ETV Bharat / bharat

ಸೀಲಿಂಕ್‌ ಬಳಿ ಭೀಕರ ರಸ್ತೆ ಅಪಘಾತ: 5 ಜನ ಸಾವು, 6 ಮಂದಿಗೆ ಗಂಭೀರ ಗಾಯ

ಬಾಂದ್ರಾ ವರ್ಲಿ ಸೀಲಿಂಕ್‌ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ನಾಯರ್ ಮತ್ತು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

author img

By

Published : Oct 5, 2022, 9:46 AM IST

road accident
ಸೀಲಿಂಕ್‌ ಬಳಿ ಭೀಕರ ರಸ್ತೆ ಅಪಘಾತ

ಮುಂಬೈ(ಮಹಾರಾಷ್ಟ್ರ): ಬಾಂದ್ರಾ ವರ್ಲಿ ಸೀಲಿಂಕ್‌ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮುಂಜಾನೆ 3.30ರ ಸುಮಾರಿಗೆ ಆಂಬ್ಯುಲೆನ್ಸ್ ಸೇರಿದಂತೆ ನಾಲ್ಕು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, 5 ಜನ ಸಾವನ್ನಪ್ಪಿದ್ದಾರೆ. ಘಟನೆಯಿಂದ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ನಾಯರ್ ಮತ್ತು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಮತ್ತು ಗಾಯಗೊಂಡವರ ವಿವರ ಇನ್ನೂ ಲಭ್ಯವಾಗಿಲ್ಲ.

ಮಾಹಿತಿಯ ಪ್ರಕಾರ, ಕಾರು ಮತ್ತು ಆಂಬ್ಯುಲೆನ್ಸ್​ ನಡುವೆ ಅಪಘಾತ ಸಂಭವಿಸಿದೆ. ಬಳಿಕ ಅಪಘಾತಕ್ಕೊಳಗಾದ ಕಾರು ಮತ್ತು ಆಂಬ್ಯುಲೆನ್ಸ್‌ಗೆ ಇನ್ನೂ ಮೂರು ಕಾರುಗಳು ಡಿಕ್ಕಿ ಹೊಡೆದಿವೆ. ಭೀಕರ ಅಪಘಾತದ ನಂತರ ಸೀಲಿಂಕ್‌ನಲ್ಲಿ ಆತಂಕದ ವಾತಾವರಣ ಉಂಟಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಸರಣಿ ಅಪಘಾತ: ಓರ್ವ ಲಾರಿ‌ ಚಾಲಕ ಸ್ಥಳದಲ್ಲೇ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.