ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸ 38,074 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 85,91,731 ಕ್ಕೆ ಏರಿದೆ.
448 ಜನ ಕೊರೊನಾಗೆ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 1,27,059 ಕ್ಕೆ ಏರಿದೆ. ಒಟ್ಟು ಸಕ್ರಿಯ ಪ್ರಕರಣಗಳು 42,033 ಜನ ಗುಣಮುಖರಾಗಿದ್ದು, ಕೋವಿಡ್ನಿಂದ ಗುಣಮುಖರಾದವರ ಸಂಖ್ಯೆ 79,59,406 ಕ್ಕೆ ಏರಿದೆ.
ದಿನವೊಂದಕ್ಕೆ 80- 90 ಸಾವಿರದ ಆಜುಬಾಜು ಇರುತ್ತಿದ್ದ ಕೋವಿಡ್ ಪಾಸಿಟಿವ್ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಕಡಿಮೆ ಆಗುತ್ತ ಬರುತ್ತಿವೆ. ಇದು ದೇಶದ ಜನರನ್ನ ತುಸು ನಿಟ್ಟುಸಿರು ಬಿಡುವಂತೆ ಮಾಡಿತು.