ETV Bharat / bharat

ಯುಪಿ ಚುನಾವಣೆ: ನಾಲ್ಕನೇ ಹಂತದಲ್ಲಿ ಶೇ.57.83 ರಷ್ಟು ಮತದಾನ - ಉತ್ತರಪ್ರದೇಶ ವಿಧಾನಸಭಾ ಚುನಾವಣೆ

ಇಂದು ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಒಟ್ಟು 59 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಶೇ. 57.83 ರಷ್ಟು ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

Fourth Phase completed Of UP Assembly Polls
ಯುಪಿ ಚುನಾವಣೆಯ ನಾಲ್ಕನೇ ಹಂತದ ಮತದಾನ ಪೂರ್ಣ
author img

By

Published : Feb 23, 2022, 9:04 PM IST

ಲಖನೌ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತಗಳ ಮತದಾನವೂ ಪೂರ್ಣಗೊಂಡಿದ್ದು, ಶೇ.57.83ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣಾ ಆಯೋಗವು ಜಿಲ್ಲಾವಾರು ಮಾಹಿತಿ ನೀಡಿದೆ. ಬಂದಾ ಜಿಲ್ಲೆಯಲ್ಲಿ ಶೇ.57.48, ಫತೇಪುರ್ ಶೇ.57.38, ಹರ್ದೋಯ್ ಶೇ.56.51, ಖೇರಿ ಶೇ.62.74, ಲಖನೌ ಶೇ.54.98, ಪಿಲಿಭಿತ್ ಶೇ.61.42, ರಾಯ್ ಬರೇಲಿ ಶೇ.22 ಶೇ, ಸೀತಾಪುರದಲ್ಲಿ ಶೇ.58.30, ಉನ್ನಾವೋದಲ್ಲಿ ಶೇ.54.12ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂಬತ್ತು ಜಿಲ್ಲೆಗಳಲ್ಲಿ ಸುಮಾರು 1.14 ಕೋಟಿ ಪುರುಷರು, 99.3 ಲಕ್ಷ ಮಹಿಳೆಯರು ಮತ್ತು 966 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2.13 ಕೋಟಿ ಮತದಾರರಿದ್ದಾರೆ. ಇಂದು 59 ಸ್ಥಾನಗಳಿಗೆ ಮತದಾನ ನಡೆದಿದ್ದು, 624 ಅಭ್ಯರ್ಥಿಗಳು ಕಣದಲ್ಲಿದ್ದರು. ಇಂದು 24,643 ಮತಗಟ್ಟೆಗಳು ಮತ್ತು 13,817 ಮತದಾನ ಕೇಂದ್ರಗಳಲ್ಲಿ ಮತದಾನ ನಡೆದಿದ್ದು, ಪ್ರತಿ ಬೂತ್‌ಗೆ ಗರಿಷ್ಠ 1,250 ಮತದಾರರಿದ್ದಾರೆ ಎಂದು ಚುನಾವಣಾ ಆಯೋಗದ ಮಾಹಿತಿ ನೀಡಿದೆ.

ಇದನ್ನೂ ಓದಿ: ಲೂಡೋಗಾಗಿ ರೈಲಿನಲ್ಲೇ ಲಡಾಯಿ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಉತ್ತರಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಇಂದಿನ ಮತದಾನ ಸೇರಿದಂತೆ ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದೆ. ಇನ್ನೂ ಮೂರು ಹಂತಗಳ ಮತದಾನ ಬಾಕಿಯಿದ್ದು, ಮಾರ್ಚ್​ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.