ETV Bharat / bharat

ಉತ್ತರ ಪ್ರದೇಶ: ತಾಯಿ, ಮಗಳ ಕೊಂದ ಮೂವರು ಸಹೋದರರ ಬಂಧನ - Brothers killed mother and daughter

ವಿವಾಹಿತ ಮಹಿಳೆಯ ಜೊತೆ ಅಕ್ರಮ ಸ್ನೇಹ ಬೆಳೆಸಿದ್ದ ಟೆಂಟ್​ ಹೌಸ್​ ಮಾಲೀಕ ಇರ್ಫಾನ್​ ಆಕೆಯ ಮಗಳನ್ನು ಕಂಡು ಆಕೆಯ ಮೇಲೂ ಕಣ್ಣು ಹಾಕಿದ್ದಾನೆ. ಇದರಿಂದ ಪ್ರಾರಂಭವಾದ ಜಗಳದಲ್ಲಿ ಮೂವರು ದುರುಳ ಸಹೋದರರು ತಾಯಿ ಮಗಳ ಪ್ರಾಣ ತೆಗೆದಿದ್ದಾರೆ.

3 brothers in UP held for killing mother, daughter
ತಾಯಿ ಮಗಳನ್ನು ಕೊಂದ ಮೂವರು ಸಹೋದರರ ಬಂಧನ
author img

By

Published : Jul 4, 2022, 10:11 AM IST

ಸುಲ್ತಾನ್‌ಪುರ (ಉತ್ತರ ಪ್ರದೇಶ): ಓರ್ವ ಮಹಿಳೆ ಹಾಗೂ ಆಕೆಯ 21 ವರ್ಷದ ಮಗಳನ್ನು ಕೊಲೆಗೈದ ಪ್ರಕರಣದಲ್ಲಿ ಸುಲ್ತಾನ್‌ಪುರ ಪೊಲೀಸರು ಟೆಂಟ್ ಹೌಸ್ ಮಾಲೀಕ ಮತ್ತು ಆತನ ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ. ಬಂಧಿತ ಸಹೋದರರನ್ನು ಇರ್ಫಾನ್ (ಟೆಂಟ್ ಹೌಸ್ ಮಾಲೀಕ), ಸದನ್ ಮತ್ತು ಶೆಹಜಾದ್ ಎಂದು ಗುರುತಿಸಲಾಗಿದೆ. ಶಕುಂತಲಾ (40) ಹಾಗೂ ಪುತ್ರಿ ವಿಜಯಲಕ್ಷ್ಮಿ ಹತ್ಯೆಯಾದವರು.

ಮೃತ ಮಹಿಳೆ ಶಕುಂತಲಾ ಪತಿ ತರಕಾರಿ ಮಾರಾಟಗಾರರಾಗಿದ್ದಾರೆ. ದೈನಂದಿನ ಅಗತ್ಯಗಳನ್ನು ಪೂರೈಸುವುದು ಈ ಬಡ ಕುಟುಂಬಕ್ಕೆ ಕಷ್ಟಕರವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಇರ್ಫಾನ್,​ ಮಹಿಳೆಯ ಜೊತೆ ಸಲುಗೆ ಬೆಳೆಸಿಕೊಂಡು, ಆಕೆಗಾಗಿ ಸಾಕಷ್ಟು ಹಣ ವ್ಯಯಿಸುತ್ತಿದ್ದ. ತನ್ನ ಐಷಾರಾಮಿ ಕಾರಿನಲ್ಲಿ ಕರೆದುಕೊಂಡು ಹೋಗುವುದು ಇತ್ಯಾದಿ ಮಾಡುತ್ತಿದ್ದ. ಆದರೆ ಒಂದು ಬಾರಿ ಆಕೆಯ 21 ವರ್ಷದ ಮಗಳನ್ನು ಭೇಟಿಯಾದ ಇರ್ಫಾನ್​, ಮಗಳನ್ನೂ ತನ್ನೊಂದಿಗೆ ಇರಲು ಅನುಮತಿ ನೀಡುವಂತೆ ಕೇಳಿಕೊಂಡಿದ್ದಾನೆ. ಈ ಪ್ರಸ್ತಾಪವನ್ನು ತಾಯಿ ತಿರಸ್ಕರಿಸಿದ್ದಳು. ಈ ವಿಷಯಕ್ಕೆ ಶಕುಂತಲಾ ಹಾಗೂ ಇರ್ಫಾನ್​ ನಡುವಿನ ಸಂಬಂಧ ಹದಗೆಟ್ಟು ಜಗಳ ಪ್ರಾರಂಭವಾಗಿದೆ.

ಆಗ ಇರ್ಫಾನ್​ ತನ್ನ ಇಬ್ಬರು ಸಹೋದರರೊಂದಿಗೆ ಸೇರಿ ಮಹಿಳೆ ಹಾಗೂ ಆಕೆಯ ಮಗಳನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ. ಜೂನ್​ 29ರಂದು ಇರ್ಫಾನ್​ ಇಬ್ಬರು ಸಹೋದರರು ಮಹಿಳೆಯ ಪತಿ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ನುಗ್ಗಿದ್ದಾರೆ. ಸದನ್‌ಗೆ ಮನೆ ಬಾಗಲು ಬಳಿ ಕಾವಲು ಕಾಯಲು ಹೇಳಿ, ಇಬ್ಬರು ಮನೆ ಒಳಗೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

"ನಾನು ಶಕುಂತಲಾ ಬಳಿ ಮಗಳು ವಿಜಯಲಕ್ಷ್ಮಿಯನ್ನು ತನಗೆ ಮದುವೆ ಮಾಡಿಸಿಕೊಡುವಂತೆ ಕೇಳಿಕೊಂಡಿದ್ದೆ. ಆಕೆಯ ಶಿಕ್ಷಣಕ್ಕೆ ಬೇಕಾದ ಹಣ, ಐಷಾರಾಮಿ ಜೀವನ ಒದಗಿಸುವುದಾಗಿಯೂ ಹೇಳಿದ್ದೆ. ಆದರೆ ಆಕೆ ಇದನ್ನು ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡು ನಾನು ಕೊಟ್ಟ ಹಣವನ್ನೆಲ್ಲಾ ವಾಪಸ್ಸು ಕೊಡುವಂತೆ ಕೇಳಿದೆ. ಇದರಿಂದ ಜಗಳವಾಗಿ, ಕೋಪದಲ್ಲಿ ನಾನು ಮಚ್ಚಿನಿಂದ ಆಕೆಯ ಕತ್ತು ಸೀಳಿದೆ. ಇದನ್ನು ಕಂಡು ಕಿರುಚಿ ಓಡಲು ಪ್ರಯತ್ನಿಸಿದ ವಿಜಯಲಕ್ಷ್ಮಿಯನ್ನು ಕೂಡ ಹಿಡಿದು ಕೊಲೆ ಮಾಡಿದೆವು" ಎಂದು ಇರ್ಫಾನ್​ ವಿಚಾರಣೆ ವೇಳೆ ತಿಳಿಸಿದ್ದಾನೆ.

ಇರ್ಫಾನ್ ಮತ್ತು ಶಕುಂತಲಾ ನಡುವೆ 500ಕ್ಕೂ ಹೆಚ್ಚು ಕರೆಗಳು ವಿನಿಮಯವಾಗಿರುವುದು ಇರ್ಫಾನ್ ಕಾಲ್​ ಹಿಸ್ಟರಿಯಲ್ಲಿ ಗೊತ್ತಾಗಿದೆ. ಪೊಲೀಸರು ಆರೋಪಿಗಳಿಂದ ಹತ್ಯೆಗೆ ಬಳಸಿದ್ದ ಮಚ್ಚನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇಬ್ಬರು ವಿಕಲಚೇತನರ ನಡುವೆ ದ್ವೇಷ.. ಓರ್ವನಿಗೆ ಚಾಕುವಿನಿಂದ ಇರಿದು ಕೊಲೆ ಯತ್ನ - ಸಿಸಿಟಿವಿಯಲ್ಲಿ ಕೃತ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.