ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಷಕಾರಿ ಅನಿಲ ಸೇವನೆ ಅಪ್ರಾಪ್ತ ವಯಸ್ಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಕೆಯಾಗದ ಸೆಪ್ಟಿಕ್ ಟ್ಯಾಂಕ್‌ನ ಶಟರಿಂಗ್ ತೆಗೆಯುತ್ತಿದ್ದ ವೇಳೆ ದುರಂತ ಸಂಭವಿಸಿದೆ.
ಮೃತರನ್ನು ಕಾನ್ಪುರದ ಚೌಬೆಪುರ ನಿವಾಸಿಗಳಾದ ನಂದು (18), ಅವರ ಹಿರಿಯ ಸಹೋದರ ಮೋಹಿತ್ (24) ಮತ್ತು ಅವರ ನೆರೆಯ ಸಾಹಿಲ್ (16) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂದು ಮತ್ತು ಮೋಹಿತ್ ಅವರು ಸೆಪ್ಟಿಕ್ ಟ್ಯಾಂಕ್‌ಗಳನ್ನು ಮುಚ್ಚುವ ಕೆಲಸವನ್ನು ಕೈಗೊಳ್ಳುತ್ತಿದ್ದರು ಮತ್ತು ಸಾಹಿಲ್ ಇವರಿಗೆ ಸಹಾಯ ಮಾಡುತ್ತಿದ್ದರು ಎಂದು ಉಪ ಪೊಲೀಸ್ ಕಮಿಷನರ್ ವಿಜಯ್ ಧುಲ್ ಹೇಳಿದ್ದಾರೆ.
ಇವರೆಲ್ಲ ಕೆಲವು ತಿಂಗಳ ಹಿಂದೆ ನಿರ್ಮಿಸಿದ ಬಳಕೆಯಾಗದ ಸೆಪ್ಟಿಕ್ ಟ್ಯಾಂಕ್‌ನಿಂದ ಶಟರ್ ತೆಗೆಯಲು ಬಿತ್ತೂರು ಪ್ರದೇಶಕ್ಕೆ ಹೋಗಿದ್ದರು ಎಂದು ಧುಲ್ ಮಾಹಿತಿ ನೀಡಿದ್ದಾರೆ. ಮೊದಲಿಗೆ, ಸಾಹಿಲ್ ಟ್ಯಾಂಕ್ ಪ್ರವೇಶಿಸಿ ಪ್ರಜ್ಞೆ ಕಳೆದುಕೊಂಡರು. ನಂದು ಮತ್ತು ಮೋಹಿತ್ ರಕ್ಷಿಸಲು ಪ್ರಯತ್ನಿಸಿದರು. ಆದರೆ, ಅವರೂ ಪ್ರಜ್ಞೆ ತಪ್ಪಿದರು ಎಂದು ಧುಲ್ ಹೇಳಿದರು. ಅಗ್ನಿಶಾಮಕ ದಳದವರು ಟ್ಯಾಂಕ್ ಒಡೆದು ಮೂವರನ್ನು ರಕ್ಷಿಸುವ ಯತ್ನ ಮಾಡಿದ್ದಾರೆ.
ಸಾಹಿಲ್ ನನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಇದನ್ನು ಓದಿ:ಗುಜರಾತ್ ಸೇತುವೆ ದುರಂತ: ಮಡಿದವರ ಸಂಖ್ಯೆ 100ಕ್ಕೆ ಏರಿಕೆ: ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ