ಥಾಣೆ, ಮಹಾರಾಷ್ಟ್ರ: ಜಿಲ್ಲೆಯ ಡೊಂಬಿವಲಿ ನಗರದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಡ್ಯಾನ್ಸ್ ಬಾರ್ ಮೇಲೆ ದಾಳಿ ನಡೆಸಿದ ಪೊಲೀಸರು ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದ 26 ಮಹಿಳೆಯರು ಸೇರಿದಂತೆ 53 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಬಾರ್ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ಮಾಹಿತಿ ದೊರೆತ್ತಿತ್ತು. ಹೀಗಾಗಿ ಶನಿವಾರ ರಾತ್ರಿ ಇಬ್ಬರು ಪೊಲೀಸ್ ಸಿಬ್ಬಂದಿಯರನ್ನು ಗ್ರಾಹಕರ ವೇಷದಲ್ಲಿ ಬಾರ್‌ಗೆ ಕಳುಹಿಸಲಾಗಿತ್ತು. ಅವರು ಅಕ್ರಮ ಚಟುವಟಿಕೆಗಳನ್ನು ಖಚಿತಪಡಿಸಿದ ನಂತರ ಪೊಲೀಸರು ಬಾರ್ ಮೇಲೆ ದಾಳಿ ನಡೆಸಿದರು. 30,000 ಮೌಲ್ಯದ ಸಂಗೀತ ಪರಿಕರಗಳು ಮತ್ತು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಮೀಪದಲ್ಲಿ ಯಾವುದೇ ಅಶ್ಲೀಲ ಹಾಡು, ಲಾವಣಿ ಅಥವಾ ಪದಗಳನ್ನು ಹಾಡುವುದು, ಹೇಳುವುದು ಅಥವಾ ಉಚ್ಚರಿಸುವುದು ಅಪರಾಧ) ಮತ್ತು 114 (ಅಪರಾಧ ಸ್ಥಳದಲ್ಲಿ ಉಪಸ್ಥಿತರಿರುವವರು) ಅಡಿ 53 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರೆಲ್ಲರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಪ್ರಕರಣ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು.
ಓದಿ : ಮಗಳ ಮದುವೆಯಲ್ಲಿ ಸಚಿವ ಆನಂದ್ ಸಿಂಗ್‌ರಿಂದ ನಾಗಿನ್ ಡ್ಯಾನ್ಸ್: ವಿಡಿಯೋ