ETV Bharat / entertainment

ಡ್ರಾಮಾಗೆ ಅವಕಾಶ ಕೊಡದ ಸುದೀಪ್: ಬಾಗಿಲು ತೆರೆದಮೇಲೆ ಹೋಗಲ್ಲವೆಂದ ಶೋಭಾ ಶೆಟ್ಟಿ - SHOBHA SHETTY

ನಟಿ ಶೋಭಾ ಶೆಟ್ಟಿ ಬಿಗ್​ ಬಾಸ್​ನಿಂದ ಹೊರ ಹೋಗುತ್ತೇನೆಂದು ಪಟ್ಟು ಹಿಡಿದಿದ್ದರು. ಬಾಗಿಲು ತೆರೆದ ಮೇಲೆ ಹೋಗಲ್ಲವೆಂದು ತಿಳಿಸಿದ್ದಾರೆ. ಮುಂದೇನಾಗಲಿದೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

Shobha Shetty
ಶೋಭಾ ಶೆಟ್ಟಿ (Photo: Bigg Boss team)
author img

By ETV Bharat Entertainment Team

Published : Dec 2, 2024, 12:43 PM IST

ಬಿಗ್​ ಬಾಸ್​ ಕನ್ನಡದ ಇತಿಹಾಸದಲ್ಲೇ ನಡೆಯದಿರೋ ಒಂದು ಘಟನೆ ಕಳೆದ ದಿನ ನಡೆದಿದೆ. ಒಮ್ಮೆ ನನ್ನ ಕೈಲಿ ಇಲ್ಲಿರಲು ಆಗುತ್ತಿಲ್ಲ, ಮತ್ತೊಮ್ಮೆ ಹೋಗುತ್ತೇನೆ ಕಳುಹಿಸಿಕೊಡಿ ಎಂದು ಗೋಗರೆದ ಶೋಭಾ ಶೆಟ್ಟಿ ಅವರೀಗ ಮನೆಯಿಂದ ಹೋಗಲ್ಲ ಎಂದು ತಿಳಿಸಿದ್ದಾರೆ. ಇದು ಬಿಗ್​ ಬಾಸ್​ ತಂಡ ಮತ್ತು ನೋಡುಗರಿಗೆ ಕೊಂಚ ವಿಚಿತ್ರ ಅನಿಸೋದು ಸಹಜ.

''ಬಾಗಿಲು ತೆರೆದಾಯ್ತು, ಈಗ ಆಟ ನಿಲ್ಲುತ್ತಾ?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್ ಬಾಸ್​​ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ವೀಕ್ಷಕರು ಕಾತರರಾಗಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿ ಮನೆಯಿಂದ ಹೋಗುತ್ತಾರೋ? ಇಲ್ಲವೋ ಎಂಬ ಕುತೂಹಲ ಕನ್ನಡಿಗರಲ್ಲಿದೆ.

ಬಿಗ್​ ಬಾಸ್​​ ಕನ್ನಡ ಸೀಸನ್​​ 11ಕ್ಕೆ ಎರಡು ವಾರಗಳ ಹಿಂದಷ್ಟೇ ಶೋಭಾ ಶೆಟ್ಟಿ ಎಂಟ್ರಿ ಕೊಟ್ರು. ಶೋಭಾ ಅವರ ಜೊತೆ ರಜತ್​ ಕಿಶನ್​ ಕೂಡಾ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶಿಸಿದರು. ಈ ಇಬ್ಬರ ಎಂಟ್ರಿ ಸಖತ್​ ಗ್ರ್ಯಾಂಡ್​ ಆಗಿಯೇ ಆಗಿತ್ತು. ಮನೆಯೊಳಗೆ ಪ್ರವೇಶಿಸಿದ ದಿನವೇ ಹಳೇ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ನೇರನುಡಿಗಳಿಂದ ಟಫ್​ ಕಂಟಸ್ಟೆಂಟ್​ ಎಂದು ಫೇಮಸ್​ ಕೂಡಾ ಆದ್ರು. ಅಲ್ಲದೇ, ಶೋಭಾ ಶೆಟ್ಟಿ ಅವರು ಎರಡನೇ ದಿನವೇ ತಮ್ಮ ದನಿ ಏರಿಸೋ ಮೂಲಕ ಹೆಚ್ಚಿನವರ ಗಮನ ಸೆಳೆದಿದ್ದರು. ಉಗ್ರಂ ಮಂಜು ಅವರ ವಿರುದ್ಧ ಮಾತಿನ ಮಳೆ ಸುರಿಸಿ, ಬಹುತೇಕರ ಹುಬ್ಬೇರಿಸಿದ್ದರು. ಆದರೆ, ಆರೋಗ್ಯ ಸಮಸ್ಯೆ ನಟಿಗೆ ಅಡ್ಡಿಯಾದಂತೆ ತೋರುತ್ತಿದೆ. ಈ ವಾರ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಬಹುಮತಗಳೊಂದಿಗೆ ಶೋಭಾ ಅವರು ಎಲಿಮಿನೇಷನ್​ನಿಂದ ಸೇವ್​ ಆದ್ರು. ಅದಾಗ್ಯೂ, ಸೂಪರ್​ ಸಂಡೆ ವಿತ್ ಸುದೀಪ್​​ ಸಂಚಿಕೆಯಲ್ಲಿ ನಾನು ಮನೆಯಿಂದ ಹೊರ ಹೋಗುತ್ತೇನೆಂದು ತಿಳಿಸಿಬಿಟ್ಟರು. ಒಮ್ಮೆ ಅಭಿನಯ ಚಕ್ರವರ್ತಿ, ತಮ್ಮ ಜಾಣ್ಮೆಯ ನುಡಿಗಳ ಮೂಲಕ ಶೋಭಾ ಅವರಿಗೆ ಸ್ಪೂರ್ತಿ ತುಂಬಿ ಇಲ್ಲೇ ಉಳಿಯುಂತೆ ಮಾಡಿದ್ರು. ಎಲಿಮಿನೇಷನ್​ ತೂಗುಗತ್ತಿಯಲ್ಲಿ, ಕೊನೆಗೆ ಚೈತ್ರಾ, ಶಿಶಿರ್​, ಐಶ್ವರ್ಯಾ ಉಳಿದುಕೊಂಡಿದ್ದರು. ಚೈತ್ರಾ ಸೇವ್​ ಆಗಿ ಕೊನೆಗೆ ಇಬ್ಬರಲ್ಲಿ ಇಬ್ಬರು ಹೋರಹೋಗುವ ವಿಷಯ ಬಂದಾಗ ಮತ್ತೆ ಮಾತನಾಡಲು ಅವಕಾಶ ಕೊಡಿ ಎಂದು ಶೋಭಾ ಕೇಳಿಕೊಂಡರು. ಸುದೀಪ್​ ಅವಕಾಶ ಕೊಡಲಿಲ್ಲ. ಗೋಗರೆದ ಹಿನ್ನೆಲೆ ಮಾತನಾಡಲು ಬಿಟ್ಟರು. ಆಗ ಕೂಡಾ ಶೆಟ್ಟಿ ನಾನು ಮನೆಯಿಂದ ಹೊರಹೋಗುತ್ತೇನೆಂದು ಹಠ ಹಿಡಿದರು. ಮತಗಳನ್ನು ಹಾಕಿ ಶೋಭಾ ಅವರನ್ನು ಸೇವ್​ ಮಾಡಿದ ಪ್ರೇಕ್ಷಕರಿಗೆ ಕ್ಷಮೆ ಕೇಳಿದ ಸುದೀಪ್​​, ಶೋಭಾ ಅವರಿಗೆ ಹೊರಡಲು ಅವಕಾಶ ಕೊಟ್ಟರು. ಅಸಮಾಧಾನಗೊಂಡ ಸುದೀಪ್​ ಅವರು ಸಂಚಿಕೆಯನ್ನು ಅಲ್ಲಿಗೆ ಪೂರ್ಣಗೊಳಿಸಿ ಹೊರಟುಬಿಟ್ಟರು.

ಇದನ್ನೂ ಓದಿ: ಕನ್ನಡ ಕಿರುತೆರೆಯ ಜನಪ್ರಿಯ ನಟಿ, 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ

ಈ ಮಧ್ಯೆ ವೋಟ್​ ಮಾಡಿದ ಜನರಿಗೆ ಏನು ಬೆಲೆ ಕೊಡುತ್ತಿದ್ದೀರಿ ನೀವು? ಇದಕ್ಕೂ ಮೊದಲು ಮಾತನಾಡಿದ್ದು ಡ್ರಾಮಾನಾ? ನನ್ನ ಮಾತಿಗೆ, ಜನರ ಮತಗಳಿಗೆ ಬೆಲೆ ಕೊಡದವರ ಬಗ್ಗೆ ಯಾವುದೇ ಸಿಂಪಥಿ ಬೇಡ. ಡ್ರಾಮಾ ಸಹಿಸಲು ಸಾಧ್ಯವಿಲ್ಲ. ಈ ರೀತಿ ಯಾವತ್ತೂ ನಡೆದಿಲ್ಲ ಎಂದು ಸುದೀಪ್​ ತಮ್ಮ ಅಸಮಾಧಾನಗಳನ್ನು ಹೊರಹಾಕಿದರು.

ಇದನ್ನೂ ಓದಿ: 'ಯಾರ್​ ಹೇಳಿದ್ರು ನಂಬಿ ಅಂತಾ?': ಮೋಕ್ಷಿತಾ, ಮಂಜು, ಗೌತಮಿಗೆ ಕಿಚ್ಚನ ಕ್ಲಾಸ್​​; ಇವ್ರ ಬಗ್ಗೆ ನಿಮ್ಮ ಅನಿಸಿಕೆಯೇನು?

ಇಂದು ಅನಾವರಣಗೊಂಡಿರುವ ಸಂಚಿಕೆಯಲ್ಲಿ, ಬಿಗ್​ ಬಾಸ್​​ ಮೈನ್​ ಡೋರ್​ ಅನ್ನು ತೆರೆದಿದ್ದಾರೆ. ಶೋಭಾ ಅವರಿಗೆ, ಈ ಕೂಡಲೇ ಮುಖ್ಯದ್ವಾರದ ಮೂಲಕ ಹೊರಬರುವಂತೆ ಸೂಚಿಸಲಾಗಿದೆ. ತನ್ನ ಪರಿಸ್ಥಿತಿಗೆ ಕಣ್ಣೀರಿಟ್ಟ ಶೆಟ್ಟಿ, ನಾನು ಇಷ್ಟು ಬೇಗ ಗಿವ್​ಅಪ್​ ಮಾಡೋಳಲ್ಲ. ಒಂದು ವಾರ ಟೈಮ್​ ತಗೊಂಡು ನಾನೇನು ಪ್ರೂವ್​ ಮಾಡಿಕೊಳ್ಳಲಿಲ್ಲ ಅಂದ್ರೆ ನನ್ನನ್ನು ನಾನು ಕ್ಷಮಿಸಿಕೊಳ್ಳೋದಿಲ್ಲ. ದಯವಿಟ್ಟು ನನ್ನ ತಪ್ಪನ್ನು ಕ್ಷಮಿಸಿಬಿಡಿ. ದ್ವಾರದ ಬಳಿ ನಿಂತು, ಬಿಗ್​ ಬಾಸ್ ನನಗೆ ಹೊರ ಹೋಗಬೇಕೆಂದು ಅನಿಸುತ್ತಿಲ್ಲ ಎಂದೇಳಿ ಕಣ್ಣೀರಿಟ್ಟಿದ್ದಾರೆ. ಶೋಭಾ ಶೆಟ್ಟಿ ಹೊರ ಹೋದ್ರಾ? ಅಥವಾ ಮನೆಯಲ್ಲೇ ಉಳಿದುಕೊಂಡ್ರಾ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.