ನವದೆಹಲಿ : ಕೋವಿಡ್ ಪರಿಹಾರ ಕಾರ್ಯಗಳಿಗಾಗಿ ಭಾರತೀಯ ವಾಯುಪಡೆ (IAF) ಕೈ ಜೋಡಿಸಿದೆ. 42 ಸಾರಿಗೆ ವಿಮಾನಗಳನ್ನು ನಿಯೋಜಿಸಿದೆ. ಇದರಲ್ಲಿ 12 ಹೆವಿ ಲಿಫ್ಟ್ ಮತ್ತು 30 ಮಧ್ಯಮ-ಲಿಫ್ಟ್ ವಿಮಾನಗಳು ಸೇರಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಾಯುಪಡೆಯ ವೈಸ್ ಮಾರ್ಷಲ್ ಎಂ ರಾನಡೆ, 12 ಹೆವಿ ಲಿಫ್ಟ್ ಮತ್ತು 30 ಮಧ್ಯಮ ಲಿಫ್ಟ್ ವಿಮಾನಗಳು ಸೇರಿದಂತೆ ಕೊರೊನಾ ರಿಲೀಫ್ ಕಾರ್ಯಗಳಿಗಾಗಿ ಐಎಎಫ್ 42 ಸಾರಿಗೆ ವಿಮಾನಗಳನ್ನು ನಿಯೋಜಿಸಿದೆ.
ಸಿಬ್ಬಂದಿ ಮತ್ತು ವಿದೇಶದಿಂದ ವಸ್ತುಗಳನ್ನು ತರಲು ಅವುಗಳನ್ನು ಬಳಸಲಾಗುತ್ತದೆ" ಎಂದು ಹೇಳಿದರು. ಈವರೆಗೆ ನಾವು ಸುಮಾರು 75 ಆಮ್ಲಜನಕ ಕಂಟೈನರ್ಗಳನ್ನು ತಂದಿದ್ದೇವೆ. ಆ ಕಾರ್ಯ ಪ್ರಗತಿಯಲ್ಲಿದೆ ಎಂದು ರಾನಡೆ ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆ ದೇಶವನ್ನಸಂಕಷ್ಟಕ್ಕೆ ದೂಡಿರುವುದರಿಂದ ಐಎಎಫ್ ವಿಮಾನಗಳು ಇತರ ದೇಶಗಳಿಂದ ಆಮ್ಲಜನಕ ಸಿಲಿಂಡರ್ಗಳು ಮತ್ತು ದೇಶದೊಳಗೆ ವೈದ್ಯಕೀಯ ಆಮ್ಲಜನಕ ಸಾಗಣೆ ಸೇರಿದಂತೆ ಹಲವಾರು ಕೆಲಸಗಳಲ್ಲಿ ತೊಡಗಿಕೊಂಡಿವೆ.