ETV Bharat / bharat

ಲಕ್ಷ್ಮಿ ಪೂಜೆಗೆ 24 ಕ್ಯಾರೆಟ್​ ಚಿನ್ನ ಲೇಪಿತ ವಿಶೇಷ ಸ್ವೀಟ್ಸ್​: ಕೆಜಿಗೆ 12,000 ರೂಪಾಯಿ

Gold Foil Special sweets for Lakshmi Puja: ಲಕ್ಷ್ಮಿ ಪೂಜೆಗೆ ಚಿನ್ನ ಲೇಪಿತ ಸಿಹಿತಿಂಡಿಯನ್ನು ಇಡುವುದರಿಂದ ಲಾಭವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ.

Gold Foil Special sweets for Lakshmi Puja:
ಲಕ್ಷ್ಮೀ ಪೂಜೆಗೆ 24 ಕ್ಯಾರೆಟ್​ ಚಿನ್ನ ಲೇಪಿತ ವಿಶೇಷ ಸ್ವೀಟ್ಸ್
author img

By ETV Bharat Karnataka Team

Published : Nov 10, 2023, 8:09 PM IST

ಲಕ್ಷ್ಮೀ ಪೂಜೆಗೆ 24 ಕ್ಯಾರೆಟ್​ ಚಿನ್ನ ಲೇಪಿತ ವಿಶೇಷ ಸ್ವೀಟ್ಸ್

ರಾಜ್​ಕೋಟ್​: ಎಲ್ಲೆಡೆಯೂ ಬೆಳಕಿನ ಹಬ್ಬ ದೀಪಾವಳಿಗೆ ಸಂಭ್ರಮ, ಸಡಗರದಿಂದ ಭರದ ತಯಾರಿ ನಡೆಯುತ್ತಿದೆ. ಹಬ್ಬದಲ್ಲಿ ಅಲಂಕಾರ, ಪಟಾಕಿ ಎಷ್ಟು ಆಕರ್ಷಕವೋ, ಅಂತೆಯೇ ಬಗೆ ಬಗೆಯ ಸಿಹಿತಿಂಡಿಗಳು ಇನ್ನೂ ಆಕರ್ಷಕವಾಗಿರುತ್ತದೆ. ಇಲ್ಲೊಬ್ಬರು ರಾಜ್​ಕೋಟ್​ನ ಧೋರಾಜಿಯಲ್ಲಿರುವ ಗೌತಮ್​ ಸ್ವೀಟ್ಸ್​ ಮಳಿಗೆಯ ಮಾಲೀಕರು 24 ಕ್ಯಾರೆಟ್​ ಚಿನ್ನದ ಲೇಪ(Foil) ಇರುವ ಸ್ವೀಟ್ಸ್​ ತಯಾರಿಸಿದ್ದಾರೆ.

ಈ ಸಿಹಿತಿಂಡಿಗೆ ಕೆಜಿಗೆ 12,000 ರೂ ಬೆಲೆ. ಕಾಜೂ ಗೋಲ್ಡನ್​ ಶೀಲ್ಡ್​, ಗೋಲ್ಡನ್​ ಬಾದಾಮಿ, ವಾಲ್ನಟ್​, ಪಿಸ್ತಾ, ಹಾಗೂ ಅಂಜೂರದ ಹಣ್ಣಗಳನ್ನು ವಿಶೇಷವಾಗಿ ಬಳಸಿ ಚಿನ್ನದ ಲೇಪಿತ ಸಿಹಿತಿಂಡಿಗಳನ್ನು ತಯಾರಿಸಲಾಗಿದೆ. ಧೋರಾಜಿ ಪಂಥಕ್​ ಹಾಗೂ ರಾಜ್​ಕೋಟ್​ ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಈ ರೀತಿ ಚಿನ್ನದ ಲೇಪಿತ ಸಿಹಿತಿಂಡಿಯನ್ನು ತಯಾರಿಸಲಾಗಿದೆ. ಈ ಸಿಹಿಯನ್ನು ವಿಶೇಷವಾಗಿ ಲಕ್ಷ್ಮಿ ಪೂಜೆಯಲ್ಲಿ ಬಳಸಲಾಗುತ್ತದೆ.

ಐದು ಬಗೆಯ ಡ್ರೈ ಫ್ರುಟ್ಸ್​ ಹಾಕಿ ತಯಾರಿಸಿರುವ ಈ 24 ಕ್ಯಾರೆಟ್​ ಚಿನ್ನ ಲೇಪಿತ ಈ ವಿಶೇಷ ಸಿಹಿತಿಂಡಿಯನ್ನು ಲಕ್ಷ್ಮಿ ಪೂಜೆಯ ವೇಳೆ ಇಡಲಾಗುತ್ತದೆ. ವೃತ್ತಿಯಲ್ಲಿ ವ್ಯಾಪಾರಿಗಳು, ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಈ ವಿಶೇಷ ಸಿಹಿತಿಂಡಿಯನ್ನು ಇಡುವುದರಿಂದ ಮುಂದೆ ವ್ಯಾಪಾರದಲ್ಲಿ ಹೆಚ್ಚು ಲಾಭವಾಗುತ್ತದೆ ಎಂದು ನಂಬಲಾಗುತ್ತದೆ ಎಂದು ಈ ಸಿಹಿತಿಂಡಿಯನ್ನು ತಯಾರಿಸಿದ ಅಂಗಡಿ ಮಾಲೀಕ ಹೇಳುತ್ತಾರೆ.

ಈ 24 ಕ್ಯಾರೆಟ್​ ಚಿನ್ನದ ಲೇಪವಿರುವ ಸ್ವೀಟ್ಸ್​ ಧೋರಜಿಯ ಸ್ಟೇಷನ್​ ರಸ್ತೆಯಲ್ಲಿರುವ ಗೌತಮ್​ ಸ್ವೀಟ್ಸ್​ನಲ್ಲಿ ದೊರೆಯುತ್ತದೆ. ಒಂದು ಕೆಜಿ ಸ್ವೀಟ್ಸ್​ ಖರೀದಿಸಲು ಸಾಧ್ಯವಾಗದೇ ಇರುವವರು ಲಕ್ಷ್ಮಿ ಪೂಜೆಗೆ 250 ಗ್ರಾಂ ಖರೀದಿಸಿ ಲಕ್ಷ್ಮೀ ಪೂಜೆಗೆ ಇಡುತ್ತಾರೆ.

ಇದನ್ನೂ ಓದಿ: ದೀಪಾವಳಿ: ಕೈದಿಗಳಿಂದ ರುಚಿರುಚಿಯಾದ ಸಿಹಿತಿಂಡಿ ತಯಾರಿ, ಮಾರಾಟ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.