ಆಗ್ರಾ: ಉತ್ತರಪ್ರದೇಶದ ಮೈನ್ಪುರಿ ಜಿಲ್ಲೆಯ ಯೋಧರೊಬ್ಬರ ಜಮೀನಿನಲ್ಲಿ ಭೂಮಿ ಸಮತಟ್ಟು ಮಾಡುವಾಗ 4 ಸಾವಿರ ವರ್ಷಗಳ ಹಿಂದಿನ(1800 ರಿಂದ 1500 BC) ತಾಮ್ರದ ಆಯುಧಗಳು ಕಂಡುಬಂದಿವೆ. ಕುರವಲಿ ಗ್ರಾಮದ ನಿವಾಸಿಯಾದ ಬಹದ್ದೂರ್ ಸಿಂಗ್ ಎಂಬುವರು ತಗ್ಗು-ದಿಮ್ಮಿಗಳಿಂದ ಕೂಡಿದ್ದ ಜಮೀನನ್ನು ಸಮತಟ್ಟು ಮಾಡುತ್ತಿದ್ದರು. ಈ ವೇಳೆ ಸಮತಟ್ಟು ಮಾಡುವ ಯಂತ್ರಕ್ಕೆ ನೆಲದಲ್ಲಿ ಹುದುಗಿಸಿಟ್ಟಿದ್ದ ತಾಮ್ರದ ಆಯುಧಗಳು ತಾಕಿ ಹೊರಬಂದಿವೆ. ಬಳಿಕ ಜಮೀನು ಮಾಲೀಕ ಮತ್ತು ಜನರು ಅದರ ಸುತ್ತಲೂ ಅಗೆದಾಗ 77 ತಾಮ್ರದ ಆಯುಧಗಳು ಸಿಕ್ಕಿವೆ.
ಬಳಿಕ ಈ ವಿಷಯವನ್ನು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು, ಕ್ರಿಸ್ತಪೂಪೂರ್ವ ಕಾಲದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ 8 ದಿನ ಅಲ್ಲಿಯೇ ಠಿಕಾಣಿ ಹೂಡಿ ಇನ್ನಷ್ಟು ಆಯುಧಗಳ ಬಗ್ಗೆ ಪತ್ತೆ ಕಾರ್ಯ ನಡೆಸಿದ್ದಾರೆ.
ಈ ಆಯುಧಗಳು ಯಾವ ಕಾಲಕ್ಕೆ ಸಂಬಂಧಿಸಿದ್ದವು ಎಂಬುದರ ಬಗ್ಗೆ ಪರೀಕ್ಷೆ ನಡೆಸಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು, ಪತ್ತೆಯಾದ ವಸ್ತುಗಳು ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯವು. ಇದು 1800 ರಿಂದ 1500 ಕ್ರಿಸ್ತಪೂರ್ವ ಕಾಲದಷ್ಟು ಹಳೆಯದಾಗಿವೆ ಎಂದು ತಿಳಿಸಿದ್ದಾರೆ.
ಪತ್ತೆಯಾದ 77 ತಾಮ್ರದ ಆಯುಧಗಳಲ್ಲಿ 16 ಮಾನವ ಆಕೃತಿಗಳನ್ನು ಹೊಂದಿದೆ. ಗಾತ್ರ ಮತ್ತು ತೂಕದಲ್ಲಿ ಒಂದಕ್ಕೊಂದು ವಿಭಿನ್ನವಾಗಿವೆ. ಇವುಗಳಲ್ಲಿ ಕತ್ತಿ. ಈಟಿಗಳು ಸಹ ಸಿಕ್ಕಿವೆ.
ಓದಿ: ಬ್ಲಾಗರ್ ರಿತಿಕಾ ಮರ್ಡರ್ ಕೇಸ್: ಹೊಸ ವಿಡಿಯೋ ವೈರಲ್.. ಪತಿಯೇ ಕೊಲೆಗಾರ?