ಚೆನ್ನೈ ( ತಮಿಳುನಾಡು ) : ದುಬೈನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ 50 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿಶೇಷ ವಿಮಾನದಲ್ಲಿ ದುಬೈನಿಂದ ಆಗಮಿಸಿದ ಚೆನ್ನೈನ ಶರೂನ್ ರಸೀದ್ (22) ಮತ್ತು ರಾಮನಾಥಪುರಂನ ಮೊಹಮ್ಮದ್ ಮನುವಾಯಿ (35) ಎಂಬುವರನ್ನು ಕಳ್ಳ ಸಾಗಾಣಿಕೆ ಅನುಮಾನದ ಮೇಲೆ ಕಸ್ಟಮ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು.
ಓದಿ : ಇದ್ಯಾಕೋ ಅತಿಯಾಯ್ತು.. ಚಲಿಸುವ ಕಾರಿನಲ್ಲಿಯೇ ಯುವಕರ ಹುಚ್ಚಾಟ : ವಿಡಿಯೋ
ಈ ವೇಳೆ ಒಳ ಉಡುಪು ಮತ್ತು ಪ್ಯಾಂಟ್ ಜೇಬಿನಲ್ಲಿ ಚಿನ್ನದ ಬಿಸ್ಕತ್ತು ಮತ್ತು ಚಿನ್ನದ ಪೇಸ್ಟ್ ಪತ್ತೆಯಾಗಿವೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ ₹50 ಲಕ್ಷ ಎಂದು ಅಂದಾಜಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.