ಹನುಮಾನ್‌ಗಢ(ರಾಜಸ್ಥಾನ): 2018ರಲ್ಲಿ ನಡೆದಿದ್ದ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆ ಫಲಿತಾಂಶ ಇದೀಗ ಬಹಿರಂಗಗೊಂಡಿದ್ದು, ಮೂವರು ಸಹೋದರಿಯರು ಪಾಸ್ ಆಗುವ ಮೂಲಕ ಹೊಸದೊಂದು ಸಾಧನೆ ನಿರ್ಮಾಣ ಮಾಡಿದ್ದಾರೆ. ರಾಜಸ್ಥಾನದ ಹನುಮಾನ್ಗಢದ ಸಹದೇವ್ ಸಹಕರ್ ಅವರ ಮೂವರು ಮಕ್ಕಳಾಗಿರುವ ಅನ್ಶು,ರೀತು ಹಾಗೂ ಸುಮನ್ ಈ ಪರೀಕ್ಷೆ ಮಾಡಿದ್ದಾರೆ.
ಈಗಾಗಲೇ ಇವರ ಇಬ್ಬರು ಸಹೋದರಿಯರಾದ ರೋಮಾ ಮತ್ತು ಮಂಜು ಪರೀಕ್ಷೆ ಪಾಸ್ ಮಾಡಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಎಲ್ಲ ಐವರು ಸಹೋದರಿಯರು ರಾಜಸ್ಥಾನ ಆಡಳಿತ ಸೇವಾ(ಆರ್ಎಎಸ್) ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಇವರು ಪಾಸ್ ಆಗಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
-
Such a good news. Anshu, Reetu and Suman are three sisters from Hanumangarh, Rajasthan. Today all three got selected in RAS together. Making father & family proud. pic.twitter.com/n9XldKizy9
— Parveen Kaswan, IFS (@ParveenKaswan) July 14, 2021 " class="align-text-top noRightClick twitterSection" data="
">Such a good news. Anshu, Reetu and Suman are three sisters from Hanumangarh, Rajasthan. Today all three got selected in RAS together. Making father & family proud. pic.twitter.com/n9XldKizy9
— Parveen Kaswan, IFS (@ParveenKaswan) July 14, 2021Such a good news. Anshu, Reetu and Suman are three sisters from Hanumangarh, Rajasthan. Today all three got selected in RAS together. Making father & family proud. pic.twitter.com/n9XldKizy9
— Parveen Kaswan, IFS (@ParveenKaswan) July 14, 2021
ಇದನ್ನೂ ಓದಿರಿ: ಬೀದಿಗಳಲ್ಲಿ ಕಸ ಗುಡಿಸುವ ಕೆಲಸ ಮಾಡ್ತಿದ್ದ ಮಹಿಳೆ ಜಿಲ್ಲಾಧಿಕಾರಿ ... ಸ್ಫೂರ್ತಿಯಾದ 'ಆಶಾ'
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿರುವ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂದರೆ ರಾಜೆ, ಭೈರುಸಾರಿ ಗ್ರಾಮದ ಸಹದೇವ್ ಸಹಕರ್ ಅವರ ಮೂವರು ಹೆಣ್ಣು ಮಕ್ಕಳು ಆರ್ಎಎಸ್ ಪರೀಕ್ಷೆ ಪಾಸ್ ಮಾಡಿದ್ದು, ಕೆಳವರ್ಗದ ಕುಟುಂಬದಿಂದ ಬಂದಿರುವ ಸಹೋದರಿಯರು ಅನೇಕ ಅಡೆತಡೆ ಎದುರಿಸಿ ತಮ್ಮ ಗುರಿ ಸಾಧಿಸಿದ್ದಾರೆ ಎಂದಿದ್ದಾರೆ. ಇವರ ತಂದೆ ಕೇವಲ 5ನೇ ತರಗತಿ ಹಾಗೂ ತಾಯಿ ಅನಕ್ಷರಸ್ಥರಾಗಿದ್ದಾರೆ.
-
भैरूसरी गांव (हनुमानगढ़) निवासी श्री सहदेव सहारण जी की तीन बेटियों ने #RAS बनने में सफलता हासिल की है। एक निम्न वर्गीय परिवार से होने के कारण 5वीं कक्षा के बाद कभी स्कूल नहीं जाने वाली इन पांचों बहनों ने अपनी लगन से तमाम बाधाओं को दूर कर लक्ष्य को हासिल कर दिखाया है।#WomenRising pic.twitter.com/h2wtq7oPvr
— Vasundhara Raje (@VasundharaBJP) July 15, 2021 " class="align-text-top noRightClick twitterSection" data="
">भैरूसरी गांव (हनुमानगढ़) निवासी श्री सहदेव सहारण जी की तीन बेटियों ने #RAS बनने में सफलता हासिल की है। एक निम्न वर्गीय परिवार से होने के कारण 5वीं कक्षा के बाद कभी स्कूल नहीं जाने वाली इन पांचों बहनों ने अपनी लगन से तमाम बाधाओं को दूर कर लक्ष्य को हासिल कर दिखाया है।#WomenRising pic.twitter.com/h2wtq7oPvr
— Vasundhara Raje (@VasundharaBJP) July 15, 2021भैरूसरी गांव (हनुमानगढ़) निवासी श्री सहदेव सहारण जी की तीन बेटियों ने #RAS बनने में सफलता हासिल की है। एक निम्न वर्गीय परिवार से होने के कारण 5वीं कक्षा के बाद कभी स्कूल नहीं जाने वाली इन पांचों बहनों ने अपनी लगन से तमाम बाधाओं को दूर कर लक्ष्य को हासिल कर दिखाया है।#WomenRising pic.twitter.com/h2wtq7oPvr
— Vasundhara Raje (@VasundharaBJP) July 15, 2021
ಅನ್ಶು 31ನೇ ರ‍್ಯಾಂಕ್, ರೀತು 96 ಹಾಗೂ ಸುಮನ್ 98ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಈಗಾಗಲೇ ರೋಮಾ 2010ನೇ ಸಾಲಿನ ಹಾಗೂ ಮಂಜು 2017ನೇ ಸಾಲಿನ ಪರೀಕ್ಷೆಯಲ್ಲಿ ಪಾಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.