ಹೈದರಾಬಾದ್(ತೆಲಂಗಾಣ): ಎಂಟನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಅಂಬಾವಿಲಾಸ ಅರಮನೆಯ ಯೋಗ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಾವೂ ಯೋಗ ಮಾಡಿದರು. ದೇಶ, ವಿದೇಶಗಳಲ್ಲಿ ಗಣ್ಯರು, ಯೋಗಾಸಕ್ತರು ಸೇರಿದಂತೆ ಕೋಟ್ಯಂತರ ಮಂದಿ ಯೋಗ ಮಾಡಿದ್ದಾರೆ. ಅದರಂತೆ ಬಿಹಾರದ ಯುವಕನೋರ್ವ ತೆಲಂಗಾಣದ ಹೈದರಾಬಾದ್ನಲ್ಲಿ ಯೋಗಾಸನದ ಜೊತೆಗೆ ಹೊಸ ದಾಖಲೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಮಂಗಳೂರು: ನದಿಯಲ್ಲಿ ಸ್ಟ್ಯಾಂಡ್ ಅಪ್ ಪೆಡಲ್ ಮೇಲೆ ನಿಂತು ಯೋಗಾಸನ
ಬಿಹಾರದ ನಳಂದ ಜಿಲ್ಲೆಯ ನಿರ್ಪುರ್ ಗ್ರಾಮದ ಸೋನು ಕುಮಾರ್ ಎಂಬಾತ ಹೈದರಾಬಾದ್‌ನ ಚಾರ್ಮಿನಾರ್ ಎದುರು ಬರೋಬ್ಬರಿ 3 ಗಂಟೆ, 3 ನಿಮಿಷ, 33 ಸೆಕೆಂಡುಗಳ ಕಾಲ ಶಿರಸಾಸನ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಕಳೆದ 6 ವರ್ಷಗಳಿಂದ ದಿನಕ್ಕೆ ಕೆಲವು ನಿಮಿಷಗಳ ಕಾಲ ಯೋಗ ಅಭ್ಯಾಸ ನಡೆಸುತ್ತಿದ್ದ ಯುವಕ ಇಂದು ಮುತ್ತಿನನಗರಿಯಲ್ಲಿರುವ ಚಾರ್ಮಿನಾರ್ಗೆ ಬಂದು ಯೋಗ ಮಾಡಿದ್ದಾರೆ.