ನವದೆಹಲಿ: ಆಪಲ್ ಮತ್ತು ಅಮೆಜಾನ್ ಟೆಕ್ ಸಪೋರ್ಟ್ಗಾಗಿ ಸೇವೆಗಳನ್ನು ಒದಗಿಸುವಂತೆ ನಟಿಸಿ ವಿದೇಶಿ ಪ್ರಜೆಗಳನ್ನು ವಂಚಿಸಿದ ಮೂರು ಅಕ್ರಮ ಕಾಲ್ ಸೆಂಟರ್ಗಳ ಮೇಲೆ ದಾಳಿ ನಡೆಸಿದ ದೆಹಲಿ ಪೊಲೀಸರು, 37 ಜನರನ್ನು ಬಂಧಿಸಿದ್ದಾರೆ.
ವಿದೇಶಿಗರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ತಾವು ಯುಎಸ್ ಡ್ರಗ್ ಎನ್ಫೋರ್ಸ್ಮೆಂಟ್ನ ಸಿಬ್ಬಂದಿಯಂದು ಎಂದು ನಟಿಸಿ ಧ್ವನಿ ರೆಕಾರ್ಡಿಂಗ್ ಕಳುಹಿಸುತ್ತಿದ್ದರು. ಬಳಿಕ ಅವರಿಂದ ಹಣ ಸುಲಿಗೆ ಮಾಡುತ್ತಿದ್ದರು.
ಜನಕ್ಪುರಿಯಲ್ಲಿ ಎರಡು ಹಾಗೂ ಬಿಂದಾಪುರದಲ್ಲಿ ಒಂದು ಅಕ್ರಮ ಕಾಲ್ ಸೆಂಟರ್ ನಡೆಸಲಾಗುತ್ತಿದೆ ಎಂಬ ರಹಸ್ಯ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ವವಸ್ಥಾಪಕರು, ಮೇಲ್ವಿಚಾರಕರು ಮತ್ತು ನಿರ್ವಾಹಕರು ಸೇರಿ ಒಟ್ಟು 37 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ 9 ಮಂದಿ ಬಿಂದಾಪುರ ಕೇಂದ್ರದಲ್ಲಿ ಮತ್ತು 28 ಮಂದಿ ಜನಕ್‌ಪುರಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು.
ಅಕ್ರಮ ಕಾಲ್ ಸೆಂಟರ್ಗಳ ವಿರುದ್ಧ ಎರಡು ಪತ್ಯೇಕ ಪ್ರಕರಣಗಳು ದಾಖಲಾಗಿದ್ದು, ಮೂರು ಕಾಲ್ ಸೆಂಟರ್ಗಳಿಂದ 56 ಡೆಸ್ಕ್‌ಟಾಪ್‌ಗಳು ಮತ್ತು 41 ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ, 10 ಕೋಟಿಗೂ ಅಧಿಕ ಜನರನ್ನು ಈವರೆಗೆ ಸಂಪರ್ಕಿಸಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಓದಿ: ಪ್ರಜಾಪ್ರಭುತ್ವದ ನಾಶ: ದೆಹಲಿ ಸರ್ಕಾರದ ತಿದ್ದುಪಡಿ ಮಸೂದೆ ಬಗ್ಗೆ ಖರ್ಗೆ ಆಕ್ರೋಶ