ETV Bharat / bharat

ಗುಜರಾತ್‌ನಲ್ಲಿ ಕೊರೊನಾ ಗೆದ್ದ ನಾಲ್ಕು ತಿಂಗಳ ಕಂದಮ್ಮ - Gujarat Corona update

ಅಹಮದಾಬಾದ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆನಂದ್​ ಜಿಲ್ಲೆಯ 4 ತಿಂಗಳ ಮಗುವಿಗೆ ಏ.29ರಂದು ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ವೈದ್ಯರು ಮಗುವನ್ನು ಹೈ ಫ್ರೀಕ್ವೆನ್ಸಿ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಿದ್ದು ಫಲ ಕೊಟ್ಟಿದೆ.

Gujarat
ಕೊರೊನಾ ಗೆದ್ದ 4 ತಿಂಗಳ ಕಂದಮ್ಮ
author img

By

Published : May 14, 2021, 8:54 AM IST

ಗುಜರಾತ್​: ಅಹಮದಾಬಾದ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆನಂದ್​ ಜಿಲ್ಲೆಯ 4 ತಿಂಗಳ ಮಗು 6 ದಿನಗಳ ಕಾಲ ಹೈ ಫ್ರೀಕ್ವೆನ್ಸಿ ವೆಂಟಿಲೇಟರ್‌ನಲ್ಲಿದ್ದು ಕೊರೊನಾ ಜಯಿಸಿದೆ.

ಆನಂದ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ಕುನಾಲ್ ಮಕ್ವಾನಾ ಅವರ ನಾಲ್ಕು ತಿಂಗಳ ಮಗ ಜುಗಲ್​ನಿಗೆ ಏ.29ರಂದು ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಕಂದಮ್ಮನನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಗಿತ್ತು. ಆದರೆ ಗಂಭೀರ ಪರಿಸ್ಥಿತಿಯಲ್ಲಿದ್ದ ಕಾರಣ ಮಗುವನ್ನು ಅಹಮದಾಬಾದ್‌ನ ಚಂದ್‌ಖೇಡಾದಲ್ಲಿರುವ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಗುವಿಗೆ ಹುಟ್ಟಿನಿಂದಲೂ ಆರೋಗ್ಯ ಸಮಸ್ಯೆ ಇದ್ದು ಆಮ್ಲಜನಕದ ಕೊರತೆಯೂ ಕಾಣಿಸಿದೆ. ತಕ್ಷಣವೇ ವೈದ್ಯರು ಹೈ ಫ್ರೀಕ್ವೆನ್ಸಿ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಿದ್ದಾರೆ. 6 ದಿನಗಳ ಬಳಿಕ ನಿಧಾನವಾಗಿ ಕಂದಮ್ಮ ಚೇತರಿಸಿಕೊಳ್ಳುತ್ತಿದ್ದಾನೆ.

ಜುಗಲ್​ಗೆ ಹುಟ್ಟುವಾಗಲೇ ಹೃದಯದಲ್ಲಿ ರಂಧ್ರ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಜನವರಿ 4 ರಂದು ಶಸ್ತ್ರಚಿಕಿತ್ಸೆ ನಡೆದಿದೆ. ಇದೀಗ ಕೊರೊನಾ ವಿರುದ್ಧವೂ ಗೆದ್ದಿದ್ದಾನೆ ಎಂದು ತಂದೆ ಕುನಾಲ್​ ಹರ್ಷ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.