ETV Bharat / bharat

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ.. ಶಂಕಿತ ಉಗ್ರರಿಂದ ಗುಂಡಿನ ದಾಳಿ, ತಂದೆ - ಮಗ ಸೇರಿ ಮೂವರ ಸಾವು - ಮಣಿಪುರ ಪೊಲೀಸರು ಜಂಟಿ ಭದ್ರತಾ ಪಡೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಶಂಕಿತ ಉಗ್ರಗಾಮಿಗಳು ದಾಳಿ ನಡೆಸಿ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

3 killed in fresh Manipur violence  indiscriminate firing by suspected militants  Manipur violence  Manipur bundh  ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ  ಶಂಕಿತ ಉಗ್ರರಿಂದ ಗುಂಡಿನ ದಾಳಿ  ಶಂಕಿತ ಉಗ್ರರಿಂದ ಗುಂಡಿನ ದಾಳಿ  ಮನಬಂದಂತೆ ಗುಂಡಿನ ದಾಳಿ  ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ  ಮಧ್ಯರಾತ್ರಿ ನಡೆದ ಹಿಂಸಾಚಾರದ ಘಟನೆ  ವೃದ್ಧ ಮತ್ತು ಆತನ ಮಗ ಸೇರಿದಂತೆ ಮೂವರು ಮೃತ  ಮಣಿಪುರ ಪೊಲೀಸರು ಜಂಟಿ ಭದ್ರತಾ ಪಡೆ  ಕ್ವಾಕ್ತಾ ಲಂಖೈ ಗ್ರಾಮದ ಮೇಲೆ ದಾಳಿ
ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ
author img

By

Published : Aug 5, 2023, 11:09 AM IST

ಬಿಷ್ಣುಪುರ, ಮಣಿಪುರ: ಮಣಿಪುರ ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ನಿಲ್ಲುವಂತೆ ಕಾಣುತ್ತಿಲ್ಲ. ಬಿಷ್ಣುಪುರ ಜಿಲ್ಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಮಧ್ಯರಾತ್ರಿ ನಡೆದ ಹಿಂಸಾಚಾರದ ಘಟನೆಯಲ್ಲಿ ವೃದ್ಧ ಮತ್ತು ಆತನ ಮಗ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಬಂದೂಕುಗಳು ಮತ್ತು ಕತ್ತಿಗಳೊಂದಿಗೆ ಶಸ್ತ್ರಸಜ್ಜಿತವಾದ ಶಂಕಿತ ಉಗ್ರಗಾಮಿಗಳು ಕ್ವಾಕ್ತಾ ಲಂಖೈ ಗ್ರಾಮದ ಮೇಲೆ ದಾಳಿ ನಡೆಸಿದ್ದಾರೆ. ಶಂಕಿತರು ಮನಬಂದಂತೆ ಗುಂಡಿನ ದಾಳಿ ಪ್ರಾರಂಭಿಸಿದ್ದು, ಈ ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಮಧ್ಯರಾತ್ರಿ ನಡೆದ ದಾಳಿಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಇಬ್ಬರು ಗ್ರಾಮಸ್ಥರನ್ನೂ ಶಂಕಿತರ ಅಪಹರಿಸಿದ್ದಾರೆ ಎಂದು ಮೂಲಗಳ ಖಚಿತಪಡಿಸಿವೆ. ದಾಳಿಯ ಪರಿಣಾಮವಾಗಿ ಗ್ರಾಮದ ಉಳಿದ ನಿವಾಸಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪೊಲೀಸರು ತಂಡ ದಾಳಿಯ ಪ್ರದೇಶಗಳಿಗೆ ಧಾವಿಸಿ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಯುಮ್ನಮ್ ಪಿಶಾಕ್ ಮೈತೇಯಿ (67) ಮತ್ತು ಅವರ ಪುತ್ರ ಯುಮ್ನಮ್ ಪ್ರೇಮ್‌ಕುಮಾರ್ ಮೈತೇಯಿ (39) ಮತ್ತು ನೆರೆಹೊರೆಯವರಾದ ಯುಮ್ನಮ್ ಜಿತೇನ್ ಮೈತೇಯಿ (46) ಎಂದು ಗುರುತಿಸಲಾಗಿದೆ. ಘಟನೆಯ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ದಾಳಿಕೋರರು ಚುರಚಂದ್‌ಪುರದಿಂದ ಬಂದು ದಾಳಿ ಮಾಡಿದ್ದಾರೆ ಎನ್ನಲಾಗ್ತಿದೆ. ಘಟನೆಯ ನಂತರ ಕೋಪಗೊಂಡ ಗುಂಪು ಕ್ವಾಕ್ತಾದಲ್ಲಿ ಜಮಾಯಿಸಿ ಚುರಚಂದ್‌ಪುರ ಕಡೆಗೆ ಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆ, ಹತ್ತಿರದ ಫೌಗಕ್ಚಾವೊ ಮತ್ತು ಕ್ವಾಕ್ತಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಜ್ಯ ಪಡೆಗಳು ಮತ್ತು ಶಂಕಿತ ಉಗ್ರಗಾಮಿಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 4 ರಂದು ಮಣಿಪುರ ಪೊಲೀಸರು ಜಂಟಿ ಭದ್ರತಾ ಪಡೆ ಕೌಟ್ರುಕ್ ಬೆಟ್ಟದ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ, ಏಳು ಅಕ್ರಮ ಬಂಕರ್‌ಗಳನ್ನು ನಾಶಪಡಿಸಿದೆ. ಮಣಿಪುರದ 27 ವಿಧಾನಸಭಾ ಕ್ಷೇತ್ರಗಳ ಸಮನ್ವಯ ಸಮಿತಿಯು ಶನಿವಾರ ಬಂದ್​ಗೆ ಕರೆದಿದ್ದವು. ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಮಾರುಕಟ್ಟೆಗಳು ಮತ್ತು ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದು, ಬಂದ್​ಗೆ ಉತ್ತಮ ಪ್ರತಿಕ್ರಿಯೆ ದೊರೆತಂತಾಗಿದೆ.

ಓದಿ: ಮಣಿಪುರ ಹಿಂಸಾಚಾರ: ಆಗಸ್ಟ್​ 21ರಂದು ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಶಿಫಾರಸು

ಬಿಜೆಪಿ ಆಡಳಿತವಿರುವ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಆಗಸ್ಟ್ 3 ಗುರುವಾರದಂದು ಹಿಂಸಾಚಾರ ಭುಗಿಲೆದ್ದಿತು, ಆ ಘಟನೆಗೀಗ ಮೂರು ತಿಂಗಳುಗಳೇ ಕಳೆದು ಹೋಗಿವೆ. ಇಷ್ಟು ದಿನ ಕಳೆದರೂ ರಾಜ್ಯದಲ್ಲಿ ಇನ್ನೂ ಶಾಂತಿ ನೆಲೆಸಿಲ್ಲ. ರಾಜ್ಯದಲ್ಲಿ ಬಹುಸಂಖ್ಯಾತ ಮೈತೇಯಿ ಮತ್ತು ಅಲ್ಪಸಂಖ್ಯಾತ ಕುಕಿ ಸಮುದಾಯದ ನಡುವೆ ದ್ವೇಷದ ಗೋಡೆ ಸೃಷ್ಟಿಸಿದೆ. ಇದು ಮುಂದಿನ ದಿನಗಳಲ್ಲಿ ಮುರಿಯಲು ಕಷ್ಟಕರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.