ಶಹಜಹಾನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ 27 ವರ್ಷಗಳ ಹಿಂದೆ ನಡೆದ ಗ್ಯಾಂಗ್ರೇಪ್ ಪ್ರಕರಣಕ್ಕೆ ಡಿಎನ್ಎ ಪರೀಕ್ಷೆ ಜೀವಕೊಟ್ಟಿದೆ. ಇದರಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ 24 ವರ್ಷದ ಮಗನಿಗೆ ತನ್ನ ತಂದೆ ಯಾರು ಎಂಬುವುದು ಗೊತ್ತಾಗಿದೆ.
12 ವರ್ಷದ ಬಾಲಕಿಯಾಗಿದ್ದಾಗ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿತ್ತು. ಇದರಿಂದ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದರು. ಆದರೆ, ಈಗ ಮಗ ಬೆಳೆದು ನಿಂತಿದ್ದಾನೆ. ತನ್ನ ತಂದೆ ಯಾರೆಂದು ತಿಳಿಯಲು ಆತ ಬಯಸಿದ್ದಾನೆ. ಹೀಗಾಗಿ ಸಂತ್ರಸ್ತೆ ಡಿಎನ್ಎ ಪರೀಕ್ಷೆಗಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಡಿಎನ್ಎ ಪರೀಕ್ಷೆಯ ವರದಿ ಬಂದಿದೆ. ಅತ್ಯಾಚಾರ ಆರೋಪಿಗಳಲ್ಲಿ ಒಬ್ಬನಾದ ಗುಡ್ಡು ಎಂಬಾತನೇ ಮಗುವಿನ ತಂದೆ ಎಂದು ಖಚಿತವಾಗಿದೆ.
1994ರಲ್ಲಿ ನಡೆದಿದ್ದ ಪ್ರಕರಣ: 1994ರಲ್ಲಿ ಸಂತ್ರಸ್ತೆ ತಮ್ಮ ಸಹೋದರಿ ಮತ್ತು ಸೋದರ ಮಾವನೊಂದಿಗೆ ವಾಸಗಾಗಿದ್ದರು. ಈ ಸಮಯದಲ್ಲಿ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಇಬ್ಬರು ಸಹೋದರರು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದರು. ಇದರಿಂದ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದರು. ಮಗುವನ್ನು ಬೇರೆೊಬ್ಬರಿಗೆ ಒಪ್ಪಿಸಿ ಕುಟುಂಬವು ರಾಂಪುರಕ್ಕೆ ವಲಸೆ ಹೋಗಿತ್ತು. ನಂತರ ಆಕೆಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಡಲಾಗಿದೆ. ಆದರೆ, ಮದುವೆಯಾದ 10 ವರ್ಷಗಳ ನಂತರ ಈಕೆ ಚಿಕ್ಕ ವಯಸ್ಸಿನಲ್ಲೇ ದೌರ್ಜನ್ಯಕ್ಕೊಳಗಾಗಿದ್ದಳು ಎಂಬುವುದು ಗಂಡನಿಗೆ ಗೊತ್ತಾಗಿದೆ. ಹೀಗಾಗಿಯೇ ಆತ ವಿಚ್ಛೇದನ ಕೊಟ್ಟಿದ್ಧ.
ಈ ನಡುವೆ ಈಕೆಯಿಂದ ಜನ್ಮ ಪಡೆದಿದ್ದ ಮಗ ಬೆಳೆದು ದೊಡ್ಡನಾಗಿದ್ದು, ತಾಯಿಯನ್ನು ಭೇಟಿ ಮಾಡಿ ತನ್ನ ತಂದೆಯ ಕುರಿತು ವಿಚಾರಿಸಲು ಆರಂಭಿಸಿದ್ದಾನೆ. ಈಗ ಡಿಎನ್ಎ ಪರೀಕ್ಷೆಯಲ್ಲಿ ಆರೋಪಿ ಯಾರೆಂಬುವುದು ಗೊತ್ತಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ತರಗತಿಯಲ್ಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಕಣ್ಣೂರಿನ ಶಿಕ್ಷಕನಿಗೆ 79 ವರ್ಷ ಕಠಿಣ ಜೈಲು ಶಿಕ್ಷೆ