ETV Bharat / bharat

ಹ್ಯಾಪಿ ಹುಟ್ದಬ್ಬ.. ವಿಶ್ವದ ಮೊದಲ ATMಗೆ 54ರ ಸಂಭ್ರಮ

24x7 ಸಮಯದಲ್ಲಿ Any Time Money ನೀಡುವ ಎಟಿಎಂ ಕಾರ್ಯರೂಪಕ್ಕೆ ಬಂದು ಇಂದಿಗೆ 54 ವರ್ಷಗಳು ತುಂಬಿವೆ.

atm
ವಿಶ್ವದ ಮೊದಲ ಎಟಿಎಂಗೆ 54ರ ಸಂಭ್ರಮ
author img

By

Published : Jun 27, 2021, 7:56 AM IST

Updated : Jun 27, 2021, 8:19 AM IST

ಹೈದರಾಬಾದ್: ಜನರು ತಮ್ಮ ಹಣವನ್ನು ಪಡೆಯುವ ವ್ಯವಸ್ಥೆಯಲ್ಲಿ ಬದಲಾವಣೆಯಾಗಿ ಐದು ದಶಕಗಳು ಸಂದಿದ್ದು, ಜಗತ್ತಿನ ಮೊಟ್ಟ ಮೊದಲ ಎಟಿಎಂ (ಸ್ವಯಂಚಾಲಿತ ಟೆಲ್ಲರ್ ಯಂತ್ರ) ಇಂದು ತನ್ನ 54ನೇ ಜನ್ಮದಿನವನ್ನ ಆಚರಿಸಿಕೊಳ್ಳುತ್ತಿದೆ. ಜನರ ಜೀವನದ ಅತಿ ಅವಶ್ಯಕ ಭಾಗವಾದ, ಅದರಲ್ಲಿಯೂ ಕೋವಿಡ್​-19 ನಂತಹ ಭೀಕರ ಸಮಯದಲ್ಲಿ ಬೆಟ್ಟದಷ್ಟು ಸಹಾಯ ಮಾಡಿದ ಎಟಿಎಂಗೆ ಹುಟ್ಟು ಹಬ್ಬದ ಶುಭಾಶಯಗಳು.

ಹೌದ, 1967ರ ಜೂನ್ 27 ರಂದು ಲಂಡನ್‌ನಲ್ಲಿ ಜಗತ್ತಿನ ಮೊದಲ ಎಟಿಎಂ ಸ್ಥಾಪನೆಯಾಯಿತು. ಲಂಡನ್‌ನ ಎನ್‌ಫೀಲ್ಡ್ ಪ್ರದೇಶದಲ್ಲಿರುವ ಬಾರ್ಕ್ಲೇಸ್ ಬ್ಯಾಂಕಿನ ಶಾಖೆಯಲ್ಲಿ ಎಟಿಎಂನ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡಲಾಯಿತು. ಇಂಗ್ಲಿಷ್ ನಟ ರೆಗ್ ವಾರ್ನಿ ಅವರು ಈ ಚೊಚ್ಚಲ ಯಂತ್ರದಿಂದ ಹಣವನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ.

atm
ಜಗತ್ತಿನ ಮೊಟ್ಟ ಮೊದಲ ಎಟಿಎಂ

ಇದೀಗ ಎಟಿಎಂಗಳ ಜಾಲವು ಎಲ್ಲಡೆ ಹರಡಿದ್ದು, ಜಗತ್ತಿನಾದ್ಯಂತ 3.5 ಮಿಲಿಯನ್​ ಎಟಿಎಂಗಳು ಚಾಲ್ತಿಯಲ್ಲಿವೆ. ಮೊದಲಿನಂತೆ ಕೆಲಸ-ಕಾರ್ಯ ಬಿಟ್ಟು, ಬ್ಯಾಂಕ್​​ನಲ್ಲಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಚಲನ್​ಗಳನ್ನ ತುಂಬಿ ನಗದು ಪಡೆಯುವ ಅವಶ್ಯಕತೆಯಿಲ್ಲ. ಬ್ಯಾಂಕ್​​ನಲ್ಲಿ ಒಂದು ಬಾರಿ ಪಡೆದ ಡೆಬಿಟ್-ಕ್ರಡೆಟ್​ ಕಾರ್ಡ್ ಬಳಸಿ ಎಟಿಎಂ ನಲ್ಲಿ ನಾಲ್ಕು-ಅಂಕಿಯ ಪಿನ್ ನಮೂದಿಸಿದರೆ ಸಾಕು ಹಣ ಸಿಗುತ್ತದೆ.

ಭಾರತಕ್ಕೆ ATM..

1987ರಲ್ಲಿ ಭಾರತದಲ್ಲಿ ಮೊದಲ ಎಟಿಎಂ ಅನ್ನು ಸ್ಥಾಪಿಸಲಾಯಿತು. ಹಾಂಗ್ ಕಾಂಗ್ ಮತ್ತು ಶಾಂಘೈ ಬ್ಯಾಂಕಿಂಗ್ ಕಾರ್ಪೊರೇಷನ್ (ಎಚ್‌ಎಸ್‌ಬಿಸಿ) ಬ್ಯಾಂಕ್​​ನ ಮುಂಬೈನ ಶಾಖೆಯಲ್ಲಿ ಮೊದಲ ಎಟಿಎಂ ಸ್ಥಾಪನೆಯಾಯಿತು. ಆರ್‌ಬಿಐ ಅಂಕಿ-ಅಂಶಗಳ ಪ್ರಕಾರ, 2020ರ ಸೆಪ್ಟೆಂಬರ್ ವರೆಗೆ ದೇಶದಲ್ಲಿ 2,34,244 ಯಂತ್ರಗಳನ್ನು ಅಳವಡಿಸಲಾಗಿದೆ.

atm
ಆಧುನಿಕ ಎಟಿಎಂ

24x7 ಸಮಯದಲ್ಲಿ Any Time Money ನೀಡುವ ಈ ಯಂತ್ರ ಕೊರೊನಾ ಸಂಕಷ್ಟದ ಕಾಲದಲ್ಲಿ ಜನರ ತುರ್ತು ಪರಿಸ್ಥಿತಿಗೆ ಸಹಕಾರಿಯಾಗಿದೆ. ಕೋವಿಡ್​ ಮಾತ್ರವಲ್ಲ, ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ಆಪತ್ಬಾಂಧವನಾದ ಎಟಿಎಂ ನಿಂದ ಸಮಯ-ಶ್ರಮ ಉಳಿತಾಯವಾಗುತ್ತದೆ.

Last Updated : Jun 27, 2021, 8:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.