ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಪುಲ್ವಾಮಾ ಜಿಲ್ಲೆಯ ಟ್ರಾಲ್ ಬಳಿಯ ಸೋಯಿಮುಹ್‌ನಲ್ಲಿ ಭದ್ರತಾ ಪಡೆಗಳು 5 ಕೆ.ಜಿ ತೂಕದ ಸ್ಫೋಟಕ ವಸ್ತುಗಳನ್ನು ಸೋಮವಾರ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಪೊಲೀಸ್ ರೈಫಲ್ಸ್ (ಆರ್ಆರ್), ಜೆಕೆಪಿ ಮತ್ತು ಸಿಆರ್‌ಪಿಎಫ್ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ಶೋಧ ನಡೆಸಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಫೋಟಕಗಳನ್ನು ಹೆಚ್ಚಿನ ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರಾ ಪ್ರದೇಶದಲ್ಲಿ ಶಾಂತಿ ಮತ್ತು ಅಭಿವೃದ್ಧಿ ಅಸ್ಥಿರಗೊಳಿಸಲು ಭಯೋತ್ಪಾದಕರು ಎಸಗುವ ಕೃತ್ಯಗಳನ್ನು ತಡೆಯಲು ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆಯಲ್ಲಿವೆ. ಈ ಹಿಂದೆ ಮೇ 31ರಂದು ಜಂಟಿ ತಂಡವು ಅವಂತಿಪೋರಾದ ಪಂಜ್‌ಗಮ್ ಗ್ರಾಮದ ತೋಟದಲ್ಲಿ ಐಇಡಿ ಪತ್ತೆ ಮಾಡಿತ್ತು. ಬಳಿಕ ಬಾಂಬ್ ವಿಲೇವಾರಿ ದಳವನ್ನು ಪ್ರದೇಶಕ್ಕೆ ಕರೆದೊಯ್ದು ಐಇಡಿ ನಿಷ್ಕ್ರಿಯಗೊಳಿಸಲಾಗಿತ್ತು.
ಇದನ್ನೂ ಓದಿ: ಸಿಡಿಲಿನ ಅಬ್ಬರಕ್ಕೆ 27 ಜನ ಬಲಿ