ETV Bharat / bharat

ಐದು ರಾಜ್ಯಗಳ 475 ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ... ಯಾರ ಕೊರಳಿಗೆ ಜಯದ ಮಾಲೆ? - ಪಂಚರಾಜ್ಯ ಚುನಾವಣೆ ಫೈಟ್​​

ನಾಳೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಕೆಲವೊಂದು ನಾಯಕರ ರಾಜಕೀಯ ಭವಿಷ್ಯ ವಿವಿ ಪ್ಯಾಟ್​​ನಲ್ಲಿ ಭದ್ರವಾಗಲಿದೆ.

assembly polls
assembly polls
author img

By

Published : Apr 5, 2021, 11:04 PM IST

Updated : Apr 6, 2021, 12:19 AM IST

ಹೈದರಾಬಾದ್​: ಪಂಚಾರಾಜ್ಯ ಚುನಾವಣೆಗಳ ಪೈಕಿ ನಾಳೆ ತಮಿಳುನಾಡು, ಕೇರಳ, ಅಸ್ಸೋಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಐದು ರಾಜ್ಯಗಳ ಒಟ್ಟು 475 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ತಮಿಳುನಾಡಿನ ಎಲ್ಲ 234 ಕ್ಷೇತ್ರ ಹಾಗೂ ಕೇರಳದ 140 ಸೀಟುಗಳಿಗೆ ಒಂದೇ ಹಂತದಲ್ಲಿ ಮತದಾನವಾಗಲಿದ್ದು, ಅಸ್ಸೋಂನ 40 ಕ್ಷೇತ್ರಗಳಲ್ಲಿ ಮೂರನೇ ಹಂತ, ಪಶ್ಚಿಮ ಬಂಗಾಳದ 31 ವಿಧಾನಸಭೆ ಹಾಗೂ ಪುದುಚೇರಿಯ 30 ಕ್ಷೇತ್ರಗಳಿಗೆ ಮತದಾನವಾಗಲಿದೆ. ಇದರ ಜತೆಗೆ ಕನ್ಯಾಕುಮಾರಿ ಹಾಗೂ ಮಲ್ಲಪುರಂನ ಎರಡು ಲೋಕಸಭೆ ಕ್ಷೇತ್ರಗಳಿಗೂ ನಾಳೆ ಉಪಚುನಾವಣೆ ನಡೆಯಲಿದೆ.

ಇದನ್ನೂ ಓದಿ: ಡ್ರಾವಿಡರ ನಾಡಲ್ಲಿ ಜಯಾ-ಕರುಣಾನಿಧಿ ಇಲ್ಲದೇ ವಿಧಾನಸಭೆ ಫೈಟ್​​: ಯಾರಿಗೆ ಒಲಿಯಲಿದ್ದಾರೆ ಮತದಾರರು?

ತಮಿಳುನಾಡಿನ 234 ಕ್ಷೇತ್ರಗಳಿಂದ 3,998 ಅಭ್ಯರ್ಥಿಗಳು, ಕೇರಳದ 140 ಕ್ಷೇತ್ರಗಳಿಂದ 957 ಅಭ್ಯರ್ಥಿಗಳು, ಪಶ್ಚಿಮ ಬಂಗಾಳದ 31 ಕ್ಷೇತ್ರಗಳಿಂದ 205 ಅಭ್ಯರ್ಥಿಗಳು, ಅಸ್ಸೋಂನ 40 ಕ್ಷೇತ್ರಗಳಿಂದ 337 ಅಭ್ಯರ್ಥಿಗಳು ಹಾಗೂ ಪುದುಚೇರಿಯ 30 ಸ್ಥಾನಗಳಿಂದ 324 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಲಿದ್ದು, ಈಗಾಗಲೇ ಎಲ್ಲ ರೀತಿಯ ಭದ್ರತೆ ಕೈಗೊಳ್ಳಲಾಗಿದೆ.

ಪ್ರಮುಖವಾಗಿ ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಆಡಳಿತರೂಢ ಪಕ್ಷ ಎಐಎಡಿಎಂಕೆ ನಡುವೆ ನೇರ ಸ್ಪರ್ಧೆ ಉಂಟಾಗಿದ್ದು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ಹಾಗೂ ಮೊದಲ ಸಲ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಭಾರತೀಯ ಜನತಾ ಪಾರ್ಟಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.

Last Updated : Apr 6, 2021, 12:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.