ETV Bharat / bharat

500 ಕೆಜಿ ಚಿನ್ನ ಸಾಲ ಅವ್ಯವಹಾರ ಪ್ರಕರಣ: ಪರಾರಿಯಾಗಿದ್ದ ಐವರ ಬಂಧನ! - 500 ಕೆ.ಜಿ. ಚಿನ್ನ ಹಗರಣ

ಅಡಕ್ಕಿಟ್ಟಿದ್ದ 34 ಕೋಟಿ ರೂ. ಮೌಲ್ಯದ 500 ಕೆ.ಜಿ. ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಐವರನ್ನು ಪೊಲೀಸರು ಬಂಧಿಸಿ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

arrest
arrest
author img

By

Published : Jan 26, 2021, 9:43 PM IST

Updated : Jan 26, 2021, 9:54 PM IST

ಚೆನ್ನೈ (ತಮಿಳುನಾಡು): ಬಡ್ಡಿರಹಿತ ಸಾಲ ಹಗರಣಕ್ಕೆ ಸಂಬಂಧಿಸಿದಂತೆ 500 ಕೆ.ಜಿ. ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಐವರನ್ನು ತೆಲಂಗಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. 34 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ:

ಚೆನ್ನೈನಲ್ಲಿ ರೂಬಿ ಜ್ಯುವೆಲ್ಲರ್ಸ್ ಮತ್ತು ಬ್ಯಾಂಕರ್ಸ್ ಎಂಬ ಹೆಸರಿನಲ್ಲಿ ಚಿನ್ನದ ಆಭರಣಗಳನ್ನು ಅಡ ಇಡುವ ಅಂಗಡಿ ತೆರೆಯಲಾಗಿತ್ತು. ಬಳಿಕ ಬಡ್ಡಿರಹಿತವಾಗಿ ಆಭರಣ ಅಡ ಇಡುವಂತೆ ಜಾಹೀರಾತನ್ನು ನೀಡಲಾಗಿತ್ತು.

ಇದನ್ನು ನೋಡಿ ಹಲವರು ಚಿನ್ನ ಅಡಕ್ಕಿಟ್ಟಿದ್ದರು. ಒಟ್ಟು 500 ಕೆ.ಜಿ. ಚಿನ್ನದ ಆಭರಣಗಳನ್ನು ಆ ಅಂಗಡಿಯಲ್ಲಿ ಅಡಕ್ಕೆ ಇಡಲಾಗಿತ್ತು. ಆದರೆ, ಚಿನ್ನ ಪಡೆದ ನಂತರ ಆರೋಪಿಗಳು ಪರಾರಿಯಾಗಿದ್ದರು. ಆದ್ದರಿಂದ, ವ್ಯಾಸರ್‌ಪಾಡಿಯ ಉಮರ್ ಅಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ, ತೆಲಂಗಾಣದಲ್ಲಿ ಐವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಸೈಯದ್ ರಘುಮನ್, ಅವರ ಸಹೋದರ ಅನಿಸೂರ್ ರಘುಮನ್ ಮತ್ತು ಉದ್ಯೋಗಿಗಳಾದ ರಿಕಾನಾ, ಸಜಿತಾ ಮತ್ತು ಶಾಹಿನಾ ಎಂದು ಗುರುತಿಸಲಾಗಿದೆ.

Last Updated : Jan 26, 2021, 9:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.