ಗೋಪೇಶ್ವರ(ಉತ್ತರಾಖಂಡ): ಉತ್ತರಾಖಂಡ ಜೋಶಿಮಠದ ಸುಮಾರು 50 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಹಿಮಾಲಯ ಪ್ರದೇಶದಲ್ಲಿ ಭೂಕಂಪನಗಳಿಂದ ಹಲವು ಮನೆಗಳು ಬಿರುಕು ಬಿಟ್ಟಿವೆ. ಅದಕ್ಕಾಗಿಯೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಇಲ್ಲಿಯವರೆಗೆ ಬಿರುಕು ಬಿಟ್ಟ ಮನೆಗಳಲ್ಲಿ ವಾಸಿಸುತ್ತಿದ್ದ 47 ಕುಟುಂಬಗಳನ್ನು ತಾತ್ಕಾಲಿಕವಾಗಿ ನಗರ ಪಾಲಿಕೆ ಭವನ, ಪ್ರಾಥಮಿಕ ಶಾಲಾ ಕಟ್ಟಡ, ಮಿಲನ್ ಕೇಂದ್ರ, ಬಿಕೆಟಿಸಿ ಅತಿಥಿ ಗೃಹ, ಜಿಐಸಿ, ಗುರುದ್ವಾರ, ಅಂತರ ಕಾಲೇಜು ಕಟ್ಟಡ ಮತ್ತು ಐಟಿಐ ತಪೋವನ ಸೇರಿದಂತೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಕೆ ಜೋಶಿ ಮಾಹಿತಿ ನೀಡಿದರು. ರವಿಗ್ರಾಮದಲ್ಲಿ 153, ಗಾಂಧಿನಗರದಲ್ಲಿ 127, ಮನೋಹರಬಾಗ್‌ನಲ್ಲಿ 71, ಸಿಂಗ್‌ಧಾರ್‌ನಲ್ಲಿ 52, ಪರ್ಸಾರಿಯಲ್ಲಿ 50, ಮೇಲ್ಬಜಾರ್‌ನಲ್ಲಿ 29, ಸುನೀಲ್‌ನಲ್ಲಿ 27, ಮಾರ್ವಾಡಿಯಲ್ಲಿ 28, ಲೋವರ್ ಬಜಾರ್‌ನಲ್ಲಿ 24 ಸೇರಿದಂತೆ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಇದುವರೆಗೆ 561 ಮನೆಗಳು ಬಿರುಕು ಬಿಟ್ಟಿವೆ ಎಂದು ಜೋಶಿ ಹೇಳಿದರು.
ಮನೆಗಳ ಹಾನಿಯ ಪ್ರಮಾಣವು ಹೆಚ್ಚಿದ್ದು, ಇದುವರೆಗೆ ಹಾನಿಗೊಳಗಾದ 47 ಕುಟುಂಬಗಳನ್ನು ಪಟ್ಟಣದಿಂದ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಡಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಕುಟುಂಬಗಳನ್ನು ಸ್ಥಳಾಂತರಿಸಲಾಗುತ್ತದೆ. ಕೆಲವು ಕುಟುಂಬಗಳನ್ನು ಸದ್ಯಕ್ಕೆ ಅವರ ಸಂಬಂಧಿಕರ ಮನೆಯಲ್ಲಿ ಇರುವಂತೆ ಹೇಳಲಾಗಿದೆ ಎಂದು ತಿಳಿಸಿದರು.
ಜೋಶಿಮಠಕ್ಕೆ ಸಿಎಂ ಭೇಟಿ: ಜೋಶಿಮಠದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಪರಿಸ್ಥಿತಿಯನ್ನು ಅವಲೋಕಿಸಲು ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಪರಿಸ್ಥಿತಿಯ ಬಗ್ಗೆ ಅವಲೋಕಿಸಲು ಗರ್ವಾಲ್ ಕಮಿಷನರ್ ಸುಶೀಲ್ ಕುಮಾರ್, ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ, ವಿಪತ್ತು ನಿರ್ವಹಣಾ ಸಿಇಒ ಪಿಯೂಷ್ ರೌಟೇಲಾ, ಎನ್‌ಡಿಆರ್‌ಎಫ್ ಉಪ ಕಮಾಂಡೆಂಟ್ ರೋಹಿತಾಶ್ವ ಮಿಶ್ರಾ, ಶಾಂತನು ಸಿರ್ಕಾರ್ ಮತ್ತು ಐಐಟಿ ರೂರ್ಕಿ ಪ್ರಾಧ್ಯಾಪಕ ಬಿ.ಕೆ ಮಹೇಶ್ವರಿ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಜೋಶಿಮಠಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬಳಿಕ ಮಾಹಿತಿ ನೀಡಿದ ಅಧಿಕಾರಿಯೊಬ್ಬರು ಪರಿಸ್ಥಿತಿಯ ವಿವರವಾದ ಸಮೀಕ್ಷೆಯನ್ನು ಮಾಡಲಾಗುತ್ತಿದೆ ಮತ್ತು ಅಪಾಯದಲ್ಲಿರುವ ಮನೆಗಳನ್ನು ಗುರುತಿಸಲಾಗುತ್ತಿದೆ. ಅಲ್ಲದೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಅವರು ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಪೊಲೀಸರನ್ನು ಅಲರ್ಟ್‌ನಲ್ಲಿ ಇರುವಂತೆ ಕೋರಲಾಗಿದೆ ಎಂದರು.
ಸಂತ್ರಸ್ತ ಕುಟುಂಬಗಳಿಗೆ ಮುಂಗಡವಾಗಿ ತಲಾ 2,000 ಪ್ರಿ-ಫ್ಯಾಬ್ರಿಕೇಟೆಡ್ ಮನೆಗಳನ್ನು ನಿರ್ಮಿಸಲು ಎನ್‌ಟಿಪಿಸಿ ಮತ್ತು ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿ (ಎಚ್‌ಸಿಸಿ)ಗೆ ಕೇಳಲಾಗಿದೆ. ಸಂತ್ರಸ್ತರ ಸುರಕ್ಷತೆಗೆ ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ‘ವಲಯ–ವಿ’ ಪ್ರದೇಶದ ಸಮೀಕ್ಷೆ ನಡೆಸಲು ತಜ್ಞರ ತಂಡವನ್ನು ರಚಿಸಲಾಗಿದೆ.
ಸರ್ಕಾರದ ವಿರುದ್ಧ ಪ್ರತಿಭಟನೆ: ಇಲ್ಲಿನ ನಿವಾಸಿಗಳ ಪರಿಸ್ಥಿತಿಯನ್ನು ಕಂಡ ಸರ್ಕಾರವು ಬಿರುಕು ಬಿಟ್ಟ ಮನೆಗಳಿಂದ ಜನರನ್ನು ಸ್ಥಳಾಂತರಿಸುವ ಬಗ್ಗೆ ಪ್ರಸ್ತಾಪಿಸಿತ್ತು. ಇದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆಯನ್ನು ನಡೆಸಿದರು. ನಾವು ಇಂದು ಈ ಪರಿಸ್ಥಿತಿಗೆ ಬರಲು ಸರ್ಕಾರದ ಎನ್‌ಟಿಪಿಸಿ ಯೋಜನೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರ ಮನವೊಲಿಸಲು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಅಭಿಷೇಕ್ ತ್ರಿಪಾಠಿ ಸ್ಥಳಕ್ಕೆ ಆಗಮಿಸಿದ್ದರು. ಆದರೆ ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಫಲಿಸಿದ ಸಮ್ಮೇದ್ ಶಿಖರ್ಜಿ ಹೋರಾಟ: ಕೇಂದ್ರದಿಂದ ಮಹತ್ವದ ಆದೇಶ, ಜೈನರ ಪ್ರತಿಭಟನೆ ಸ್ಥಗಿತ