ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಶನಿವಾರ ಮುಂಜಾನೆ ಜಮ್ಮುವಿನ ಹೊರವಲಯದಲ್ಲಿ ಕಾರು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ದಂಪತಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಣೆಯಾದ ಮಗುವನ್ನು ಹುಡುಕಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇತರ ನಾಲ್ವರನ್ನು ರಕ್ಷಿಸಲಾಗಿದೆ ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಜಾನೆ ಮೀರಾನ್ ಸಾಹಿಬ್ ಪ್ರದೇಶದ ಮರಾಲಿಯನ್ನಲ್ಲಿ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು. ಪ್ರಯಾಣಿಕರು ಅರ್ನಿಯಾದ ಬಹದ್ದೂರ್‌ಪುರ ಗ್ರಾಮಕ್ಕೆ ತೆರಳುತ್ತಿದ್ದಾಗ ಕಾರು ಸ್ಕಿಡ್ ಆಗಿ ಕಾಲುವೆಗೆ ಬಿದ್ದಿದೆ.
ಕುಮಾರ್, ಅವರ ಪತ್ನಿ ಕಾಂಚನಾ, ಮೆನು ಕುಮಾರಿ ಮತ್ತು ಮಗ ಸುಶಾಂತ್ ಎಂಬ ನಾಲ್ವರನ್ನು ರಕ್ಷಿಸಲಾಗಿದೆ. ಕೇವಲ್ ಕ್ರಿಶನ್ (60), ಅವರ ಪತ್ನಿ ಸುರ್ಜೀತ್ ಕುಮಾರಿ (52) ಮತ್ತು ಎರಡು ವರ್ಷದ ಮನ್ಶಿ ಮೃತ ದುರ್ದೈವಿಗಳಾಗಿದ್ದಾರೆ. ಆದರೆ, ಎರಡು ತಿಂಗಳ ಪರಾಂಶಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.