ETV Bharat / bharat

ಅಕ್ರಮವಾಗಿ ಭಾರತ ಪ್ರವೇಶಿಸಿದ 26 ರೋಹಿಂಗ್ಯಾಗಳ ಬಂಧನ - ಅಸ್ಸೋಂನಲ್ಲಿ ರೋಹಿಂಗ್ಯಾಗಳ ಬಂಧನ

ಉದ್ಯೋಗ ಹುಡುಕಿಕೊಂಡು ಭಾರತಕ್ಕೆ ಅಕ್ರಮವಾಗಿ ಬಂಧಿದ್ದ ಮ್ಯಾನ್ಮಾರ್​ನ 26 ರೋಹಿಂಗ್ಯಾಗಳನ್ನು ಅಸ್ಸೋಂ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ..

26-suspected-rohingya-without
ರೋಹಿಂಗ್ಯಾಗಳ ಬಂಧನ
author img

By

Published : May 30, 2022, 6:51 PM IST

ಸಿಲ್ಚಾರ್(ಅಸ್ಸೋಂ): ಅಕ್ರಮ ಪ್ರವೇಶಕ್ಕೆ ಕಡಿವಾಣ ಹಾಕಿದ್ದರೂ ಉದ್ಯೋಗ ಅರಸಿ ಅಸ್ಸೋಂ ಪ್ರವೇಶಿಸಿದ್ದ ಮ್ಯಾನ್ಮಾರ್​ನ 26 ರೋಗಿಂಗ್ಯಾಗಳನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೂರು ಕುಟುಂಬಗಳಿಗೆ ಸೇರಿದ 26 ರೋಹಿಂಗ್ಯಾಗಳು ಯಾವುದೇ ದಾಖಲೆ ಇಲ್ಲದೇ ಮೂರು ವಾಹನಗಳಲ್ಲಿ ಆಗಮಿಸಿದ್ದರು. ಇವರು ಮೊದಲು ಜಮ್ಮುವಿನಿಂದ ಅಸ್ಸೋಂಗೆ ತೆರಳಲು ಕಾಮಾಖ್ಯ ರೈಲು ನಿಲ್ದಾಣಕ್ಕೆ ಹೊರಟಿದ್ದಾಗ ಪೊಲೀಸರು ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ, ಯಾವುದೇ ದಾಖಲೆ ಇಲ್ಲದೇ ಅಕ್ರಮವಾಗಿ ದೇಶ ಪ್ರವೇಶಿಸಿದ್ದಕ್ಕಾಗಿ ರೋಹಿಂಗ್ಯಾಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಬಂಧಿತ ವ್ಯಕ್ತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದರಲ್ಲಿ 6 ಪುರುಷರು ಮತ್ತು 6 ಮಹಿಳೆಯರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ 7 ಮಕ್ಕಳನ್ನು ಮಹಿಳೆಯ ಜೊತೆಗೆ ಇರಲು ಅನುವು ಮಾಡಿಕೊಡಲಾಗಿದೆ. ಇವರನ್ನು ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರು ಸ್ಥಳೀಯರ ಸಂಪರ್ಕ ಹೊಂದಿರಬಹುದು, ಕೆಲಸ ಕೊಡಿಸುವ ಭರವಸೆ ನೀಡಿದ ಕಾರಣ ಅವರು ಭಾರತಕ್ಕೆ ಬಂದಿದ್ದಾರೆ. ಆ ವ್ಯಕ್ತಿಗಳನ್ನು ಪತ್ತೆಹಚ್ಚಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ಮೂರು ಕುಟುಂಬಗಳು ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಗಡಿಯ ಮೂಲಕ ದೇಶವನ್ನು ಪ್ರವೇಶಿಸಿದ್ದರು.

ಆರಂಭದಲ್ಲಿ ಜಮ್ಮುವಿಗೆ ತೆರಳುವ ಮೊದಲು ಮಾಲ್ಡಾದಲ್ಲಿ ಆಶ್ರಯ ಪಡೆದಿದ್ದರು. ಬಳಿಕ ಉದ್ಯೋಗ ಹುಡುಕಿಕೊಂಡು ಅಸ್ಸೋಂಗೆ ಬಂದಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಇದು ಮಾದರಿ.. ಜಾತಿ-ಧರ್ಮವಿಲ್ಲದ ಸರ್ಟಿಫಿಕೇಟ್​ ನೀಡಿ ಮಗಳನ್ನು ಶಾಲೆಗೆ ದಾಖಲಿಸಿದ ಪೋಷಕರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.