ETV Bharat / bharat

ಕೋವಿಡ್‌ ಚಿಕಿತ್ಸೆಗೆ ರೈಲ್ವೆ ಕೋಚ್‌ಗಳು ಸಿದ್ಧ: ರೈಲ್ವೆ ಇಲಾಖೆಯಿಂದ ವ್ಯವಸ್ಥೆ - 3,816 ಕೋವಿಡ್‌-19 ಕೇರ್‌ ರೈಲ್ವೆ ಕೋಚ್‌ಗಳು ಸೇವೆಗೆ ಲಭ್ಯ

ಭಾರತೀಯ ರೈಲ್ವೆ ಇಲಾಖೆಯು ಈಗಾಗಲೇ ಸಾಕಷ್ಟು ರೈಲ್ವೆ ಕೋಚ್‌ಗಳನ್ನು ಕೋವಿಡ್‌-19 ಕೇರ್‌ ಕೋಚ್‌ಗಳನ್ನಾಗಿ ಪರಿವರ್ತಿಸಿದೆ. ಇಂತಹ 21 ಕೋಚ್‌ಗಳನ್ನು ಮಹಾರಾಷ್ಟ್ರದ ನಂದೂರ್‌ಬಾರ್‌ ಜಿಲ್ಲೆಯಲ್ಲಿ ಈಗಾಗಲೇ ನಿಯೋಜಿಸಲಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಕೋಚ್‌ಗಳನ್ನು ಕ್ಲಿನಿಕ್‌ಗಳಾಗಿ ಮಾರ್ಪಡಿಸಲಾಗಿದ್ದು, ಸೋಂಕಿನ ಕಡಿಮೆ ಗಂಭೀರತೆ ಇರುವ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಬಹುದು.

3816 rail coaches available for use at present for COVID care: Railways
3,816 ಕೋವಿಡ್‌-19 ಕೇರ್‌ ರೈಲ್ವೆ ಕೋಚ್‌ಗಳು ಸೇವೆಗೆ ಲಭ್ಯ; ರೈಲ್ವೆ ಇಲಾಖೆ
author img

By

Published : Apr 25, 2021, 6:33 AM IST

ನವದಹೆಲಿ: ದೇಶದಲ್ಲಿ ಕೋವಿಡ್ 2ನೇ ಅಲೆ ನಾಗಾಲೋಟ ಮುಂದುವರಿದಿದೆ. ಹಲವು ಸೋಂಕಿತರು ಸಕಾಲದಲ್ಲಿ ಬೆಡ್‌ ವ್ಯವಸ್ಥೆ, ಆಕ್ಸಿಜನ್‌ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರಗಳು ಕೂಡ ಆಕ್ಸಿಜನ್‌, ಔಷಧ ಪೂರೈಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ರೈಲ್ವೆ ಇಲಾಖೆ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಕೈ ಜೋಡಿಸಿದೆ.

ರಾಜ್ಯ ಸರ್ಕಾರಗಳ ಬೇಡಿಕೆಗೆ ಅನುಗುಣವಾಗಿ 3,816 ರೈಲ್ವೆ ಕೋಚ್‌ಗಳನ್ನು ಕೋವಿಡ್‌ ಕೇರ್‌ ಕೋಚ್‌ಗಳಾಗಿ ಮಾರ್ಪಡಿಸಲಾಗಿದ್ದು, ಇವು ಜನರ ಸೇವೆಗೆ ಲಭ್ಯ ಇವೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಇಂತಹ 21 ಕೋಚ್‌ಗಳನ್ನು ಮಹಾರಾಷ್ಟ್ರದ ನಂದೂರ್‌ಬಾರ್‌ ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ. ಈ ಕೋಚ್‌ಗಳಲ್ಲಿ ಈಗಾಗಲೇ 47 ಮಂದಿ ರೋಗಿಗಳು ದಾಖಲಾಗಿದ್ದಾರೆ. ಶಾಕೂರ್‌ ಬಸ್ತಿಯಲ್ಲಿ 25, ಆನಂದ್‌ ವಿಹಾರ್‌, ಬದೋಹಿ ಹಾಗೂ ಫೈಜಾಬಾದ್‌ನಲ್ಲಿ ತಲಾ 10 ಬೋಗಿಗಳನ್ನು ನಿಯೋಜಿಸಿರುವುದಾಗಿ ಭಾರತೀಯ ರೈಲ್ವೆ ಮಾಹಿತಿ ನೀಡಿದೆ.

ಇದನ್ನೂ ಓದಿ: ರಾಜ್ಯದ ರೆಮ್ಡಿಸಿವಿರ್, ಆಕ್ಸಿಜನ್ ಹಂಚಿಕೆ ಹೆಚ್ಚಿಸಿದ ಕೇಂದ್ರ ಸರ್ಕಾರ; ಸಿಎಂ ಹರ್ಷ

ಕೋವಿಡ್‌ ಸೋಂಕನ್ನು ತಡೆಯುವ ಸಲುವಾಗಿ ಸರ್ಕಾರದೊಂದಿಗೆ ಸೇರಿ ಹೆಚ್ಚುವರಿ ಬೋಗಿಗಳನ್ನು ಕೋವಿಡ್‌ ಕೇರ್‌ ಬೋಗಿಗಳಾಗಿ ಪರಿವರ್ತಿಸುತ್ತೇವೆ. ಒಟ್ಟು 5,601 ಕೋಚ್‌ಗಳನ್ನು ಕೋವಿಡ್‌ ಕೇರ್‌ ಕೋಚ್‌ಗಳನ್ನಾಗಿ ಪರಿವರ್ತಿಸಲಿದ್ದು, ಸದ್ಯ 3,816 ಬೋಗಿಗಳು ಸೇವೆಗೆ ಲಭ್ಯ ಇವೆ. ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಕೋಚ್‌ಗಳನ್ನು ಕ್ಲಿನಿಕ್‌ಗಳಾಗಿ ಮಾರ್ಪಡಿಸಲಾಗಿದೆ. ಸೋಂಕಿನ ಕಡಿಮೆ ಗಂಭೀರತೆ ಇರುವ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಬಹುದು ಎಂದು ಇಲಾಖೆ ಹೇಳಿದೆ.

ಭೋಪಾಲ್‌ ಹಾಗೂ ಹಬಿಬ್‌ಗಂಜ್‌ ರೈಲ್ವೆ ನಿಲ್ದಾಣಗಳಲ್ಲಿ ತಲಾ 20 ಕೋವಿಡ್‌ ಕೇರ್‌ ರೈಲ್ವೆ ಕೋಚ್‌ಗಳನ್ನು ನಿಯೋಜಿಸುವಂತೆ ಮಧ್ಯಪ್ರದೇಶ ಸರ್ಕಾರ ಭಾರತೀಯ ರೈಲ್ವೆಗೆ ಮನವಿ ಮಾಡಿದೆ. ಇಂದಿನಿಂದ ಈ ಕೋಚ್‌ಗಳು ಕಾರ್ಯ ನಿರ್ವಹಿಸಲಿವೆ ಎಂದು ರೈಲ್ವೆ ಸಚಿವಾಲಯ ಹೇಳಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.