ಶ್ರೀನಗರ( ಜಮ್ಮು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಸಕ್ರಿಯವಾಗಿರುವ ಭಯೋತ್ಪಾದಕರ ಸಂಖ್ಯೆ 300ಕ್ಕಿಂತ ಹೆಚ್ಚಿದ್ದು, ಇದರಲ್ಲಿ 82 ವಿದೇಶಿ ಉಗ್ರರು, 53 ಸ್ಥಳೀಯರು ಎಂದು ಗುರುತಿಸಲಾಗಿದೆ. ಉಳಿದ 170 ಮಂದಿಯನ್ನು ಗುರುತು ಸಿಗದವರೆಂದು ಪಟ್ಟಿಮಾಡಲಾಗಿದೆ ಎಂದು ಉತ್ತರ ಸೇನಾ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಹೇಳಿದ್ದಾರೆ.
ಮಂಗಳವಾರದಂದು ನಡೆದ ಪೂಂಚ್ ಲಿಂಕ್ - ಅಪ್ ದಿನದ ಸಂದರ್ಭದಲ್ಲಿ ಪೂಂಚ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಜನರಲ್ ಆಫೀಸರ್ ಕಮಾಂಡಿಂಗ್ - ಇನ್-ಚೀಫ್ ನಾರ್ದರ್ನ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಸೇನೆಯಲ್ಲಿ ಲಭ್ಯವಿರುವ ಅಂಕಿ - ಅಂಶಗಳ ಪ್ರಕಾರ ರಜೌರಿ - ಪೂಂಚ್ ಪ್ರದೇಶ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 305 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ.
ಇದರಲ್ಲಿ ಆತಂಕಕಾರಿ ಸಂಗತಿಯೆಂದರೆ, ಸಕ್ರಿಯರಾಗಿರುವ ಭಯೋತ್ಪಾದಕರಲ್ಲಿ 170 ಅಪರಿಚಿತ ಭಯೋತ್ಪಾದಕರು ಅಪರಾಧ ಚಟುವಟಿಕೆಗಳನ್ನು ನಡೆಸಲು ನಿಯೋಜಿಸಲ್ಪಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಹೇಳಿದರು.
ಹಾಗೆ ಸ್ಥಳೀಯ ಭಯೋತ್ಪಾದಕರ ಕುರಿತು ಮಾತನಾಡಿದ ಅವರು ಭಯೋತ್ಪಾದಕರ ನೇಮಕಾತಿಯಲ್ಲಿ 25 ಪ್ರತಿಶತದಷ್ಟು 20 ವರ್ಷಕ್ಕಿಂತ ಕೆಳಗಿನ ಯುವಕರಿದ್ದಾರೆ. ಉಳಿದ 75 ಪ್ರತಿಶತ ಉಗ್ರರು 20 ರಿಂದ 30 ವರ್ಷ ವಯಸ್ಸಿನ ಯುವಕರನ್ನು ಒಳಗೊಂಡಿವೆ. ಹಾಗಾಗಿ ಪೋಷಕರು ಈ ವಯಸ್ಸಿನಲ್ಲಿರುವ ತಮ್ಮ ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು.
ಈ ಯುವಕರು ಹೆಚ್ಚಿನ ಅಧ್ಯಯನ ಮಾಡಬೇಕು. ಮತ್ತು ಹೊರಗಿನ ಪ್ರಪಂಚವನ್ನು ನೋಡಬೇಕು ಆಗ ಈ ಜಾಲಕ್ಕೆ ಬೀಳುವುದು ತಪ್ಪಿಸಬಹುದು. ಇದೇ ಕಾರಣಕ್ಕೆ ನಾವು 1800 ಯುವಕರನ್ನು ಅಧ್ಯಯನಕ್ಕಾಗಿ ಭಾರತದ ವಿವಿಧ ಕಳುಹಿಸಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಸಂಡೂರು ಮೂಲದ ಟೆಕ್ಕಿಯ ದಾಖಲೆ ನೀಡಿ ಸಿಮ್ ಕಾರ್ಡ್: ಮೈಸೂರಲ್ಲಿ ಎನ್ಐಎ ಶೋಧ