೆ ಕರೆ ಫಾರ್ವರ್ಡ್ ಮಾಡಿದ್ದಾನೆ. ಇದರ ನಂತರ ರಿಮೋಟ್ ಮೂಲಕ ವಂಚಕರು ಗ್ರಾಹಕರ ಮೊಬೈಲ್ ಫೋನ್‌ಗೆ ಪ್ರವೇಶ ಪಡೆದು ಅವರ ಎಸ್​ಬಿಐ ಖಾತೆಯಿಂದ 9,50,000 ಮತ್ತು 50,000 ರೂ.ಗಳ ಎರಡು ಅನಧಿಕೃತ ವಹಿವಾಟುಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ತನಿಖೆಯ ಸಮಯದಲ್ಲಿ ಕರೆ ಮಾಡಲಾದ ಫೋನ್ ಸಂಖ್ಯೆಗಳ ಕರೆ ವಿವರಗಳ ದಾಖಲೆ, ಹಣ ಸಾಗಿದ ಮೂಲಗಳನ್ನು ತನಿಖೆ ಮಾಡಲಾಯಿತು ಮತ್ತು SBI ಮತ್ತು ಬಿಲ್‌ಡೆಸ್ಕ್ ಪಾವತಿ ಗೇಟ್‌ವೇಯಿಂದ ವಿವರಗಳನ್ನು ಪಡೆಯಲಾಯಿತು.

ಈ ವ್ಯಕ್ತಿಗಳು ತಮ್ಮ ಸ್ಥಳಗಳನ್ನು ಮರೆಮಾಡಲು ಆಗಾಗ್ಗೆ ಗೂಗಲ್ ವೆಬ್‌ಪುಟದ ಗ್ರಾಹಕರ ಫೋನ್ ಸಂಖ್ಯೆಗಳನ್ನು ಬದಲಾಯಿಸುವುದರ ಜೊತೆಗೆ ಕರೆ ಫಾರ್ವರ್ಡ್ ಮಾಡುವ ವಿಧಾನವನ್ನು ಬಳಸಿದ್ದಾರೆಂದು ಕಂಡುಬಂದಿದೆ. ಫೋನ್ ಸಂಖ್ಯೆಗಳು ಮತ್ತು IMEI ಸಂಖ್ಯೆಗಳನ್ನು ತನಿಖೆ ಮಾಡಿದಾಗ, ಈ ವ್ಯಕ್ತಿಗಳು ಪ್ಯಾನ್ ಇಂಡಿಯಾ ಆಧಾರದ ಮೇಲೆ ಸಂಘಟಿತ ಮತ್ತು ವೃತ್ತಿಪರ ರೀತಿಯಲ್ಲಿ ಆನ್‌ಲೈನ್ ಸೈಬರ್ ವಂಚನೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ ಎಂದು ಡಿಸಿಪಿ ಹೇಳಿದರು.

ತನಿಖೆ ಮತ್ತು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ದೆಹಲಿ ಪೊಲೀಸ್ ತಂಡವು ಏಪ್ರಿಲ್ 11 ರಂದು ಜಾರ್ಖಂಡ್ ಪೊಲೀಸರ ತಂಡದೊಂದಿಗೆ ಜಾಮ್ತಾರಾದ ನವದಿಹ್ ಗ್ರಾಮದಲ್ಲಿ ದಾಳಿ ನಡೆಸಿತು. ದಾಳಿಯ ಸಮಯದಲ್ಲಿ ಐದು ಜನರನ್ನು ಬಂಧಿಸಿ, ವಂಚನೆಗಾಗಿ ಬಳಸಿದ ಸಿಮ್ ಕಾರ್ಡ್‌ಗಳನ್ನು ಹೊಂದಿರುವ 25 ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಫೋನ್ ಸಂಖ್ಯೆಗಳು ತನಿಖಾ ವರದಿಯೊಂದಿಗೆ ಹೊಂದಾಣಿಕೆಯಾಗುತ್ತವೆ ಎಂದು ಅಧಿಕಾರಿ ಹೇಳಿದರು. ಮುರ್ಷಿದಾಬಾದ್‌ನಿಂದ ಆಕ್ಟಿವೇಟ್ ಆದ ಸಿಮ್‌ ಕಾರ್ಡ್‌ಗಳನ್ನು ಸೈಬರ್ ವಂಚಕರು ಪಡೆದುಕೊಂಡಿದ್ದು, ಒಂದೇ ಮೊಬೈಲ್‌ನಲ್ಲಿ ದಿನವೊಂದಕ್ಕೆ 300ಕ್ಕೂ ಹೆಚ್ಚು ಸಿಮ್‌ಗಳನ್ನು ಬಳಸಲಾಗಿದೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಆರೋಪಿಗಳ ವಶದಿಂದ ಬಳಸಿದ ಮತ್ತು ಬಳಸದ ಒಟ್ಟು 21,761 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಂಚನೆಗೊಳಗಾದ 10 ಲಕ್ಷ ರೂ.ಗಳಲ್ಲಿ 9.73 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಉಳಿದ 27,000 ರೂ.ಗಳನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ : ಬೆಸ್ಕಾಂ ಹೆಸರಲ್ಲಿ ನಕಲಿ ನೇಮಕಾತಿ ಪ್ರಮಾಣಪತ್ರ: ವಂಚನೆ ವಿರುದ್ಧ ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.