ETV Bharat / bharat

6 ವರ್ಷ, 326 ದೇಶದ್ರೋಹ ಪ್ರಕರಣ, 6 ಮಂದಿ ಮಾತ್ರ ಅಪರಾಧಿಗಳು: ಕರ್ನಾಟಕದಲ್ಲೆಷ್ಟು? - ಕೇಂದ್ರ ಗೃಹ ಇಲಾಖೆ

ಐಪಿಸಿ ಸೆಕ್ಷನ್ 124(ಎ)ನಲ್ಲಿರುವ ದೇಶದ್ರೋಹ ಪ್ರಕರಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂಕೋರ್ಟ್​ ಇತ್ತೀಚೆಗೆ ಹೇಳಿದ್ದು, ಈ ಕಾನೂನಿನ ಅವಶ್ಯಕತೆ ಈಗ ಏನಿದೆ ಎಂದು ಪ್ರಶ್ನೆ ಮಾಡಿತ್ತು.

326 sedition cases filed in India between 2014-19; only 6 convictions
2014-19ರೊಳಗೆ ದೇಶದಲ್ಲಿ 326 ದೇಶದ್ರೋಹ ಪ್ರಕರಣ 6 ಮಂದಿ ಮಾತ್ರ ಅಪರಾಧಿಗಳು: ಕರ್ನಾಟಕದಲ್ಲಿ?
author img

By

Published : Jul 18, 2021, 10:04 PM IST

ನವದೆಹಲಿ: ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆಯ ಅಡಿಯಲ್ಲಿ ದೇಶದಲ್ಲಿ 2014 ಮತ್ತು 2019ರ ನಡುವೆ ಸುಮಾರು 326 ದೂರುಗಳು ದಾಖಲಾಗಿವೆ. ಕೇವಲ 6 ಮಂದಿ ಮಾತ್ರ ಅಪರಾಧಿಗಳು ಎಂದು ಸಾಬೀತಾಗಿದೆ.

ಐಪಿಸಿ ಸೆಕ್ಷನ್ 124(ಎ)ನಲ್ಲಿರುವ ದೇಶದ್ರೋಹ ಪ್ರಕರಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂಕೋರ್ಟ್​ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಬ್ರಿಟೀಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಳಕೆಯಾಗುತ್ತಿದ್ದ ಕಾನೂನಿನ ಅವಶ್ಯಕತೆ ಈಗ ಏನಿದೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿತ್ತು.

ಕೇಂದ್ರ ಗೃಹ ಇಲಾಖೆಯ ಮಾಹಿತಿಯಂತೆ 2014-2019ರ ನಡುವೆ ಸುಮಾರು 326 ದೇಶದ್ರೋಹ ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದು, ಅಸ್ಸಾಂನಲ್ಲಿ ಅತಿ ಹೆಚ್ಚು ಅಂದರೆ 54 ಪ್ರಕರಣಗಳು ದಾಖಲಾಗಿವೆ. ಈ ಆರು ವರ್ಷಗಳಲ್ಲಿ 141 ಮಂದಿಯ ವಿರುದ್ಧ ಚಾರ್ಜ್‌ಶೀಟ್ ದಾಖಲಾಗಿದ್ದು, ಕೇವಲ 6 ಮಂದಿ ಅಪರಾಧಿಗಳೆಂದು ಸಾಬೀತಾಗಿದೆ.

2020ರ ಮಾಹಿತಿಯನ್ನು ಕೇಂದ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಅಸ್ಸಾಂನಲ್ಲಿ 54 ದೂರುಗಳಲ್ಲಿ 26 ದೂರುಗಳ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. 25 ಕೇಸುಗಳ ವಿಚಾರಣೆ ಪೂರ್ಣಗೊಂಡಿದೆ. ಆದರೆ ಒಬ್ಬನೇ ಒಬ್ಬ ಆರೋಪಿಯೂ ಅಪರಾಧಿಯೆಂದು ಸಾಬೀತಾಗಿಲ್ಲ.

ಕರ್ನಾಟಕದಲ್ಲಿ 22 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದು, 17 ಕೇಸುಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಒಂದೇ ಒಂದು ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಆತನೂ ನಿರಪರಾಧಿಯಾಗಿದ್ದಾನೆ.

ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಶುಭ ಕೋರಿದ ಸಿಎಂ ಬಿಎಸ್​​​ವೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.